Advertisement

ಪೋಲಂಡಿನ ಇಗಾ ಸ್ವಿಯಾಟೆಕ್‌ ಫ್ರೆಂಚ್‌ ಓಪನ್‌ ಚಾಂಪಿಯನ್‌

11:44 PM Jun 04, 2022 | Team Udayavani |

ಪ್ಯಾರಿಸ್‌: ಅಮೋಘ ಆಟದ ಪ್ರದರ್ಶನ ನೀಡಿದ ಪೋಲಂಡಿನ ಇಗಾ ಸ್ವಿಯಾಟೆಕ್‌ ಅವರು ಫ್ರೆಂಚ್‌ ಓಪನ್‌ ಟೆನಿಸ್‌ ಕೂಟದ ವನಿತೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

Advertisement

ಶನಿವಾರ ನಡೆದ ಫೈನಲ್‌ ಸಮರದಲ್ಲಿ ಅವರು ಅಮೆರಿಕದ ಕೊಕೊ ಗಾಫ್ ಅವರನ್ನು 6-1, 6-3 ನೇರ ಸೆಟ್‌ಗಳಿಂದ ಉರುಳಿಸಿದರು.

ಈ ಗೆಲುವಿನಿಂದ ಸ್ವಿಯಾಟೆಕ್‌ ಈ ಋತುವಿನಲ್ಲಿ 42 ಗೆಲುವು ಮತ್ತು 3 ಸೋಲಿನ ಸಾಧನೆ ಮಾಡಿದ್ದಾರೆ. ಈ ಸಾಧನೆ ವೇಳೆ ಅವರು ಆರು ಕೂಟಗಳಲ್ಲಿ ಪ್ರಶಸ್ತಿ ಜಯಿಸಿದ್ದರು. ಸ್ವಿಯಾಟೆಕ್‌ ಈ ಹಿಂದೆ 2017ರ ಫೆಬ್ರವರಿಯಲ್ಲಿ ಜೆಲೆನಾ ಒಸ್ಟಾಪೆಂಕೊ ಅವರೆದುರು ಸೋಲನ್ನು ಕಂಡಿದ್ದರು.

ವಿಶ್ವದ ನಂಬರ್‌ ವನ್‌ ಆಟಗಾರ್ತಿ ಸ್ವಿಯಾಟೆಕ್‌ ಈ ಗೆಲುವಿನ ಮೂಲಕ ತನ್ನ ಸತತ ಗೆಲುವಿನ ಸಾಧನೆಯನ್ನು 35 ಪಂದ್ಯಗಳಿಗೆ ವಿಸ್ತರಿಸಿದರಲ್ಲದೇ ವೀನಸ್‌ ವಿಲಿಯಮ್ಸ್‌ ಸಾಧನೆಯನ್ನು ಸಮಗಟ್ಟಿದರು.

ಸ್ವಿಯಾಟೆಕ್‌ ಅವರಿಗಿದು ಎರಡನೇ ಫ್ರೆಂಚ್‌ ಓಪನ್‌ ಪ್ರಶಸ್ತಿಯಾಗಿದೆ. ಅವರು ಈ ಮೊದಲು 2020ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದರು.

Advertisement

ಅಮೆರಿಕದ 18ರ ಹರೆಯದ ಗಾಫ್ ಫೈನಲ್‌ನಲ್ಲಿ ಯಾವುದೇ ಹೋರಾಟದ ನೀಡದೇ ಸ್ವಿಯಾಟೆಕ್‌ಗೆ ಶರಣಾಗಿದ್ದರು. ಈ ಕೂಟದಲ್ಲಿ ಯಾವುದೇ ಸೆ‌ಟ್‌ ಕಳೆದುಕೊಳ್ಳದ ಗಾಫ್ ಫೈನಲ್‌ನಲ್ಲಿ ನೀರಸವಾಗಿ ಆಡಿದರು. ಗಾಫ್ ಅವರು 18 ವರ್ಷಗಳ ಹಿಂದೆ ಮರಿಯಾ ಶರಪೋವಾ ಬಳಿಕ ಗ್ರ್ಯಾನ್‌ ಸ್ಲಾಮ್‌ ಫೈನಲಿಗೇರಿದ ಅತೀ ಕಿರಿಯ ಆಟಗಾರ್ತಿ ಎನಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next