ಚಿಕ್ಕಬಳ್ಳಾಪುರ: ಸಂಸದೆ ಸುಮಲತಾ ಅವರು ನಮ್ಮ ಪಕ್ಷಕ್ಕೆ ಬಂದರೆ ಲಾಭವಾಗಲಿದ್ದು, ಅವರು ಒಳ್ಳೆಯ ನಿರ್ಧಾರ ಕೈಗೊಳ್ಳಲಿದ್ದಾರೆಂಬ ನಂಬಿಕೆ ಇದೆ ಎಂದು ಆರೋಗ್ಯ ಸಚಿವ ಡಾ| ಕೆ. ಸುಧಾಕರ್ ಅಭಿಪ್ರಾಯಪಟ್ಟರು.
ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಳೆದ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪಕ್ಷ ಅವರನ್ನು ಬೆಂಬಲಿಸಿದೆ. ಅಲ್ಲದೆ ಅವರಿಗೆ ಮೋದಿ ಸರಕಾರ ಮಾಡುತ್ತಿರುವ ಕೆಲಸ ಮತ್ತು ಮುಂದಿನ ದಿನಗಳಲ್ಲಿ ಬಿಜೆಪಿಗೆ ಇರುವ ಭವಿಷ್ಯದ ಬಗ್ಗೆ ಅರಿವಿದೆ. ಹಾಗಾಗಿ ಅವರು ಉತ್ತಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್‌ನವರು ಹಲ್ಲು ಕಿತ್ತ ಹಾವನ್ನು ಬುಟ್ಟಿಯಲ್ಲಿದ್ದರು. ನಾವು ಹಲ್ಲಿರುವ ಹಾವನ್ನೇ ಇಟ್ಟಿದ್ದೇವೆ. ಹಾಗಾಗಿ ಲೋಕಾಯುಕ್ತರು ಪಕ್ಷಾತೀತವಾಗಿ ಕೆಲಸ ಮಾಡುತ್ತಿದ್ದಾರೆ. ನಿಮ್ಮ ರೀತಿಯಲ್ಲಿ ಮುಚ್ಚಿಹಾಕುವುದು, ಬಿ ರಿಪೋರ್ಟ್ ಕೊಡಿಸುವ ಕೆಲಸ ಮಾಡಿದ್ದೇವಾ? ಸತ್ಯ ಹೊರ ಬರುತ್ತಿದೆ, ಸತ್ಯ ತೋರಿಸುವ ಎದೆಗಾರಿಕೆ ಮುಖ್ಯಮಂತ್ರಿಗಳಿಗೆ ಇದೆ ಎಂದರು.