Advertisement

ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ: ಸಿದ್ದರಾಮಯ್ಯ

12:46 PM Nov 28, 2020 | keerthan |

ಬೆಂಗಳೂರು: ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ, ಆಗ ರಾಜ್ಯದಲ್ಲಿ ಉತ್ತಮ ವಾತಾವರಣ ನಿರ್ಮಾಣ ಆಗುತ್ತದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಲಸಿಗ ಶಾಸಕರ ಸಭೆ ವಿಚಾರವಾಗಿ ಮಾತನಾಡಿದರು. ಅವರು ಸಭೆ ಮಾಡಲಿ, ಬಿಡಲಿ ನಮಗೇನು! ಇವರು ವ್ಯಾಪಾರ ಮಾಡಿಕೊಂಡು ಬಿಜೆಪಿಗೆ ಹೋದವರು. ಅವರ ವ್ಯಾಪಾರ ನನಗೇನು ಗೊತ್ತು, ಇದರ ಬಗ್ಗೆ ನಾನು ಏನೂ ಹೇಳಲ್ಲ ಎಂದರು.

ಸಿಎಂ ರಾಜಕೀಯ ಕಾರ್ಯದರ್ಶಿ ಎನ್ .ಆರ್.ಸಂತೋಷ್ ಆತ್ಮಹತ್ಯೆ ಪ್ರಯತ್ನ ವಿಚಾರವಾಗಿ ಕೇಳಲಾದ ಪ್ರಶ್ನೆಗೆ, ಸಂತೋಷ್ ಯಾರು? ಅವರ ಸಮಸ್ಯೆ ನಮಗೇನು ಗೊತ್ತು? ಅದು ಅವರ ವೈಯುಕ್ತಿಕ ವಿಚಾರ. ರಾಜಕೀಯ ಒತ್ತಡ ಅದೆಲ್ಲ ಇದೆ ಎನ್ನುವುದು ನನಗೇನು ಗೊತ್ತು, ವಿಚಾರಣೆ ನಂತರ ಎಲ್ಲವೂ ಬರುತ್ತದೆ ಎಂದು ಹೇಳಿದರು.

ಇದನ್ನೂ ಓದಿ:ಅಪೇಕ್ಷಿತರನ್ನು ಮಂತ್ರಿ ಮಾಡುವುದು ಮುಖ್ಯಮಂತ್ರಿಗಳ ಪರಾಮಾಧಿಕಾರ: ನಳಿನ್ ಕಟೀಲ್

ವಿಧಾನಮಂಡಲ ಅಧಿವೇಶನ ವಿಚಾರದಲ್ಲಿ ಮಾತನಾಡಿದ ಅವರು, ಪ್ರವಾಹ ಸೇರಿದಂತೆ ಬೇರೆ ಬೇರೆ ವಿಚಾರಗಳಿವೆ. ಅಸೆಂಬ್ಲಿ ಪ್ರಾರಂಭವಾದ ನಂತರ ಗೊತ್ತಾಗಲಿದೆ. ಅಲ್ಲಿ ಮಾತನಾಡುವುದನ್ನು ನೀವೇ ನೋಡುವಿರಂತೆ ಎಂದರು.

Advertisement

ಲಿಂಗಾಯತ ಒಬಿಸಿಗೆ ಸೇರಿಸುವ ವಿಚಾರದಲ್ಲಿ ಪ್ರತಿಕ್ರಯಿಸಿದ ಸಿದ್ದರಾಮಯ್ಯ, ಒಬಿಸಿ ಪಟ್ಟಿಗೆ ಬರುವವರಿಗೆ ಒಂದು ಆಯೋಗವಿದೆ. ಪಟ್ಟಿಗೆ ಸೇರಿಸುವುದು, ಕೈಬಿಡುವ ನಿರ್ಧಾರ ಅದಕ್ಕೆ ಸೇರಿದೆ. ಆಯೋಗ ಮಾಡಬಹುದೆಂದು ವರದಿ ನೀಡಬೇಕು, ವರದಿ ನಂತರ ಅದರ ಬಗ್ಗೆ ಗಮನಹರಿಸಬಹುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next