Advertisement

ನಿರ್ದಿಷ್ಟ ಗುರಿಯಿಂದ ಓದಿದರೆ ಐಎಎಸ್‌, ಕೆಎಎಸ್‌ ಸಾಧ್ಯ

07:29 AM Feb 20, 2019 | |

ದೇವನಹಳ್ಳಿ: ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಓದಿದರೆ ಐಎಎಸ್‌ ಮತ್ತು ಕೆಎಎಸ್‌ ಮಾಡಬಹುದು ಎಂದು 5ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಎನ್‌.ಸಂಶಿ ಹೇಳಿದರು.

Advertisement

ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಐಎಎಸ್‌ ಮತ್ತು ಕೆಎಎಸ್‌ ಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಕಾನೂನು ಸಾûಾರತಾ ರಥದ ಮೂಲಕ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 

ಸಾಧನೆಗೆ ಛಲವಿರಬೇಕು: ಐಎಎಸ್‌ ಮತ್ತು ಕೆಎಎಸ್‌ಗೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಾಗಾರಗಳು ಅನುಕೂಲವಾಗಲಿವೆ. ಪದವಿ ಪಾಸ್‌ ಆಗಿದ್ದರೆ ಇಂತಹ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು. ವಿದ್ಯಾರ್ಥಿಗಳು ಒಂದು ಗುಂಪು ಮಾಡಿ ವಿಷಯವಾರು ಚರ್ಚಿಸಬೇಕು. ಪ್ರತಿ ವಿದ್ಯಾರ್ಥಿಯಲ್ಲೂ ವಿವಿಧ ರೀತಿಯ ಸಾಮರ್ಥ್ಯ ಹಾಗೂ ಪ್ರತಿಭೆಗಳು ಇರುತ್ತವೆ. ಸಾಧನೆ ಮಾಡಲು ಛಲವಿರಬೇಕು. ಆಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದರು. 

ಬಡವರಿಗೆ ಉಚಿತ ಕಾನೂನು ಸೇವೆ: ದೇಶದಲ್ಲಿ 10 ಸಾವಿರ ಕಾನೂನುಗಳಿವೆ. ಅವುಗಳನ್ನು ಓದಲು ಕಷ್ಟವಾಗುತ್ತಿದೆ. 1988 ರಲ್ಲಿ ಕಾನೂನು ಸಾಕ್ಷರತೆ ಪ್ರಾರಂಭವಾಗಿದ್ದು, 1995ರಲ್ಲಿ ಜಾರಿಗೆ ಬಂದಿದೆ. ಪ್ರತಿ ಜನರಿಗೆ ಕಾನೂನು ಅರಿವು ಮೂಡಿಸಲು ಸಾಕಷ್ಟು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ. ಕಾನೂನು ಸೇವೆಗಳ ಸಮಿತಿಗೆ ಬಡವರು ಅರ್ಜಿ ಸಲ್ಲಿಸಿದರೆ ಉಚಿತವಾಗಿ ಪ್ರಕರಣವನ್ನು ನಡೆಸಿಕೊಡಲಾಗುವುದು. ವಕೀಲರನ್ನು ಸಹ ನೇಮಿಸಲಾಗುತ್ತದೆ. ಇದರಿಂದ ಕಕ್ಷಿದಾರರಿಗೆ ಅನುಲಕೂಲವಾಗಲಿದೆ ಎಂದರು. 

ಕಾನೂನು ಜ್ಞಾನ ಅಗತ್ಯ: ಎಲ್ಲರೂ ಕಾನೂನುಗಳನ್ನು ತಿಳಿಯಬೇಕು. ಸಾಮಾನ್ಯ ಕಾನೂನು ಜ್ಞಾನ ಪ್ರತಿಯೊಬ್ಬರಲ್ಲೂ ಇರಬೇಕು. ಮದುವೆ ಸಂದರ್ಭದಲ್ಲಿ ಹೆಣ್ಣಿಗೆ 18 ವರ್ಷ ಹಾಗೂ ಗಂಡಿಗೆ 21 ವರ್ಷ ತುಂಬಿರಬೇಕು. ಶಾಸನವಾಗಿ ಕಾನೂನುಗಳನ್ನು ರಚಿಸುತ್ತಾರೆ. ಸಂವಿಧಾನದಲ್ಲಿ ಕಾರ್ಯಾಂಗ, ಶಾಸಕಾಂಗ ಹಾಗೂ ನ್ಯಾಯಾಂಗವಿದ್ದು, ಅವುಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಹೇಳಿದರು.  

Advertisement

ಸಂವಿಧಾನದ ಬಗ್ಗೆ ತಿಳಿದುಕೊಳ್ಳಿ: ನ್ಯಾಯಾಧೀಶ ಆದಿತ್ಯ ಮಾತನಾಡಿ, ಸಂವಿಧಾನದ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ಹಾಗೂ ಪ್ರಸ್ತುತ ವಿದ್ಯಮಾಮಗಳ ಬಗ್ಗೆ ತಿಳಿಯಬೇಕು. 198 ದೇಶಗಳ ಪೈಕಿ 194 ದೇಶಗಳಲ್ಲಿ ಸಂವಿಧಾನದವಿದ್ದು, ಅದರಲ್ಲಿ ಲಿಖೀತ ಸಂವಿಧಾನವನ್ನು ನಮ್ಮ ದೇಶ ಹೊಂದಿದೆ. ಜನರ ಮನೆ ಬಾಗಿಲಿಗೇ ತೆರಳಿ ಕಾನೂನು ಅರಿವು ಮೂಡಿಸಲಾಗುತ್ತಿದೆ. ಐಎಎಸ್‌ ಮತ್ತು ಕೆಎಎಸ್‌ ವಿದ್ಯಾರ್ಥಿಗಳು ಸಂವಿಧಾನದ ಬಗ್ಗೆ ಹೆಚ್ಚಿನ ವಿಷಯ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು. 

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ್‌ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ತಾಲೂಕು ಕಾನೂನು ಸೇವೆಗಳ ಸಮಿತಿ ಪ್ರಭಾರ ಅಧ್ಯಕ್ಷೆ ಡಿ.ಮಂಜುಳಾ, ಅಪರ ಸಿವಿಲ್‌ ನ್ಯಾಯಾಧೀಶ ಅಬ್ದುಲ್‌ ಸಲೀಂ, ತಾಲೂಕು ವಕೀಲರ ಸಂಘದ ಅಧ್ಯಕ್ಷ ಬೈರೇಗೌಡ, ಉಪಾಧ್ಯಕ್ಷ ಗೋವಿಂದಸ್ವಾಮಿ, ನಲ್ಲೂರು ಗ್ರಾಪಂ ಅಧ್ಯಕ್ಷೆ ಸಾವಿತ್ರಮ್ಮ ಹಾಗೂ ವಕೀಲರು ಭಾಗವಹಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next