Advertisement

ಕ್ಷೇತ್ರ ಇಲ್ಲದಿದ್ದರೆ 25 ಕ್ಷೇತ್ರಗಳಿಂದ ಆಫರ್ ಬರುತ್ತಿತ್ತಾ?: ಸಿದ್ದರಾಮಯ್ಯ

08:22 PM Mar 24, 2023 | Team Udayavani |

ಹುಬ್ಬಳ್ಳಿ: ಪಕ್ಷದ ಹೈ ಕಮಾಂಡ್ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೇನೆ. ಈಗಾಗಲೇ 20-25 ಕ್ಷೇತ್ರಗಳಿಂದ ಬೇಡಿಕೆ ಬಂದಿದೆ. ನಮ್ಮಲ್ಲಿ ಸ್ಪರ್ಧೆ ಮಾಡಿ ಅಂತೀದಾರೆ. ಎಲ್ಲ ಕಡೆ ನಿಲ್ಲಲು ಆಗಲ್ಲ. ನನಗೆ ಯಾವುದೇ ಕ್ಷೇತ್ರ ಇಲ್ಲದಿದ್ದರೆ 25 ಕ್ಷೇತ್ರಗಳಿಂದ ಆಫರ್ ಬರುತ್ತಿತ್ತಾ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದರು.

Advertisement

ಶುಕ್ರವಾರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಯಾವುದೇ ಕ್ಷೇತ್ರಗಳು ಸಿಗುತ್ತಿಲ್ಲ ಎಂದು ಹೇಳುವ ಬಿಜೆಪಿಯವರು ಇಷ್ಟು ಕ್ಷೇತ್ರಗಳಲ್ಲಿ ಜನ ಕರೆಯುತ್ತಿದ್ದಾರಲ್ಲ. ಜನ ಗೆಲ್ಲುವವರನ್ನು ಕರೆಯುತ್ತಾರೋ ಇಲ್ಲ ಸೋಲುವವರನ್ನೋ ಎಂದು ಕುಟುಕಿದರು.

ರಾಹುಲ್ ಗಾಂಧಿ ಅನರ್ಹ ಮಾಡಿದ್ದು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದೊಂದು ಕರಾಳ ದಿನ. ವಿರೋಧ ಪಕ್ಷಗಳನ್ನು ಎದುರಿಸಲು ಬಿಜೆಪಿಯವರು ಮಾಡಿರುವ ಷಡ್ಯಂತ್ರ ಇದು. ಬಹಳ‌ ಜನ ದೇಶ ಕೊಳ್ಳೆ ಹೊಡೆದು, ಬ್ಯಾಂಕ್ ಲೂಟಿ ಮಾಡಿ ವಿದೇಶಕ್ಕೆ ಹೊರಟು ಹೋದರು. ಸಾರ್ವಜನಿಕರ ದುಡ್ಡು ಲೂಟಿ ಹೊಡೆದವರನ್ನು ಏನಂತ ಕರೆಯಬೇಕು? ರಾಹುಲ್ ಗಾಂಧಿ ಕರೆದಿದ್ದು ತಪ್ಪಾ? ಪ್ರಜಾಪ್ರಭುತ್ವದಲ್ಲಿ ವಾಕ್ ಸ್ವತಂತ್ರ ಇಲ್ವಾ? ಸತ್ಯ ಹೇಳಬೇಕಾದ ಅಗತ್ಯವಿಲ್ಲಾ? ಸತ್ಯ ಹೇಳಿದರೆ ಬಿಜೆಪಿಯವರು ತಡೆದುಕೊಳ್ಳಲ್ಲ ಎಂದರು.

ರಾಹುಲ್‌ ಗಾಂಧಿಯವರನ್ನು ಸಂಸದ ಸದಸ್ಯತ್ವದಿಂದ ಅನರ್ಹಗೊಳಿಸಿದ್ದು ನೀಚ ಮತ್ತು ಹೇಡಿತನದ ಕೆಲಸ. ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಶಿಕ್ಷೆ ಆಗಿರುವ ನಿದರ್ಶನ ಇದ್ದಾವಾ? ಶಿಕ್ಷೆ‌ ಕೊಟ್ಟಿರುವ ಕೋರ್ಟು, ಜಾಮೀನು ಸಹ ಕೊಟ್ಟಿದೆ. ಸಾರ್ವಜನಿಕ ಹಣ ಲೂಟಿ ಹೊಡೆದವರನ್ನು ಬಿಜೆಪಿಯವರು ರಕ್ಷಣೆ ಮಾಡುತ್ತಾರೆ. ಸತ್ಯ ಮಾತನಾಡಿದವರಿಗೆ ಶಿಕ್ಷೆ ಕೊಡುತ್ತಾರೆ ಅಂದರೆ ಯಾವ ನ್ಯಾಯ. ಲೂಟಿ ಮಾಡಿದವರನ್ನ ಬಿಟ್ಟು ಸತ್ಯ ಹೇಳಿದವರಿಗೆ ಶಿಕ್ಷೆ ಕೊಟ್ಟ ಇದನ್ನು ಬ್ಲಾಕ್ ಡೇ ಅಂತ ಕರೆಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next