Advertisement

ನಿಯಮ ಉಲ್ಲಂಘನೆಯಾದರೆ ಪಿಡಿಒಗಳ ತಲೆದಂಡ

04:54 PM May 08, 2021 | Suhan S |

ಸಾಗರ: ಕೋವಿಡ್ ಸಂದರ್ಭದ ಕಾರ್ಯಪಡೆಯ ಅಧಿಕಾರಿ, ವೈದ್ಯರ, ಸಿಬ್ಬಂದಿ ಆರೋಗ್ಯ ಬಹಳ ಮುಖ್ಯ. ನಿಯಮಜಾರಿ ಜತೆಗೆ ವೈಯಕ್ತಿಕ ಆರೋಗ್ಯದ ಕಾಳಜಿಯನ್ನು ಸಹಕರ್ತವ್ಯನಿರತರು ತೆಗೆದುಕೊಳ್ಳಬೇಕು ಎಂದು ಶಾಸಕ ಎಚ್‌.ಹಾಲಪ್ಪ ಹರತಾಳು ಹೇಳಿದರು.

Advertisement

ಇಲ್ಲಿನ ತಾರಾಪುರ ಆವರಣದಲ್ಲಿನ ಎಲ್‌ಬಿ ಕಾಲೇಜಿನದೇವರಾಜ್‌ ಅರಸು ಸಭಾಂಗಣದಲ್ಲಿ ತಾಲೂಕು ಆಡಳಿತದ ವತಿಯಿಂದ ಕೋವಿಡ್ ಜಾಗೃತಿ ನಿಯಮ ಅನುಸರಣೆ ಕುರಿತು ಆಯೋಜಿಸಲಾಗಿದ್ದ ನಗರಸಭೆ ಸದಸ್ಯರು ಮತ್ತು ಗ್ರಾಪಂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೋವಿಡ್ ಕಾರಣದಿಂದಾಗಿ ಸಹೋದ್ಯೋಗಿಗಳ ಸಾವು ಸಹ ಸಂಭವಿಸಿದೆ. ಜನಪ್ರತಿನಿಧಿ ಗಳು ಈ ಸಂದರ್ಭದಲ್ಲಿ ಹೆಚ್ಚಿನ ಸಹಕಾರ ನೀಡಬೇಕು. ಸೋಂಕಿತರ ಚಿಕಿತ್ಸೆ ಸಂಬಂಧ ಒತ್ತಡಹಾಕುವ, ಪ್ರಭಾವ ಬೀರುವ ಕೆಲಸ ಮಾಡಬಾರದು. ಲಸಿಕೆಯ 2ನೆಯ ಡೋಸ್‌ ಮಾತ್ರ ನೀಡಲಾಗುವುದು. ನಗರವ್ಯಾಪ್ತಿಕಾರ್ಯಪಡೆ ವೇಗ ಪಡೆದುಕೊಳ್ಳಬೇಕು. ವಾರ್ಡ್‌ಗಳಲ್ಲಿ ಔಷಧಸಿಂಪಡನೆಗೆ ಮುಂದಾಗಬೇಕು. ಗ್ರಾಮಾಂತರದಲ್ಲಿ ಕೊರೊನಾ ನಿಯಮ ಉಲ್ಲಂಘನೆಯಾದರೆ ಪಿಡಿಒಗಳ ತಲೆದಂಡ ಅನಿವಾರ್ಯವಾಗುತ್ತದೆ ಎಂದರು.

ಸಹಾಯಕ ಆಯುಕ್ತ ಡಾ| ಎಲ್‌.ನಾಗರಾಜ್‌ ಮಾತನಾಡಿ, ಕೋವಿಡ್‌ ನಿಯಂತ್ರಣಕ್ಕೆ ಸಾರ್ವಜನಿಕರು ಪೂರಕ ಸಹಕಾರ ನೀಡದಿರುವುದರಿಂದ ಆಡಳಿತದ ಶ್ರಮ ವ್ಯರ್ಥವಾಗುತ್ತಿದೆ. ಮದುವೆ ಮನೆಗೆ ಕೇವಲ 50 ಜನರಿಗೆ ಒಪ್ಪಿಗೆ ಪಡೆದುಹೋದವರು ಒಂದು ಸಲಕ್ಕೆ 50ರಂತೆ ದಿನವಿಡೀ ಜನರನ್ನು ಸೇರಿಸಿ ಒಟ್ಟು ಸಂಖ್ಯೆ ಸಾವಿರ ದಾಟಿಸುತ್ತಾರೆ. ಮದುವೆಗೆಮಾತ್ರ ಒಪ್ಪಿಗೆ ಪಡೆದಿದ್ದರೂ ಬೀಗರ ಊಟದ ಹೆಸರಿನಲ್ಲಿ ಜನಸೇರುತ್ತಿದ್ದಾರೆ. ಸೋಂಕಿತರ ಸಾರ್ವಜನಿಕ ಸಂಚಾರ, ಬೀಗರಊಟ ಇತ್ಯಾದಿ ವಿಷಯದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ವೈದ್ಯಾಧಿಕಾರಿ ಡಾ| ಪ್ರಕಾಶ್‌ ಬೋಸ್ಲೆ ಮಾತನಾಡಿದರು ನಗರ ಸಭಾಧ್ಯಕ್ಷೆ ಮಧುರಾ ಶಿವಾನಂದ, ಉಪಾಧ್ಯಕ್ಷ ವಿ. ಮಹೇಶ್‌, ಡಿವೈಎಸ್‌ಪಿ ವಿನಾಯಕ ಶೆಟಗೇರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಆರ್‌. ಬಿಂಬ, ಪರಿಸರ ಅಭಿಯಂತರ ಕೆ. ಮದನ, ಟಿಎಚ್‌ಒ ಡಾ| ಕೆ.ಎಸ್‌.ಮೋಹನ್‌ ಮಾತನಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next