Advertisement

ಶ್ರದ್ಧೆಯಿದ್ದರೆ ಕೃಷಿಯಲ್ಲಿ ಯಶಸ್ಸು: ವಿನಯ್‌

01:34 PM Apr 26, 2017 | Team Udayavani |

ಧಾರವಾಡ: ಇಂದಿನ ಮಕ್ಕಳು ಮತ್ತು ಯುವ ಪೀಳಿಗೆಗೆ ಪರಿಸರ, ಕೃಷಿ ಹಾಗೂ ಪ್ರಕೃತಿ ಕುರಿತು ಜಾಗೃತಿ ಮೂಡಿಸಿ, ಅವರನ್ನು ಮುಂದಿನ ದಿನಗಳಲ್ಲಿ ಪರಿಸರದ ಸಂರಕ್ಷಣೆಯಲ್ಲಿ ಕ್ರಿಯಾತ್ಮಕವಾಗಿ ಪಾಲ್ಗೊಳ್ಳುವಂತೆ ಮಾಡಬೇಕಾದ ಹೊಣೆ ಎಲ್ಲರ ಮೇಲಿದೆ ಎಂದು ಸಚಿವ ವಿನಯ ಕುಲಕರ್ಣಿ ಹೇಳಿದರು. 

Advertisement

ತಾಲೂಕಿನ ಹಳ್ಳಿಗೇರಿಯ ಸಮೀಪದ ನೇಚರ್‌ ಫಸ್ಟ್‌ ಇಕೋವಿಲೇಜ್‌ನಲ್ಲಿ ಪಂಚವಟಿ ವನದ ಸಸಿಗಳನ್ನು ನೆಟ್ಟು ಉದ್ಘಾಟಿಸಿ ಮಾತನಾಡಿದ ಅವರು, ಈ ದಿಸೆಯಲ್ಲಿ ಇಂತಹ ಧ್ಯೇಯೋದ್ದೇಶಗಳನ್ನಿಟ್ಟುಕೊಂಡು ಒಂದು ಮಾದರಿಯ ಸ್ಥಳವಾಗಿ ನಿರ್ಮಾಣವಾಗುತ್ತಿರುವ ನೇಚರ್‌ ಫಸ್ಟ್‌ ಇಕೋ ವಿಲೇಜ್‌ ಧಾಡವಾಡದ ಹೆಮ್ಮೆಯ ಪ್ರತೀಕವಾಗಲಿ ಎಂದರು.  

ಇಂದಿನ ಯುವ ಜನಾಂಗ ಕೃಷಿಯಿಂದ ವಿಮುಖರಾಗದೆ, ಶ್ರದ್ಧೆಯಿಂದ ಮಾಡಿದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು. ಇದಕ್ಕೂ ಮುಂಚೆ ಇಕೋವಿಲೇಜ್‌ನಲ್ಲಿ ನಿರ್ಮಾಣಗೊಂಡ ಉದ್ಯಾನ, ಸಾಂಪ್ರದಾಯಿಕ ಆಹಾರ ಮನೆ, ಅದರಲ್ಲಿ ಉತ್ಪತ್ತಿಯಾಗುವ ತರಕಾರಿ ತ್ಯಾಜ್ಯದಿಂದ ಉಪಯೋಗಿಸಲ್ಪಡುವ ಗ್ಯಾಸ್‌, ಗೋಬರ್‌ ಗ್ಯಾಸ್‌ ಬಳಕೆ,

ಮಳೆ ನೀರು ಸಂಗ್ರಹದ ಮಾದರಿ, ಎರೆಹುಳು ಗೊಬ್ಬರದ ಉತ್ಪಾದನೆ,  ಸೌರಶಕ್ತಿ ಮತ್ತು ಪವನ ಶಕ್ತಿಗಳ ಜಂಟಿ ಮಿಶ್ರಣದಿಂದ ಉತ್ಪಾದನೆಯಾಗುವ ವಿದ್ಯುತ್ಛಕ್ತಿ, ಔಷಧಿಧಿ ಸಸ್ಯಗಳ ವನ, ಮಕ್ಕಳ ಉದ್ಯಾನ, ಹಗ್ಗದ ಸಾಹಸ ಕ್ರೀಡೆಗಳ ಸ್ಥಳ, ಸಸಿಗಳ ನರ್ಸರಿ, ಸಾವಯವ ಉತ್ಪನ್ನಗಳ ಮಳಿಗೆ ಎಲ್ಲವನ್ನೂ ಸಚಿವರು ವೀಕ್ಷಿಸಿದರು. 

ಇಕೋವಿಲೇಜ್‌ನ ಸಾವಯವ ಮಳಿಗೆಯ ಉದ್ಘಾಟಿಸಿದ ವೈಶುದೀಪ ಫೌಂಡೇಶನ್‌ ಮುಖ್ಯಸ್ಥೆ ಶಿವಲೀಲಾ ಕುಲಕರ್ಣಿ ಮಾತನಾಡಿ, ಇಂದಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ರಾಸಾಯನಿಕ ಪ್ರಮಾಣದ ಮಿಶ್ರಣ ಅತಿಯಾಗಿರುವುದು ಎಲ್ಲರಿಗೂ ತಿಳಿದ ವಿಷಯ. ಹೀಗಾಗಿ ಸಾವಯವ ರೈತರನ್ನು ಉತ್ತೇಜಿಸುವ ಕಾರ್ಯವಾಗಬೇಕಿದೆ.

Advertisement

ಹೀಗಾದಲ್ಲಿ ಮಾತ್ರ ಸಾವಯವ ಕೃಷಿ ಇನ್ನಷ್ಟು ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದರು. ಅಧ್ಯಕ್ಷತೆ ವಹಿಸಿದ್ದ ಇಕೋ ವಿಲೇಜ್‌ನ ಮುಖ್ಯಸ್ಥ ಪಂಚಯ್ಯ ಹಿರೇಮಠ ಮಾತನಾಡಿ, ಇಕೋವಿಲೇಜ್‌ ಒಂದು ಪರಿಸರ, ಕೃಷಿ, ಆರೋಗ್ಯ ಮತ್ತು ಆಹಾರದ ಒಂದು ಪ್ರಾಯೋಗಿಕ ಪಾಠಶಾಲೆಯಾಗಬೇಕೆಂಬ ಗುರಿ ಹೊಂದಿದ್ದು, ಇದಕ್ಕೆ ಸ್ವಲ್ಪ ಮನರಂಜನೆಯ ಲೇಪನವನ್ನು ನೀಡಿ ಇಂದಿನ ಮಕ್ಕಳಿಗೆ ಪರಿಸರದ ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. 

ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳು ಸ್ವಯಂ ಸ್ಫೂಧಿರ್ತಿಯಿಂದ ಇಕೋ ವಿಲೇಜ್‌ನೊಂದಿಗೆ ಕೈ ಜೋಡಿಸಿ, ಇದರ ಸದುಪಯೋಗ ಪಡೆದು ಇದೊಂದು ಮಾದರಿ ಸ್ಥಳವಾಗಿ ಹೊರಹೊಮ್ಮಲು ಸಹಕರಿಸಬೇಕು ಎಂದು ಮನವಿ ಮಾಡಿದರು. 

ಡಾ|ಸಂಜೀವ ಕುಲಕರ್ಣಿ,ಉಪಾಧ್ಯಕ್ಷರಾದ ಚಂದ್ರಶೇಖರ ಬೈರಪ್ಪನವರ, ನೇಚರ ಫಸ್ಟ್‌ ಸಂಸ್ಥೆಯ ವೀಣಾ ಹಿರೇಮಠ, ಡಾ| ಧೀರಜ ವೀರನಗೌಡರ, ಶಿವಾಜಿ ಸೂರ್ಯವಂಶಿ, ಅಸ್ಲಂಜಹಾನ ಅಬ್ಬಿಹಾಳ,  ಹೇಮಾಕ್ಷಿ ರೇಸೂರ, ಡಾ|ಶಕುಂತಲಾ ಮಾಸೂರಸೇರಿದಂತೆ ನೂರಾರು ಪರಿಸರ ಪ್ರೇಮಿಗಳು ಇದ್ದರು. ಇಕೋ ವಿಲೇಜ್‌ನ ಸಂಚಾಲಕ ಪ್ರಕಾಶ ಗೌಡರ ನಿರೂಪಿಸಿದರು. ಅನೀಲ ಅಳ್ಳೋಳ್ಳಿ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next