Advertisement

“ಗೋವು ಸುಖವಾಗಿದ್ದರೆ ಭೂಮಿ ಸ್ವರ್ಗ’

10:24 AM Jul 12, 2018 | Harsha Rao |

ಮಂಗಳೂರು: ಗೋ ಸಂರಕ್ಷಣೆಯ ಸಂಕಲ್ಪ ನಮ್ಮಲ್ಲಿ ಜಾಗೃತವಾಗಿರಬೇಕು. ಗೋವು ಸುಖವಾಗಿದ್ದರೆ ಭೂಮಿ ಸ್ವರ್ಗವಾಗಲು ಸಾಧ್ಯ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಆಶಿಸಿದರು.

Advertisement

ಶ್ರೀ ರಾಮಚಂದ್ರಾಪುರ ಮಠದ ಕಾಮದುಘಾ ಟ್ರಸ್ಟ್‌ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ಬುಧವಾರ ಆಯೋಜಿಸಲಾದ “ಸ್ವರ್ಗ ಸಂವಾದ-ಗೋಸಂಪದ ಸಮರ್ಪಣೆ’ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಸಮೀಪದ ಶ್ರೀರಾಮ ದೇವ ಭಾನುRಳಿ ಮಠದ ಪರಿಸರದಲ್ಲಿ ಗೋವುಗಳ ಬೃಹತ್‌ ಆಲಯ ನಿರ್ಮಿಸಲಾಗಿದೆ. 3 ಲಕ್ಷ ಚದರ ಅಡಿಯ ಗೋಸ್ವರ್ಗದಲ್ಲಿ ಗೋವುಗಳಿಗೆ ಗೋಡೆ, ಕಿಟಕಿ ಅಥವಾ ಹಗ್ಗದ ಬಂಧನವಿಲ್ಲ. ಪ್ರಕೃತಿಯ ರಮ್ಯ ತಾಣದ ನಡುವೆ ನಂದಿಶಾಲೆ, ಬಾಲವತ್ಸ ಶಾಲೆ, ಹಾಲು ಕರೆಯುವ ಹಸುಗಳಿಗೆ ಧೇನು, ಪ್ರತೀಕ್ಷಾ ಶಾಲೆ, ವತ್ಸ ಶಾಲೆ, ಗೋಸಾಕಾಣಿಕೆ ಚರಿತ್ರೆಯಲ್ಲೇ ಪ್ರಥಮ ಎನಿಸಿದ ಪ್ರಸವ ಶಾಲೆ, ಮುದಿ ಹಾಗೂ ಅಶಕ್ತ ಹಸುಗಳಿಗೆ ಕರುಣಾ ಭರಣ, ಸರ್ವಸುಸಜ್ಜಿತ ಪಶು ಚಿಕಿತ್ಸಾಲಯ, ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪ್ರಯೋಗಾಲಯ, ಪಂಚಗವ್ಯ ಚಿಕಿತ್ಸೆಗಾಗಿ ಸುಸಜ್ಜಿತ ನಿರಾಮಯ ಆಸ್ಪತ್ರೆ, ಗೋವಿನ ಚಿತ್ರಗಳ ಪ್ರದರ್ಶನಕ್ಕೆ ಥಿಯೇಟರ್‌, ಗೋಮ್ಯೂಸಿಯಂ ಗವ್ಯ ಆಹಾರ ವ್ಯವಸ್ಥೆಯಂತಹ ಸೌಲಭ್ಯ ಇಲ್ಲಿದೆ ಎಂದು ಹೇಳಿದರು.

ಕಸಾಯಿಖಾನೆಯಲ್ಲಿ ಮಾತ್ರವಲ್ಲ; ಮನೆಯಲ್ಲೂ ಗೋವಿನ ಬದುಕು ದುಃಖಮಯವಾಗಿದೆ. ಎಂಜಲು, ಹಳಸಲು ವಸ್ತುಗಳನ್ನು ನೀಡುತ್ತೇವೆ. ಕಾರಾಗೃಹದ ಕೈದಿಗಳಿಗಿಂತ ಅಧಿಕವಾಗಿ ಗೋವು ಬವಣೆಪಡುತ್ತಿದೆ. ಬೇಕಾದ ಆಹಾರ, ಬೇಕಾದಷ್ಟು ಪ್ರಮಾಣದಲ್ಲಿ ಇಲ್ಲ. ಗೋಸಾಕಣೆ ವ್ಯಾವಹಾರಿಕವಾಗಿದೆ. ಹಗ್ಗದ ಮೂಲಕ ಕಟ್ಟಿ ಬಂಧನ ಮಾಡಲಾಗಿದೆ. ಗೋವಿಗೆ ನೀರು, ಆಹಾರದಷ್ಟೇ ಸೂರ್ಯಕಿರಣವೂ  ಅಗತ್ಯ. ಆದರೆ ಅವುಗಳನ್ನು ಕಟ್ಟಿಹಾಕುತ್ತೇವೆ. ನಿರಂತರ ದುಡಿತ-ಬಡಿತ ಬೈಗುಳದ ಮೂಲಕ ಗೋವಿನ ಬದುಕು ಬವಣೆ ಪಡುವಂತಾಗಿದೆ ಎಂದರು.

ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ಎನ್‌. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಉತ್ತರಕಾಶಿ ಕಪಿಲಾಶ್ರಮದ ಶ್ರೀ ರಾಮಚಂದ್ರ ಗುರೂಜಿ, ಎಂಆರ್‌ಪಿಎಲ್‌ ಆಡಳಿತ ನಿರ್ದೇಶಕ ವೆಂಕಟೇಶ್‌, ಕುಂಟಾರು ರವೀಶ್‌ ತಂತ್ರಿ, ಸಂಸದ ನಳಿನ್‌ ಕುಮಾರ್‌ ಕಟೀಲು, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಎಸ್‌ಸಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಡಾ|ಎಂ.ಎನ್‌. ರಾಜೇಂದ್ರ ಕುಮಾರ್‌, ಕೆಎಂಎಫ್‌ ಅಧ್ಯಕ್ಷ ರವಿರಾಜ್‌ ಹೆಗ್ಡೆ, ಕರ್ನಾಟಕ ರಾಜ್ಯ ಗೋಶಾಲೆಗಳ ಒಕ್ಕೂಟದ ಅಧ್ಯಕ್ಷ ಪ್ರೊ|ಎಂ.ಬಿ. ಪುರಾಣಿಕ್‌, ಕ. ಸಾ. ಪ. ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ದ.ಕ. ಜಿಲ್ಲಾ ಕ. ಸಾ. ಪ. ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ, ಪ್ರಮುಖರಾದ ಡಾ| ಸುರೇಶ್‌ ಶೆಟ್ಟಿ ಗುರ್ಮೆ, ಸಂತೋಷ್‌ ಕುಮಾರ್‌ ರೈ ಬೋಳಾÂರ್‌, ರೂಪಾ ಡಿ. ಬಂಗೇರ, ಹವ್ಯಕ ಮಹಾಮಂಡಲ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಗೋಸ್ವರ್ಗ ಸಂಸ್ಥಾನ ಸಮಿತಿ ಅಧ್ಯಕ್ಷ ಆರ್‌.ಎಸ್‌. ಹೆಗಡೆ, ದಿಗªರ್ಶಕ ಡಾ| ವೈ.ವಿ. ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಕರ್ನಾಟಕ ಬ್ಯಾಂಕಿನ ಪರವಾಗಿ ಗೋಸ್ವರ್ಗಕ್ಕೆ 25 ಲಕ್ಷ ರೂ., ಹಿರಣ್ಯ ಗಣಪತಿ ಭಟ್‌ ಅವರು 10 ಲಕ್ಷ  ರೂ. ದೇಣಿಗೆ ನೀಡಿದರು.

ಪಾದೆಕಲ್ಲು ಡಾ| ವಿಷ್ಣು ಭಟ್‌ ಪ್ರಸ್ತಾವಿಸಿದರು. ಜಿಲ್ಲಾ ಗೋ ಪರಿವಾರದ ಉಪಾಧ್ಯಕ್ಷ ಮುರಳಿ ಹಸಂತಡ್ಕ ಸಭಾಪೂಜೆ ನೆರವೇರಿಸಿದರು. ಕೃಷ್ಣ ನೀರಮೂಲೆ ನಿರೂಪಿಸಿದರು.  

Advertisement

ದ.ಕ. ಜಿಲ್ಲೆಯಲ್ಲೂ  ಗೋ ಸ್ವರ್ಗ ಸಂಕಲ್ಪ
ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಮಾತನಾಡಿ, ವೀಕ್ಷಿಸಿದ ಎಲ್ಲರಿಗೂ ಗೋಸಂರಕ್ಷಣೆಗೆ ಸ್ಫೂರ್ತಿ ದೊರಕಬೇಕು ಎನ್ನುವುದೇ ಸಿದ್ಧಾಪುರದ ಗೋಸ್ವರ್ಗದ ಆಶಯ. ಪ್ರಥಮ ಗೋಸ್ವರ್ಗವನ್ನು ಎಲ್ಲರೂ ಸೇರಿ ಕಟ್ಟೋಣ. ಗೋಸ್ವರ್ಗ ನಮ್ಮ ಸ್ವಂತ ಹಕ್ಕಲ್ಲ. ಇದು ಇಡೀ ಸಮಾಜಕ್ಕೆ ಸೇರಿದ್ದು. ಗೋಸ್ವರ್ಗಕ್ಕೆ ಎಲ್ಲರ ಸೇವೆ ಸಲ್ಲಬೇಕು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶಾಲ ಭೂಮಿ ದೊರಕಿದರೆ ಇಲ್ಲೊಂದು ಸುಸಜ್ಜಿತ ರೀತಿಯ ಗೋಶಾಲೆ ನಿರ್ಮಾಣಕ್ಕೆ ಸಂಕಲ್ಪವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next