Advertisement

ಡಿಸೈನಿಂಗ್‌ ಜ್ಞಾನವಿದ್ದರೆ ಕಂಪ್ಯೂಟರ್‌ನಿಂದ ಉಜ್ವಲ ಭವಿಷ್ಯ 

01:37 PM Sep 05, 2018 | |

ಡಿಜಿಟಲ್‌ ಯುಗದಲ್ಲಿರುವ ನಾವು ಈಗ ಶಾಲೆ, ಕಾಲೇಜಿನಲ್ಲಿಯೇ ಕಂಪ್ಯೂಟರ್‌ನ ಸಾಮಾನ್ಯ ಜ್ಞಾನವನ್ನು ಪಡೆದುಕೊಂಡಿರುತ್ತೇವೆ. ಮಾತ್ರವಲ್ಲದೆ ಮುಂದೆ ಉನ್ನತ ಶಿಕ್ಷಣದಲ್ಲಿ ಇದರ ಅಗತ್ಯತೆ ಹೆಚ್ಚಿರುತ್ತದೆ. ಹಾಗಾಗಿ ಈ ಕಂಪ್ಯೂಟರ್‌ನ ಬಗ್ಗೆ ಆಸಕ್ತಿ ಹೊಂದಿದವರು ಮುಂದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದು. ಕೇವಲ ಕಂಪ್ಯೂಟರ್‌ ಎಂದಾಕ್ಷಣ ಚಲನಚಿತ್ರ ಅಥವಾ ಗೇಮ್‌ ಗೋಸ್ಕರ ಅದನ್ನು ಇಷ್ಟಪಡದೆ ಅದರ ಅಪ್ಲಿಕೇಶನ್ಸ್‌ಗಳನ್ನು ಕಲಿತು ಸ್ವಂತ ಕಾಲಿನ ಮೇಲೆ ನಿಂತು ವ್ಯವಹಾರ ನಡೆಸಬಹುದು.

Advertisement

ಹಲವು ಅವಕಾಶ
ಈಗ ಎಲ್ಲವೂ ಡಿಜಿಟಲೀಕರಣವಾದ್ದರಿಂದ ಯಾವುದೇ ಹುದ್ದೆಗೆ ಅರ್ಜಿ ಸಲ್ಲಿಸುವುದರಿಂದ ಹಿಡಿದು ಎಲ್ಲವೂ ಕಂಪ್ಯೂಟರ್‌ ಮೂಲಕವೇ ನಡೆಯಬೇಕು. ಹಾಗಾಗಿ ನಮ್ಮ ಶಿಕ್ಷಣದ ಜತೆಗೆ ಕಂಪ್ಯೂಟರ್‌ ಶಿಕ್ಷಣ ಪಡೆದುಕೊಂಡರೆ. ನಾನಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳಬಹುದು. ಡಿಸೈನಿಂಗ್‌ ಆಸಕ್ತಿ ಇದ್ದವರಿಗೆ ವೆಬ್‌, ಪೇಜ್‌, ಬ್ಯಾನರ್‌, ಬುಕ್‌ ಡಿಸೈನಿಂಗ್‌ ಜತೆಗೆ ಫೋಟೋಶಾಪ್‌ ಗಳನ್ನು  ತಿಳಿದವರಿಗೆ ಈಗ ಅಧಿಕ ಬೇಡಿಕೆಯೂ ಇದೆ.

ಪಾರ್ಟ್‌ಟೈಮ್‌ ಜಾಬ್‌
ಇಂತಹ ಕೋರ್ಸ್‌ಗಳನ್ನು ಕಲಿತರೆ ಫ‌ುಲ್‌ ಟೈಮ್‌ ಅದೇ ಕೆಲಸವನ್ನು ಮಾಡಬೇಕೆಂದಿಲ್ಲ. ತಮ್ಮ ಕಲಿಕೆಯ ಮಧ್ಯೆ ಇದನ್ನು ಪಾರ್ಟ್‌ಟೈಮ್‌ ಆಗಿ ಕೂಡ ಮಾಡಲು ಸಾಧ್ಯ. ಈ ಬಗ್ಗೆ ಸ್ವಲ್ಪ ಐಡಿಯ ಇದ್ದರೆ ಸಾಕು. ಹಾಗು ಕೆಲವು ಪ್ರಯೋಗಗಳ ಮೂಲಕ ಪ್ಯಾಂಪ್ಲೇಟ್ಸ್‌, ಇನ್‌ವಿಟೇಶನ್‌, ಬುಕ್‌ ಹೀಗೆ ಸಣ್ಣಪುಟ್ಟ ಡಿಸೈನಿಂಗ್‌ ಮಾಡಿದರೆ ಸಾಕು. ಆದಾಯಕ್ಕೆ ಕೊರತೆಯಾಗದು.

ಉಚಿತ ಕಲಿಕೆ
ಸಾಮಾನ್ಯವಾಗಿ ಸ್ವಲ್ಪ ಆಸಕ್ತಿ ಇದ್ದವರಿಗೆ ತರಬೇತಿಗೆ ಹೋಗಬೇಕೆಂದಿಲ್ಲ. ಯುಟ್ಯೂಬ್‌ ಗಳ ಮೂಲಕ ಇವುಗಳನ್ನು ಉಚಿತವಾಗಿ ಕಲಿಯಬಹುದು. ಇನ್ನು ಸರ್ಟಿಫಿಕೇಟ್‌ ಬೇಕಿದ್ದರೆ ಕೋರ್ಸ್‌ಗಳಿಗೆ ಸೇರಿ ಡಿಪ್ಲೊಮಾ ಕೋರ್ಸ್‌ ಗಳನ್ನು ಕಲಿಯಬಹುದು. ಇವುಗಳಿಗೆ ಹಣ ಪಾವತಿಸಬೇಕಾಗುತ್ತದೆ. ಆದರೆ ಇದನ್ನು ಕಲಿತರೆ ಕಲಿತವರಿಗೆ ಮೋಸವಾಗುವುದಂತೂ ಇಲ್ಲ. 

ಹಲವು ಕೋರ್ಸ್‌
ಏನಾದರೂ ಕಂಪ್ಯೂಟರ್‌ನ ಡಿಪ್ಲೊಮಾ ಕೋರ್ಸ್‌ಗಳನ್ನು ಮಾಡಿದರೆ ಸಾಕು. ಎಲ್ಲೆಡೆ ಅವಕಾಶಗಳು ಬರುತ್ತವೆ. ಟೈಪಿಂಗ್‌, ಡಿಟಿಪಿ, ಟ್ಯಾಲಿ, ವೆಬ್‌ ಡಿಸೈನಿಂಗ್‌, ಪೇಜ್‌ಮೇಕರ್‌, ಇನ್‌ಡಿಸೈನ್‌, ಫೋಟೋಶಾಪ್‌, ವೀಡಿಯೋ ಎಡಿಟಿಂಗ್‌, ಆಡಿಯೋ ಎಡಿಟಿಂಗ್‌ ಹೀಗೆ ಹಲವು ಅಪ್ಲಿಕೇಶನ್‌ಗಳನ್ನು ಕಲಿತರೆ ಸ್ವಂತ ಅಂಗಡಿ ಅಥವಾ ಕೆಲಸವನ್ನು ಮಾಡಬಹುದು. 

Advertisement

 ಭರತ್‌ರಾಜ್‌ ಕರ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next