Advertisement

ಸಿದ್ರಾಮುಲ್ಲಾ ಖಾನ್ ಬಂದರೆ ಹಿಂದೂಗಳ….; ಸಿ.ಟಿ.ರವಿ ಆಕ್ರೋಶ

04:40 PM Nov 27, 2022 | Team Udayavani |

ಚಿಕ್ಕಮಗಳೂರು: ‘ಸಿದ್ರಾಮುಲ್ಲಾ ಖಾನ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಅಂತ್ಯ ಆಗುತ್ತದೆ. ನಾವು ಬಂದರೆ ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕವಾಗುತ್ತದೆ’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಿಡಿ ಕಾರಿದ್ದಾರೆ.

Advertisement

ಚಿಕ್ಕಮಗಳೂರಿನ ಕೊಪ್ಪದಲ್ಲಿ ಭಾನುವಾರ ನಡೆದ ಜನ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿ, ‘ಎಲೆಕ್ಷನ್ ಬಂದಾಗ ನಾನು ಹಿಂದೂ, ಆಮೇಲೆ ಕುಂಕುಮ ಕಂಡರೆ ಆಗಲ್ಲ’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿ ಕಾರಿದರು.

ಕಾಂಗ್ರೆಸ್ ವಿರುದ್ದ ಗುಡುಗಿದ ಸಿ.ಟಿ ರವಿ, ಭಾಷಣದ ವೇಳೆ ನಾಲಿಗೆ ಹರಿಬಿಟ್ಟರು. ‘ಹಿಂದೂ ಅಂದರೆ ಕೆಟ್ಟ ಶಬ್ದ ಅಂತಾರೆ ಮುಠ್ಠಾಳ ಕಾಂಗ್ರೆಸ್ ನವರು. ಸೇನೆಯಲ್ಲಿ ಸೈನಿಕರು ಎದುರು ಬದುರಾದಾಗ ಜೈ ಹಿಂದ್ ಅಂತಾರೆ. ಅಂತಹ ಹಿಂದೂ ಶಬ್ಧವನ್ನ ಕಾಂಗ್ರೆಸ್ ಅಪಮಾನಿಸುತ್ತಿದೆ.ಯಾರಿಗೆ ತನ್ನ ತಂದೆ ಯಾರು ಅಂತಾ ಅನುಮಾನವಿರುತ್ತೋ ಅಂತವರು ಸೈನಿಕರನ್ನ ಅನುಮಾನಿಸುತ್ತಾರೆ.ಕಾಂಗ್ರೆಸ್ ನವರು ನಾಮರ್ಧರು. ಈಗ ಇರುವರು ಇಟಲಿ ಗಾಂಧಿಗಳು’ ಎಂದು ಕಟು ಶಬ್ದಗಳಲ್ಲಿ ಟೀಕಿಸಿದರು.

ಮೂಸೋದಕ್ಕೂ ಬಿಡಲ್ಲ!
‘ಸರ್ಕಾರ ಬಂದರೆ ಮುಸ್ಲಿಂ ಸಿಎಂ ಮಾಡುತ್ತೇವೆ ಎಂದು ಒಬ್ಬರು ಹೇಳಿದ್ದಾರೆ. ಅವರಪ್ಪನಾಣೆ ಅಧಿಕಾರಕ್ಕೆ ಬರಲ್ಲ. ಮುಸ್ಲಿಮರಿಗೆ ತುಪ್ಪವನ್ನ ನೆಕ್ಕಲು ಅಲ್ಲ, ಮೂಸೋದಕ್ಕೂ ಬಿಡಲ್ಲ. ಟಿಪ್ಪು ಯುನಿವರ್ಸಿಟಿ ಮಾಡಿ ಜಿಹಾದಿ ಹೇಳಿ ಕೊಡ್ತಾರಂತೆ. ಟಿಪ್ಪು ಯುನಿವರ್ಸಿಟಿಗೆ ಕಲ್ಲು ಹಾಕೋದಕ್ಕೂ ಬಿಡಲ್ಲ. ಮೈಸೂರಿಗೆ ನೀವು ಮಾಡುತ್ತಿರುವ ಮೋಸಕ್ಕೆ ಜನ ಉತ್ತರ ಕೊಡ್ತಾರೆ’ ಎಂದು ಕಿಡಿ ಕಾರಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next