Advertisement

ಮಾಹಿತಿ ಬೇಕಿದ್ದರೆ ಫೈಲ್‌ ನಂಬರ್‌ ಕೊಡಿ!

12:29 AM Jun 10, 2019 | Sriram |

ಹೊಸದಿಲ್ಲಿ: ಸರ್ಕಾರೇತರ ಅಧಿಕಾರಿಗಳ ಬಗ್ಗೆ ಮಾಹಿತಿ ನೀಡುವಂತೆ ಆರ್‌ಟಿಐ ಅಡಿ ಅರ್ಜಿ ಸಲ್ಲಿಸಿದ ಸಾಮಾಜಿಕ ಕಾರ್ಯಕರ್ತ ಅಜಯ್‌ ದುಬೆ ಎಂಬುವವರಿಗೆ ಮಧ್ಯಪ್ರದೇಶ ಸರಕಾರ ನೀಡಿದ ಪ್ರತಿಕ್ರಿಯೆ ತೀವ್ರ ಆಕ್ಷೇಪಕ್ಕೆ ಕಾರಣವಾಗಿದೆ.

Advertisement

ದಾಖಲೆ ಸಂಖ್ಯೆ ಮತ್ತು ದಾಖಲೆ ದಿನಾಂಕ ನೀಡಿದರೆ ಮಾಹಿತಿ ನೀಡ ಲಾಗುತ್ತದೆ ಎಂಬ ವಿಚಿತ್ರ ಉತ್ತರವನ್ನು ಕಮಲ್‌ನಾಥ್‌ ಸರಕಾರ ನೀಡಿದೆ.

ನೀವು ನಿರ್ದಿಷ್ಟ ವ್ಯಕ್ತಿ ಅಥವಾ ಫೈಲ್‌ ಸಂಖ್ಯೆ ಅಥವಾ ದಿನಾಂಕ ನೀಡಿಲ್ಲ. ಹೀಗಾಗಿ ಮಾಹಿತಿ ಒದಗಿಸಲು ಸಾಧ್ಯವಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಲಾಗಿದೆ. ಸಿಎಂಗೆ ಸಲಹೆ ಗಾರರಾಗಿ ಅವರ ಆಪ್ತರನ್ನು ನೇಮಿಸಲಾಗಿದೆ. ಇಬ್ಬರೂ ಖಾಸಗಿ ವ್ಯಕ್ತಿಗಳಾಗಿದ್ದು, ಇದಕ್ಕೆ ಆಡಳಿತ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತ ವಾಗಿದೆ. ಇವರ ನೇಮಕಾತಿ ಕುರಿತ ವಿವರ ಗಳನ್ನು ಅಜಯ್‌ ಆರ್‌ಟಿಐ ಅಡಿ ಕೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next