Advertisement

ಪಿಒಪಿ ಗಣಪತಿ ಕೂರಿಸಿದರೆ ದಂಡ

01:19 AM Aug 12, 2019 | Lakshmi GovindaRaj |

ಬೆಂಗಳೂರು: “ಪಿಒಪಿ ಗಣೇಶ ಮೂರ್ತಿಯನ್ನು ಮಾರಾಟ ಮಾಡುವುದು ಮತ್ತು ಪ್ರತಿಷ್ಠಾಪಿಸುವುದು ಕಂಡುಬಂದಲ್ಲಿ ತಪ್ಪಿತಸ್ಥರಿಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ’ ಎಂದು ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಹೇಳಿದರು. ಬಿ-ಪ್ಯಾಕ್‌, ರೋಟರಿ ಡೌನ್‌ಟೌನ್‌ ಸಂಸ್ಥೆ ಹಾಗೂ ಬಿಬಿಎಂಪಿ ಸಹಭಾಗಿತ್ವದಲ್ಲಿ ಭಾನುವಾರ ಹಲಸೂರು ಕೆರೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಣ್ಣಿ ಮೂರ್ತಿ ಮಾಡುವ ಕಾರ್ಯಗಾರದಲ್ಲಿ ಅವರು ಮಾತನಾಡಿದರು.

Advertisement

ಪಿಒಪಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಅತಿಥಿಯಾಗಿ ಅಥವಾ ಪೂಜೆಗೆ ಕರೆದರೆ ನಾನು ಹೋಗುವುದಿಲ್ಲ. ಎಲ್ಲರು ಮಣ್ಣಿನ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ, ಪರಿಸರ ಕಾಪಾಡಬೇಕು ಎಂದು ವಿನಂತಿ ಮಾಡಿದರು. ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ಪರಿಸರಕ್ಕೆ ಮಾರಕವಾಗಿರುವ ಪಿಒಪಿ ಗಣಪತಿಯನ್ನು ಯಾವುದೇ ಕಾರಣಕ್ಕೂ ಕೂರಿಸುವುದಿಲ್ಲ ಎಂದು ಸಾರ್ವಜನಿಕರು ಪಣತೋಡಬೇಕು. ಮಣ್ಣಿನ ಗಣಪತಿಯನ್ನು ಪೂಜೆ ಮಾಡುವುದು ಶೇಷ್ಠ ಎಂದು ತಿಳಿದುಕೊಳ್ಳಬೇಕು ಎಂದು ಹೇಳಿದರು.

ಬಿ-ಪ್ಯಾಕ್‌ನ ಸಾರ್ವಜನಿಕ ಸಂರ್ಪಕಾಧಿಕಾರಿ ರಾಘವೇಂದ್ರ ಪೂಜಾರಿ ಮಾತನಾಡಿ, ಕಳೆದ ಮೂರು ವರ್ಷಗಳಿಂದ ಮಣ್ಣಿನ ಗಣಪತಿ ಬಳಸುವ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ 50ಕ್ಕೂ ಹೆಚ್ಚು ವಾರ್ಡ್‌ಗಳಲ್ಲಿ ಮಣ್ಣಿನ ಮೂರ್ತಿ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗಿದೆ. ಮಕ್ಕಳು ತಮ್ಮದೇ ಶೈಲಿಯಲ್ಲಿ ಮಣ್ಣಿನ ಗಣಪತಿ ಮಾಡಿ ಖಷಿ ಪಟ್ಟಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಸಂಸದ ಪಿ.ಸಿ. ಮೋಹನ್‌, ಬಿಬಿಎಂಪಿ ಸದಸ್ಯೆ ಮಮತಾ ಸರವಣ ಮತ್ತು 400ಕ್ಕೂ ಸ್ವಯಂ ಸೇವಕರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next