Advertisement

ಶಿರಸಿ: ಹಣ ಪಾವತಿಸದೇ ಇದ್ದರೆ Election ಬಹಿಷ್ಕಾರಕ್ಕೆ ಗುತ್ತಿಗೆದಾರರ ಸಂಘ ಚಿಂತನೆ

05:39 PM Apr 17, 2023 | Team Udayavani |

ಶಿರಸಿ: ಕಳೆದ ಮಾರ್ಚ ಕೊನೆಗೆ ಅಕ್ಕ ಪಕ್ಕದ ಜಿಲ್ಲೆಗಳಲ್ಲಿ ನಡೆದ ಸರಕಾರಿ ಕಾಮಗಾರಿಗೆ ಹಣ ಬಂದರೂ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕಳೆದ‌ ಅನುದಾನದ ಹಣ ಬಂದೇ‌ ಇಲ್ಲ. ಈ ತಿಂಗಳ ಕೊನೆಯೊಳಗೆ ಗುತ್ತಿಗೆದಾರರಿಗೆ ನ್ಯಾಯ ಕೊಡದೇ ಹೋದರೆ ಬರಲಿರುವ ವಿಧಾನ ಚುನಾವಣೆ ಬಹಿಷ್ಕಾರ ಮಾಡಲಾಗುತ್ತದೆ ಎಂದು ಜಿಲ್ಲಾ ಗುತ್ತಿಗೆದಾರರ ಸಂಘದ ಅಧ್ಯಕ್ಷ ಧೀರು ಶಾನಭಾಗ ಹೇಳಿದರು.

Advertisement

ಅವರು ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿ, ಚಿಕ್ಕ ನೀರಾವರಿ, ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ಸೇರಿದಂತೆ ಜಿಲ್ಲೆಗೆ 250 ಕೋಟಿ ರೂ. ಗೂ ಅಧಿಕ ಹಣ ಸರಕಾರದಿಂದ ಬಾಕಿ ಇದೆ. ಕೆಲವರಿಗೆ ಬ್ಯಾಂಕ್ ಬಡ್ಡಿ ಕಟ್ಟಲೂ ಆಗಿಲ್ಲ‌. ನೆರೆ ಹಾನಿಯ ಕಾಮಗಾರಿಗೂ ಹಣ ಬರಬೇಕು. ಜಿಲ್ಲೆಯ ಜನಪ್ರತಿನಿಧಿಗಳು ಈ ವಿಷಯದಲ್ಲಿ ನಿಷ್ಕ್ರಿಯ ಆಗಿದ್ದಾರೆ‌ ಎಂದೇ ಅರ್ಥ ಎಂದರು.

೪೦೦ ಕೋ.ರೂ. ಮೊತ್ತದ ಕಾಮಗಾರಿಗೆ ಟೆಂಡರ್ ಸರಕಾರ ಕರೆದಿದ್ದಿದೆ. ಆದರೆ, ಅದರಲ್ಲೂ ಪಾಲ್ಗೊಳ್ಳಬೇಕೋ, ಬೇಡವೋ ಆಲೋಚಿಸಬೇಕಾಗಿದೆ ಎಂದರು. ಜಿಎಸ್ಟಿ 12 ರಿಂದ18 ಆಗಿದೆ. ಶೇ.6 ಗುತ್ತಿಗೆದಾರರು ತುಂಬುವಂತೆ ಆಗಿದೆ‌. ಮರಳು ಲಾಬಿ ಆಗಿದೆ. ಇನ್ನು ಮಳೆಗಾಲ‌ ಕೂಡ ಬರಲಿದೆ. ಮರಳಿನ ಸಮಸ್ಯೆ ಇತ್ಯರ್ಥ ಆಗುವಂತೆ ಇಲ್ಲವಾಗಿದೆ ಎಂದೂ ಅಸಮಧಾನ ವ್ಯಕ್ತಪಡಿಸಿದ ಅವರು ಮೊದಲಿದ್ದ ಸಮಸ್ಯೆ ಕಳೆದ ಐದು ವರ್ಷಗಳಿಂದ ಹೆಚ್ಚಳ ಆಗಿದೆ ಎಂದರು.

ಈ‌ ವೇಳೆ ಶ್ಯಾಂಸುಂದರ ಭಟ್ಟ, ರಮೇಶ ದುಭಾಶಿ, ಜಿ.ಎಸ್ ಹಿರೇಮಠ, ಗಣೇಶ ದಾವಣಗೆರೆ, ವಿ.ಎಂ.ಹೆಗಡೆ, ಸತೀಶ ಗೌಡ ಸಿದ್ದಾಪುರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next