Advertisement

HDK ವಿರುದ್ಧ ಸಾಕ್ಷ್ಯಗಳು ಇದ್ದರೆ ಬಿಡಬಹುದೇ?: ಸಿಎಂ ಸಿದ್ದರಾಮಯ್ಯ

01:51 AM Aug 22, 2024 | Team Udayavani |

ಬಾಗಲಕೋಟೆ/ಕೊಪ್ಪಳ: ಕೇಂದ್ರ ಸಚಿವ ಎಚ್‌.ಡಿ. ಕುಮಾರ ಸ್ವಾಮಿ ಅವರನ್ನು ಬಂಧಿ ಸಬೇಕೆಂದು ನಾನು ಎಲ್ಲೂ ಹೇಳಿಲ್ಲ. ಒಂದು ವೇಳೆ ಅಗತ್ಯ ಬಿದ್ದರೆ ಮುಲಾಜಿಲ್ಲದೆ ಬಂಧಿಸ ಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಲೋಕಾ ಯುಕ್ತ ಅಧಿಕಾರಿಗಳು ಅವರ ವಿರುದ್ಧ ತನಿಖೆ ನಡೆಸಿ ದಾಖಲೆ ಸಿದ್ಧಪಡಿಸಿದ್ದ ರಿಂದಲೇ ಅವರ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಗೆ ರಾಜ್ಯಪಾಲರ ಬಳಿ ಅನುಮತಿ ಕೇಳಿದ್ದಾರೆ. ದಾಖಲೆಗಳು ಅವರ ವಿರುದ್ಧ ಇದ್ದರೆ ಸುಮ್ಮನೆ ಬಿಡಲು ಸಾಧ್ಯವೇ ಎಂದು ಸಿದ್ದರಾಮಯ್ಯ ಬಾಗಲಕೋಟೆ ಮತ್ತು ಕೊಪ್ಪಳದಲ್ಲಿ ಮಾತನಾಡಿದ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

Advertisement

ವೈಟ್ನರ್‌ ಹಚ್ಚಿದ ಆರೋಪ ಸುಳ್ಳು
ಮುಡಾಗೆ ನೀಡಿದ್ದ ಪತ್ರಕ್ಕೆ ವೈಟ್ನರ್‌ ಹಚ್ಚಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಅಪ್ಪಟ ಸುಳ್ಳು. 2021ರಲ್ಲಿ ಕೊಟ್ಟಿದ್ದ ಪತ್ರಕ್ಕೆ ನಿವೇಶನ ಕೊಡಲಾ ಗಿದೆ. ಆಗ ನಾನು ಸಚಿವ, ಸಿಎಂ ಕೂಡ ಆಗಿರಲಿಲ್ಲ. ಮಿಸ್ಟರ್‌ ಬೊಮ್ಮಾಯಿ ಸಿಎಂ ಆಗಿದ್ದರು. ರಾಜ್ಯಪಾಲರಿಗೆ ಲೋಕಾಯುಕ್ತರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದರಿಂದ ಕುಮಾರ ಸ್ವಾಮಿ ಭಯಗೊಂಡಿದ್ದಾರೆ ಎಂದರು.

ಎಚ್‌ಡಿಕೆಗೆ ಭಯ
ಗಣಿಗೆ ಪರವಾನಿಗೆ ವಿಚಾರದಲ್ಲಿ ಲೋಕಾಯುಕ್ತವೇ ಅವರ ಮೇಲೆ ಚಾರ್ಜ್‌ಶೀಟ್‌ ಹಾಕಿದೆ. ಈ ಹಿಂದೆಯೂ ರಾಜ್ಯಪಾಲರಿಗೆ ಕುಮಾರಸ್ವಾಮಿ ವಿರುದ್ಧ ಪ್ರಾಸಿಕ್ಯೂಷನ್‌ಗೆಅನುಮತಿ ಕೇಳಿದೆ. ಈಗ ಮತ್ತೂಮ್ಮೆ ಲೋಕಾಯುಕ್ತರು ಪತ್ರ ಬರೆದಿದ್ದಾರೆ. ಹಾಗಾಗಿ ರಾಜ್ಯಪಾಲರು ತಮ್ಮ ವಿರುದ್ಧ ತನಿಖೆಗೆ ಅನುಮತಿ ಕೊಟ್ಟು ಬಿಡುತ್ತಾರೇನೋ ಎಂದು ಕುಮಾರಸ್ವಾಮಿ ಭಯಪಟ್ಟಿದ್ದಾರೆ ಎಂದರು.

ಹಿಂದೆ ಕುಮಾರಸ್ವಾಮಿ ವಿರುದ್ಧ ಲೋಕಾಯುಕ್ತರೇ ತನಿಖೆ ಮಾಡಿ ದಾಖಲೆ ಸಂಗ್ರಹಿಸಿದ್ದಾರೆ. ಅವರ ಪ್ರಕರಣದಲ್ಲಿ ರಾಜ್ಯಪಾಲರ ಅನುಮತಿ ಕೇಳಿದವರು ಲೋಕಾಯುಕ್ತರೇ ಹೊರತು ನಾವಲ್ಲ. ಆಗ ರಾಜ್ಯಪಾಲರು ಅನುಮತಿ ಕೊಟ್ಟಿಲ್ಲ. ಆದರೆ ನಮ್ಮ ವಿಷಯದಲ್ಲಿ ಅಬ್ರಹಾಂ ಎನ್ನುವ ವ್ಯಕ್ತಿ ದೂರು ನೀಡಿದ ಒಂದೇ ದಿನದಲ್ಲಿ ಶೋಕಾಸ್‌ ನೋಟಿಸ್‌ ಕೊಟ್ಟಿದ್ದಾರೆ. ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡುವುದಿಲ್ಲ ಎಂದರು.

ಸಿಎಂ ಹೇಳಿದ್ದೇನು?
-ಹಿಟ್‌ ಆ್ಯಂಡ್‌ ರನ್‌ ಗಿರಾಕಿ
ಎಚ್‌ಡಿಕೆ ಆರೋಪ ಸುಳ್ಳು
-ರಾಜ್ಯಪಾಲರು ಅನುಮತಿ ಕೊಡುತ್ತಾರೆ ಎಂದು ಭಯ
-ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದ್ದು ಲೋಕಾಯುಕ್ತರು
-ದಾಖಲೆ ಇದ್ದಿದ್ದಕ್ಕೆ ಚಾರ್ಜ್‌ ಶೀಟ್‌ ಸಲ್ಲಿಕೆ ಮಾಡಿದ್ದಾರೆ
-ಮುಡಾದ ದಾಖಲೆ ತಿದ್ದಿಲ್ಲ, ವೈಟ್ನರ್‌ ಕೂಡ ಹಚ್ಚಿಲ್ಲ
-ನನ್ನ ಬಳಿಯೂ ಇದೆ ಎಂದಿದ್ದ ಪೆನ್‌ ಡ್ರೈವ್‌ ಎಲ್ಲಿದೆ?

Advertisement

ಕುಮಾರಸ್ವಾಮಿ ಬಂಧನಕ್ಕೆ ನೂರು ಸಿದ್ದರಾಮಯ್ಯ ಬೇಕಾಗಿಲ್ಲ, ಒಬ್ಬ ಪೊಲೀಸ್‌ ಕಾನ್‌ಸ್ಟೆಬಲ್‌ ಸಾಕು. ನಾನೇನು ಪೊಲೀಸ್‌ ಅಲ್ಲ. ಅವರನ್ನು ನಾನು ಬಂಧಿ ಸುವುದೂ ಇಲ್ಲ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next