Advertisement

Mandya; ರಾಜಕಾರಣ ಮಾಡುವುದಾದರೆ ಅದು ಮಂಡ್ಯದಿಂದಲೇ: ಸಂಸದೆ ಸುಮಲತಾ

01:22 AM Mar 21, 2024 | Team Udayavani |

ಬೆಂಗಳೂರು: ಅತ್ತ ಮಂಡ್ಯದಿಂದ ಜೆಡಿಎಸ್‌ ಸ್ಪರ್ಧಿಸಲಿದೆ ಎಂದು ಮಾಜಿ ಸಿಎಂ ಕುಮಾರ ಸ್ವಾಮಿ ಘೋಷಿಸಿದ್ದರೆ, ಇತ್ತ ಹಾಲಿ ಸಂಸದೆ ಸುಮಲತಾ ಅವರೂ ಪಟ್ಟು ಸಡಿಲಿಸಲು ಒಲ್ಲೆ ಎಂದಿದ್ದಾರೆ.

Advertisement

ದೆಹಲಿಗೆ ತೆರಳಿದ್ದ ಕುಮಾರ ಸ್ವಾಮಿ, ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಬಂದಿದ್ದರು. ಹಾಸನ, ಮಂಡ್ಯ, ಕೋಲಾರದಿಂದ ಜೆಡಿ ಎಸ್‌ ಸ್ಪರ್ಧೆಯನ್ನು ಖಚಿತ ಪಡಿಸಿ ಚಿಕಿತ್ಸೆಗೆಂದು ಚೆನ್ನೈಗೆ ತೆರಳಿದ್ದಾರೆ. ಈ ಮಧ್ಯೆ 3 ದಿನಗಳಿಂದ ದೆಹಲಿಯಲ್ಲೇ ಬೀಡು ಬಿಟ್ಟಿದ್ದ ಸುಮಲತಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರನ್ನು ಭೇಟಿ ಮಾಡಿದರಲ್ಲದೆ, ಬುಧವಾರ ಬೆಂಗಳೂರಿಗೆ ಮರಳಿದ್ದು ನಾನು ರಾಜಕಾರಣ ಮಾಡುವುದಾದರೆ ಅದು ಮಂಡ್ಯದಿಂದಲೇ ಎನ್ನುವ ಮೂಲಕ ಪಟ್ಟನ್ನು ಬಿಗಿಗೊಳಿಸಿದ್ದಾರೆ.

ಯಡಿಯೂರಪ್ಪ, ಬಿ.ವೈ.ವಿಜಯೇಂದ್ರ ಅವರೊಂದಿಗೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು, ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸಿದರು. ಬೇರೆಯವರು ಸಾಕಷ್ಟು ಸಲಹೆ ಕೊಟ್ಟಿ ದ್ದಾರೆ. ಅನೇಕ ಪ್ರಸ್ತಾಪ ಮುಂದಿಟ್ಟಿದ್ದಾರೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನೇ ಬೇಡ ಎಂದವಳು ನಾನು. ಇನ್ನು ಚಿಕ್ಕಬಳ್ಳಾಪುರಕ್ಕೆ ಏಕೆ ಹೋಗಲಿ? ನಾನೇನಿದ್ದರೂ ರಾಜಕಾರಣ ಮಾಡುವುದಾದರೆ ಮಂಡ್ಯ ದಿಂದಲೇ. ಈಗಲೂ ಅದನ್ನೇ ಹೇಳಿ ಬಂದಿದ್ದೇನೆ. ಅವರೂ ಸಕಾರಾತ್ಮಕವಾಗಿದ್ದಾರೆ ಎನ್ನುವ ಮೂಲಕ ಮತ್ತಷ್ಟು ಕುತೂಹಲ ಹುಟ್ಟು ಹಾಕಿದ್ದಾರೆ.

ಪ್ರಧಾನಿ ನರೇಂದ್ರ ಅವರು ಬಿಡುವಿಲ್ಲದ ಸಂದರ್ಭದಲ್ಲಿಯೂ ಕರೆ ಮಾಡಿ ನನ್ನೊಂದಿಗೆ ಮಾತನಾಡಲು ಹೇಳಿದ್ದಾರೆ. ಅದಕ್ಕಾಗಿಯೇ ನನ್ನನ್ನು ಕರೆಯಿಸಿಕೊಂಡಿದ್ದಾಗಿ ನಡ್ಡಾ ಅವರು ಹೇಳಿದ್ದಾರೆ. ಕರ್ನಾಟಕದಲ್ಲಿ ನಮಗೆ ನಿಮ್ಮಂತಹ ನಾಯಕರ ಆವಶ್ಯಕತೆ ಇದೆ ಎಂದಿದ್ದಾರೆ. ಆದರೆ ಇನ್ನೂ ಯಾವುದೂ ಅಂತಿಮವಾಗಿಲ್ಲ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next