ಬೆಂಗಳೂರು: ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರ-ದೌರ್ಜನ್ಯ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ ಮತದಾನದ ಹಕ್ಕು ಹಾಗೂ ಸರ್ಕಾರದ ಎಲ್ಲಾ ಸವಲತ್ತುಗಳನ್ನು ರದ್ದುಪಡಿಸಿ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳಲು ವಿ. ಎಸ್.ಉಗ್ರಪ್ಪ ನೇತೃತ್ವದ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲಿದೆ.
ಒಂದೊಮ್ಮೆ ಪರಿಹಾರಕ್ಕಾಗಿ ಅಥವಾ ಇತರೆ ಕಾರಣಗಳಿಗೆ ಸುಳ್ಳು ದೂರು ನೀಡಲಾಗಿದೆ ಎಂಬುದು ನ್ಯಾಯಾಲಯದ ತೀರ್ಪಿನಲ್ಲಿ ಬಯಲಾದರೆ ಪರಿಹಾರದ ಮೊತ್ತ ಬಡ್ಡಿ ಸಮೇತ ವಾಪಸು ಪಡೆಯಬೇಕು ಎಂಬ ಶಿಫಾರಸು ಮಾಡಲು ತೀರ್ಮಾನಿಸ ಲಾಗಿದೆ.
ವಿಧಾನಸೌಧದಲ್ಲಿ ಸಮಿತಿಯ ಸಭೆ ನಡೆಸಿ ವರದಿ ಅಂತಿಮಗೊಳಿಸಿದ ಅತ್ಯಾಚಾರ ಹಾಗೂ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್.ಉಗ್ರಪ್ಪ ನಂತರ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿ, ಸಮಿತಿಯು 100 ಶಿಫಾರಸುಗಳನ್ನು ರಾಜ್ಯ ಸರ್ಕಾರಕ್ಕೆ ನೀಡಲಿದೆ.ವರದಿಯ ಪ್ರತಿ ಮುದ್ರಣಕ್ಕೆ ಹೋಗಿದ್ದು 15 ದಿನದಲ್ಲಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.
ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆ, ಕಾರ್ಖಾನೆ, ಕೆಲಸದ ಸ್ಥಳ, ಶಾಲಾ-ಕಾಲೇಜು, ಮನೆಗೆಲಸ ಸಂದರ್ಭದಲ್ಲಿ ನಡೆಯಬಹುದಾದ ಅತ್ಯಾಚಾರ ದೌರ್ಜನ್ಯ ಪ್ರಕರಣಗಳಲ್ಲಿ ತ್ವರಿತ ಪ್ರಕರಣ ದಾಖಲು, ತನಿಖೆ, ವಿಚಾರಣೆ, ತೀರ್ಪು ಬರಲು ಯಾವ್ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಸಮಗ್ರವಾಗಿ 1500 ಪುಟಗಳ ವರದಿಯಲ್ಲಿ
ತಿಳಿಸಲಾಗುವುದು ಎಂದರು.
ಮನೆ ಕೆಲಸಗಾರರ ಮೇಲಿನ ದೌರ್ಜನ್ಯ ತಡೆಯಲು ಮನೆ ಕೆಲಸಗಾರರನ್ನು ಕಾರ್ಮಿಕ ಇಲಾಖೆಯಡಿ ಕಡ್ಡಾಯವಾಗಿ ನೋಂದಾಯಿಸಬೇಕು ಎಂದು ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
ಪೋಕೊÕà ಕಾಯ್ದೆ ಸೇರಿದಂತೆ ಅತ್ಯಾಚಾರ ಮತ್ತು ದೌರ್ಜನ್ಯ ಪ್ರಕರಣಗಳಲ್ಲಿ ಈಗಿನ ಕಾನೂನು ಪ್ರಕಾರ ಒಂದೇ ಒಂದು ಪ್ರಕರಣದಲ್ಲೂ ಸಕಾಲದಲ್ಲಿ ತನಿಖೆ, ವಿಚಾರಣೆ ಮುಗಿಸಿಲ್ಲ. ಪರಿಹಾರ ಸಹ ಕೊಟ್ಟಿಲ್ಲ. ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣವೂ ಕಡಿಮೆಯಿದೆ, ಶಿಕ್ಷೆ ಪ್ರಮಾಣ ಶೇ.50 ಆದಾಗ ಮಾತ್ರ ಅಪರಾಧ ಕೃತ್ಯ ಎಸಗುವವರಲ್ಲಿ ಭಯ ಬರುತ್ತದೆ ಎಂದು ಹೇಳಿದರು.