Advertisement

ಮಕ್ಕಳ ಮೇಲೆ ದೌರ್ಜನ್ಯ ಎಸಗಿದರೆ ಶಿಸ್ತುಕ್ರಮ

10:45 AM Jul 16, 2019 | Suhan S |

ಗಂಗಾವತಿ: ಕೃಷಿ ಇಲಾಖೆಯ ಕೃಷಿಯಂತ್ರ ಧಾರೆ ಯೋಜನೆಯು ಕೆಲವರಿಗೆ ಮಾತ್ರ ಉಪಯೋಗವಾಗುತ್ತಿದ್ದು ಸಕಲ ರೈತರಿಗೆ ದೊರಕುವಂತೆ ಅಧಿಕಾರಿಗಳು ಜಾಗೃತಿ ಮೂಡಿಸುತ್ತಿಲ್ಲ ಎಂದು ತಾಪಂ ಸದಸ್ಯ ಪ್ರಕಾಶ ಭಾವಿ ಆರೋಪಿಸಿದರು.

Advertisement

ಅವರು ತಾಪಂ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಮಳೆಯ ಕೊರತೆಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರಕಾರ ರೈತರಿಗಾಗಿ ರೂಪಿಸುತ್ತಿರುವ ಯೋಜನೆಗಳನ್ನು ಸರಿಯಾಗಿ ಅನುಷ್ಠಾನವಾಗುತ್ತಿಲ್ಲ. ಕೃಷಿಯಂತ್ರಧಾರೆ ಯೋಜನೆ ಅತ್ಯುತ್ತಮವಾಗಿದ್ದು ತಾಲೂಕಿನಲ್ಲಿರುವ ಎರಡು ಕೇಂದ್ರಗಳಲ್ಲಿ ಕೃಷಿಗೆ ಸಂಬಂಧಪಟ್ಟ ಯಂತ್ರೋಪಕರಣಗಳಿದ್ದು, ಅವುಗಳನ್ನು ಸಣ್ಣ ಅತೀ ಸಣ್ಣ ರೈತರು ಉಪಯೋಗಿಸುವಂತಾಗಬೇಕು. ಆದರೆ ಯೋಜನೆ ಅನುಷ್ಠಾನ ಮಾಡುವ ಸ್ವಯಂಸೇವಾ ಸಂಸ್ಥೆಗಳು ಶ್ರೀಮಂತ ರೈತರಿಗೆ ಮಾತ್ರ ಕೊಡುವ ಕುರಿತು ದೂರುಗಳಿದ್ದು ಎಲ್ಲಾ ರೈತರು ಯಂತ್ರಗಳನ್ನು ತಮ್ಮ ಕೃಷಿಯಲ್ಲಿ ಬಳಕೆ ಮಾಡುವಂತಾಗಬೇಕು ಎಂದರು.

ತಾಪಂ ಅಧ್ಯಕ್ಷ ಬಿ. ಮಲ್ಲಿಕಾರ್ಜುನಗೌಡ, ಉಪಾಧ್ಯಕ್ಷೆ ಭೀಮಮ್ಮ, ಸ್ಥಾಯಿ ಅಧ್ಯಕ್ಷೆ ಸುನೀತಾ ಪ್ರಸಾದ, ಇಒ ಲಕ್ಷ್ಮೀಪತಿ, ಸದಸ್ಯರಾದ ಬಸವಂತಗೌಡ, ವಿರೂಪಾಕ್ಷಿಗೌಡ, ಬಿ. ಫಕೀರಯ್ಯ, ಮಹಮ್ಮದ್‌ ರಫಿ, ಶಂಭಯ್ಯ, ಬಸವರಾಜಸ್ವಾಮಿ ಸೇರಿ ತಾಲೂಕು ಮಟ್ಟದ ಅಧಿಕಾರಿಗಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next