Advertisement

ಆಸ್ಟ್ರೇಲಿಯನ್‌ ಓಪನ್‌: 4ನೇ ಸುತ್ತಿಗೆ ಐಗಾ ಸ್ವಿಯಾಟೆಕ್‌

10:59 PM Jan 20, 2023 | Team Udayavani |

ಮೆಲ್ಬರ್ನ್: ಅಗ್ರ ಶ್ರೇಯಾಂಕದ ಐಗಾ ಸ್ವಿಯಾಟೆಕ್‌, ಅಮೆರಿಕದ ಕೊಕೊ ಗಾಫ್ ಆಸ್ಟ್ರೇಲಿಯನ್‌ ಓಪನ್‌ ಟೂರ್ನಿಯ 4ನೇ ಸುತ್ತು ಪ್ರವೇಶಿಸಿದ್ದಾರೆ.

Advertisement

ಐಗಾ ಸ್ವಿಯಾಟೆಕ್‌ 6-0, 6-1 ಅಂತರದಿಂದ ಸ್ಪೇನ್‌ನ 100ನೇ ರ್‍ಯಾಂಕಿಂಗ್‌ ಆಟಗಾರ್ತಿ ಕ್ರಿಸ್ಟಿನಾ ಬುಕ್ಸಾ ಅವರಿಗೆ ಸೋಲುಣಿಸಿದರು. ಅಂತರ 6-0, 6-1. ಸ್ವಿಯಾಟೆಕ್‌ ಅವರಿನ್ನು ವಿಂಬಲ್ಡನ್‌ ಚಾಂಪಿಯನ್‌ ಎಲೆನಾ ರಿಬಾಕಿನಾ ಸವಾಲನ್ನು ಎದುರಿಸಬೇಕಿದೆ. ರಿಬಾಕಿನಾ ಕಳೆದ ವರ್ಷದ ಫೈನಲಿಸ್ಟ್‌ ಡೇನಿಯಲ್‌ ಕಾಲಿನ್ಸ್‌ಗೆ 6-2, 5-7, 6-2 ಅಂತರದ ಸೋಲುಣಿಸಿದರು.

ಅಮೆರಿಕದ ಕೊಕೊ ಗಾಫ್ 6-3, 6-2ರಿಂದ ತಮ್ಮದೇ ದೇಶದ ಬರ್ನಾರ್ಡ್‌ ಪೆರಾ ಅವರನ್ನು ಮಣಿಸಿದರು. ಅಮೆರಿಕದ ಮತ್ತೋರ್ವ ಆಟಗಾರ್ತಿ ಜೆಸ್ಸಿಕಾ ಪೆಗುಲಾ ಉಕ್ರೇನ್‌ನ ಮಾರ್ತಾ ಕೋಸ್ಟುéಕ್‌ ಅವರನ್ನು 6-0, 6-2ರಿಂದ ಹಿಮ್ಮೆಟ್ಟಿಸಿದರು.

ಪುರುಷರ ಸಿಂಗಲ್ಸ್‌ನಲ್ಲಿ ಗ್ರೀಕ್‌ನ ಸ್ಟೆಫ‌ನಸ್‌ ಸಿಸಿಪಸ್‌ ನೆದರ್ಲೆಂಡ್ಸ್‌ನ ಟ್ಯಾಲನ್‌ ಗ್ರೀಕ್‌ಸ್ಪೂರ್‌ ವಿರುದ್ಧ 6-2, 7-6 (5) ಅಂತರದ ಜಯ ಸಾಧಿಸಿದರು. ಇಟಲಿಯ ಜಾನಿಕ್‌ ಸಿನ್ನರ್‌ ಕೂಡ 4ನೇ ಸುತ್ತು ಪ್ರವೇಶಿಸಿದ್ದಾರೆ.

ಮೆಡ್ವೆಡೇವ್‌ ಪರಾಭವ
ಎರಡು ಬಾರಿಯ ರನ್ನರ್ ಅಪ್‌ ಡ್ಯಾನಿಲ್‌ ಮೆಡ್ವೆಡೇವ್‌ ಅವರ ಆಟ 3ನೇ ಸುತ್ತಿಗೆ ಮುಗಿದಿದೆ. ಅವರನ್ನು 22 ವರ್ಷದ ಅಮೆರಿಕನ್‌ ಟೆನಿಸಿಗ ಸೆಬಾಸ್ಟಿಯನ್‌ ಕೋರ್ಡ 7-6 (7), 6-3, 7-6 (4)ರಿಂದ ಹಿಮ್ಮೆಟ್ಟಿಸಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next