Advertisement

ಹಣದುಬ್ಬರ V/S ರೆಪೋ ದರ; ರೆಪೋ ದರ ಏರಿಕೆ ಮಾಡಿದರೆ, ಹಣದುಬ್ಬರ ಇಳಿಯುತ್ತಾ?

12:38 PM May 06, 2022 | Team Udayavani |

2018ರ ಆಗಸ್ಟ್‌ ನಲ್ಲಿ ರಿಯಲ್‌ ಎಸ್ಟೇಟ್‌ ಮತ್ತು ಆಟೋ ಮೊಬೈಲ್‌ ವಲಯಗಳ ಅಭಿವೃದ್ಧಿಗಾಗಿ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ರೆಪೋ ದರವನ್ನು ಶೇ.4ಕ್ಕೆ ಇಳಿಕೆ ಮಾಡಿತ್ತು. ಈ ಮೂಲಕ ಗೃಹ ಮತ್ತು ವಾಹನ ಬಳಕೆದಾರರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸಿಗುವಂತೆ ಮಾಡಿ, ಹೆಚ್ಚು ಖರೀದಿಗೂ ಉತ್ತೇಜನ ಮಾಡಲಾಗಿತ್ತು. ಆದರೆ, ಈಗ ಹೆಚ್ಚುತ್ತಿರುವ ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡು ರೆಪೋ ದರವನ್ನು 40 ಬೇಸಿಸ್‌ ಪಾಯಿಂಟ್‌ ಗಳಷ್ಟು ಏರಿಕೆ ಮಾಡಿದೆ. ಹಾಗಾದರೆ, ರೆಪೋ ದರ ಏರಿಕೆ ಮಾಡಿದರೆ, ಹಣದುಬ್ಬರ ಇಳಿಯುತ್ತಾ? ಈ ಕುರಿತ ಒಂದು ತಿಳಿ ಸಾರ ಇಲ್ಲಿದೆ…

Advertisement

ಏನಿದು ರೆಪೋ ದರ?
ಆರ್‌ ಬಿಐನಿಂದ ವಾಣಿಜ್ಯ ಬ್ಯಾಂಕುಗಳು ತೆಗೆದುಕೊಳ್ಳುವ ಸಾಲಕ್ಕೆ ನೀಡುವ ಬಡ್ಡಿ ದರವನ್ನೇ ರೆಪೋ ದರವೆಂದು ಕರೆಯುತ್ತಾರೆ. ಬ್ಯಾಂಕುಗಳು ತಮ್ಮಲ್ಲಿ ನಗದು ಕಡಿಮೆಯಾದಾಗ ಕೇಂದ್ರ ಬ್ಯಾಂಕ್‌ ನಿಂದ ಸಾಲ ಪಡೆಯುತ್ತವೆ. ಕಡಿಮೆ ರೆಪೋ ದರವಿದ್ದರೆ, ಹೆಚ್ಚು ಸಾಲಪಡೆದು, ಜನರಿಗೆ ಇದನ್ನು ವರ್ಗಾಯಿಸುತ್ತವೆ.

ರೆಪೋ ದರ ಏರಿಸಿದ್ದು ಏಕೆ?
ಹೆಚ್ಚುತ್ತಿರುವ ಹಣದುಬ್ಬರ, ರಷ್ಯಾ-ಉಕ್ರೇನ್‌ ಕಾಳಗ, ಕಚ್ಚಾತೈಲದ ದರ ಹೆಚ್ಚಳ ಎಂಬಿತ್ಯಾದಿ ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಆರ್‌ ಬಿಐ ರೆಪೋ ದರ ಏರಿಕೆ ಮಾಡಿದೆ.

ಈಗ ಹಣದುಬ್ಬರ ಕಡಿಮೆಯಾಗುತ್ತದೆಯೇ?
ಕಡಿಮೆಯಾಗಬಹುದು ಎಂಬುದು ಆರ್‌ ಬಿಐ ಆಶಾವಾದ. ಸದ್ಯ ಜಗತ್ತಿನಾದ್ಯಂತ ಕಾಡುತ್ತಿರು ವುದು ಪೂರೈಕೆ ಆಧರಿತ ಹಣದುಬ್ಬರ. ಅಂದರೆ, ನಮ್ಮ ಅಗತ್ಯಕ್ಕೆ ತಕ್ಕಂತೆ, ವಸ್ತುಗಳ ಪೂರೈ ಕೆಯಾಗುತ್ತಿಲ್ಲ. ರೆಪೋ ದರ ಹೆಚ್ಚಳ ಮಾಡಿ, ಬ್ಯಾಂಕುಗಳು ಬಡ್ಡಿ ದರ ಹೆಚ್ಚಿಸಿದರೆ, ಜನ ಬ್ಯಾಂಕುಗಳಿಂದ ಸಾಲ ಪಡೆಯುವುದಿಲ್ಲ. ಆಗ, ಖರೀದಿಸುವವರ ಸಂಖ್ಯೆ ಇಳಿಯುತ್ತದೆ. ಇಂಥ ವೇಳೆ, ಬೇಡಿಕೆ ಇಲ್ಲದ ಕಾರಣದಿಂದಾಗಿ ವಸ್ತುಗಳ ದರವೂ ಇಳಿಕೆಯಾಗುತ್ತದೆ. ಒಂದು ವೇಳೆ ರೆಪೋ ದರ ಹೆಚ್ಚಳ ಮಾಡದೇ ಹೋದರೆ, ಜನರ ಕಡೆ ಹಣದ ಹರಿವು ಹೆಚ್ಚಾಗಿ ವಸ್ತುಗಳಿಗೆ ಮತ್ತಷ್ಟು ಬೇಡಿಕೆ ಬರು ತ್ತದೆ. ಆಗ ಆ ವಸ್ತುಗಳ ದರ ಹೆಚ್ಚಾಗಿ ಹಣದುಬ್ಬರ ಉಂಟಾಗುತ್ತದೆ ಎಂದು ಹೇಳುತ್ತಾರೆ ಆರ್ಥಿಕ ತಜ್ಞರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next