ಕರಾಚಿ: ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್ಎಲ್) ನ ಎಂಟನೇ ಸೀಸನ್ ಫೆಬ್ರವರಿ 13 ರಿಂದ ಪ್ರಾರಂಭವಾಗಲಿದ್ದು, ಭಾನುವಾರ ಕ್ವೆಟ್ಟಾದ ಬುಗ್ಟಿ ಸ್ಟೇಡಿಯಂನಲ್ಲಿ ಕ್ವೆಟ್ಟಾ ಗ್ಲಾಡಿಯೇಟರ್ಸ್ ಮತ್ತು ಪೇಶಾವರ್ ಝಲ್ಮಿ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಭರ್ಜರಿಯಾಗಿ ಬ್ಯಾಟ್ ಬೀಸಿದ ಪಾಕಿಸ್ಥಾನದ ಆಲ್ ರೌಂಡರ್ ಇಫ್ತಿಕಾರ್ ಅಹಮದ್ ಅವರು ಒಂದೇ ಓವರ್ ನಲ್ಲಿ ಆರು ಸಿಕ್ಸರ್ ಬಾರಿಸಿ ಗಮನ ಸೆಳೆದರು.
ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರವಾಗಿ ಆಡಿದ ಇಫ್ತಿಕಾರ್ ಅಹಮದ್ 50 ಎಸೆತಗಳಲ್ಲಿ 94 ರನ್ ಬಾರಿಸಿದರು. ಅದರಲ್ಲೂ ವಾಹಬ್ ರಿಯಾಜ್ ಓವರ್ ನ ಎಲ್ಲಾ ಆರು ಎಸೆತಗಳನ್ನು ಸಿಕ್ಸರ್ ಗೆ ಬಾರಿಸಿದ್ದು ವಿಶೇಷವಾಗಿತ್ತು.
ಇದನ್ನೂ ಓದಿ:ಶರಣ್ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಘೋಷಣೆ; ಅರವಿಂದ್ ಕುಪ್ಲಿಕರ್ ನಿರ್ದೇಶನ
ಪ್ರದರ್ಶನ ಪಂದ್ಯದಲ್ಲಿ ಟಾಸ್ ಗೆದ್ದ ಝುಲ್ಮಿ ನಾಯಕ ಬಾಬರ್ ಅಜಂ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿದರು. ವಾಹಬ್ ದಾಳಿಗೆ ಕುಸಿದ ಗ್ಲಾಡಿಯೇಟರ್ಸ್ ತಂಡವು ಮೊದಲ 19 ಓವರ್ ಗಳಲ್ಲಿ 148 ರನ್ ಮಾಡಿತ್ತು. ವಾಹಬ್ ರಿಯಾಜ್ ಮೊದಲ ಮೂರು ಓವರ್ ಗಳಲ್ಲಿ ಕೇವಲ 11 ರನ್ ನೀಡಿ ಮೂರು ವಿಕೆಟ್ ಕಿತ್ತಿದ್ದರು. ಆದರೆ 20ನೇ ಓವರ್ ನಲ್ಲಿ ಎಲ್ಲಾ ಲೆಕ್ಕಾಚಾರಗಳು ಬದಲಾಯಿತು.
Related Articles
ಕೊನೆಯ ಓವರ್ ನ ಎಲ್ಲಾ ಆರು ಎಸೆತಗಳು ಬೌಂಡರಿ ದಾಟಿ ಹೋದವು. ಇಫ್ತಿಕಾರ್ ಸಾಹಸದಿಂದ ಗ್ಲಾಡಿಯೇಟರ್ಸ್ ತಂಡವು 20 ಓವರ್ ಗಳಲ್ಲಿ 184 ರನ್ ಕಲೆ ಹಾಕಿತು.