Advertisement

ಸಿನಿಮಾವೇ ಇಲ್ಲದಿದ್ದರೆ… ಬಾಯ್ಕಾಟ್ ಟ್ರೆಂಡ್‌ ಬಗ್ಗೆ ಮತ್ತೆ ಮಾತನಾಡಿದ ಕರೀನಾ ಕಪೂರ್‌!

12:10 PM Jan 23, 2023 | Team Udayavani |

ಕೋಲ್ಕತಾ: ಬಾಲಿವುಡ್‌ ನಲ್ಲಿ ದೊಡ್ಡ  ಸಿನಿಮಾಗಳ ವಿರುದ್ಧ ಬಾಯ್ಕಾಟ್‌ ಟ್ರೆಂಡ್‌ ಮುಂದುವರೆದಿದೆ. ಶಾರುಖ್‌ ಖಾನ್‌ ಅವರ ʼಪಠಾಣ್‌ʼ ಸಿನಿಮಾಕ್ಕೆ ಕೆಲವರು ಬಾಯ್ಕಾಟ್‌ ಕರೆ ನೀಡಿದ್ದಾರೆ. ಈ ಬಗ್ಗೆ ನಟಿ ಕರೀನಾ ಕಪೂರ್‌ ಪ್ರತಿಕ್ರಿಯೆ ನೀಡಿದ್ದಾರೆ.

Advertisement

ಕೋಲ್ಕತ್ತಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ನಟಿ ಕರೀನಾ ಕಪೂರ್‌ ಮನರಂಜನೆ ಇಲ್ಲದಿದ್ದರೆ, ನಿಮ್ಮ ಜೀವನದಲ್ಲಿ ನೀವು ಹೇಗೆ ಸಂತೋಷದಲ್ಲಿ ಇರಲು ಸಾಧ್ಯ? ಮನರಂಜನೆ ಎನ್ನುವುದು ಪ್ರತಿಯೊಬ್ಬರಿಗೂ ಬೇಕು. ಒಂದು ವೇಳೆ ಸಿನಿಮಾವೆಂಬ ಮನರಂಜನಾ ಕ್ಷೇತ್ರ ಇಲ್ಲದಿದ್ದರೆ ಏನಾಗುತ್ತಿತ್ತು? ಎಂದು ಬೇಬೋ ಹೇಳಿದ್ದಾರೆ.

ʼಪಠಾಣ್‌ʼ ಸಿನಿಮಾದಲ್ಲಿನ ʼಬೇಷರಂ ರಂಗ್ʼ ಹಾಡಿನ ಕುರಿತು ಉಂಟಾದ ವಿವಾದದ ಬಳಿಕ ಈ ಮಾತನ್ನು ಕರೀನಾ ಹೇಳಿದ್ದಾರೆ.

ಇದನ್ನೂ ಓದಿ: ಜಾತ್ರೆ ಸಂಭ್ರಮ-ದೇವರ ವಿಗ್ರಹ ಕ್ರೇನ್ ನಿಂದ ಕೆಳಗೆ ಬಿದ್ದು..ನಾಲ್ಕು ಭಕ್ತರ ಮೃತ್ಯು

ಈ ಹಿಂದೆ ಆಮಿರ್‌ ಖಾನ್‌, ಕರೀನಾ ಕಪೂರ್‌ ಪ್ರಧಾನ ಪಾತ್ರದಲ್ಲಿ ನಟಿಸಿದ್ದ ʼಲಾಲ್‌ ಸಿಂಗ್‌ ಚಡ್ಡಾʼ ಚಿತ್ರಕ್ಕೆ ಬಾಯ್ಕಾಟ್‌ ಬಿಸಿ ತಟ್ಟಿತ್ತು. ಆ ವೇಳೆ ನಟಿ ಕರೀನಾ ಸಿನಿಮಾವನ್ನು ಬಾಯ್ಕಾಟ್‌ ಮಾಡ್ಬೇಡಿ, ನೀವು ಒಂದು ಉತ್ತಮ ಸಿನಿಮಾವನ್ನು ಬಾಯ್ಕಾಟ್‌ ಮಾಡುತ್ತಿದ್ದೀರಿ. ಈ ಸಿನಿಮಾಕ್ಕಾಗಿ ನಾವು ತುಂಬಾ ಪರಿಶ್ರಮ ಪಟ್ಟಿದ್ದೇವೆ ಎಂದಿದ್ದರು.

Advertisement

ಅದೇ ಸಮಯದಲ್ಲಿ ನಟಿ ಕರೀನಾ, ಬಾಯ್ಕಾಟ್‌ ವಿರುದ್ಧ ಆಕ್ರೋಶಗೊಂಡು ಯಾರೂ ಸಿನಿಮಾ ನೋಡದಿದ್ದರೂ ಪರವಾಗಿಲ್ಲ ಎನ್ನುವ ಹೇಳಿಕೆಯನ್ನು ನೀಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next