Advertisement

ವೇತನ ಕೊಡದಿದ್ದರೆ ವಿಷ ನೀಡಿ

04:00 PM Mar 30, 2019 | Team Udayavani |

ದೇವದುರ್ಗ: ಬಾಕಿ ವೇತನ ಪಾವತಿಸಿ ಇಲ್ಲವಾದಲ್ಲಿ ಅಧಿಕಾರಿಗಳೇ ವಿಷ ಕೊಡಿ ಇಲ್ಲವಾದರೆ ಕಚೇರಿ ಮುಂದೆ ಪ್ರಾಣ ಬಿಡುತ್ತೇವೆ ಎಂದು ವಸತಿ ನಿಲಯ ಅಡುಗೆ ಸಿಬ್ಬಂದಿ ಅಳಲು ತೋಡಿಕೊಂಡ ಪ್ರಸಂಗ ಶುಕ್ರವಾರ ಸಮಾಜ ಕಲ್ಯಾಣ ಕಚೇರಿಯಲ್ಲಿ ಜರುಗಿತು.

Advertisement

ಈ ವೇಳೆ ಮಾತನಾಡಿದ ಸಿಬ್ಬಂದಿ, ಪದೇ ಪದೇ ಕಚೇರಿಗೆ ಅಲೆದು ಸಾಕಾಗಿದೆ. ಅಧಿಕಾರಿಗಳು ಈ ತಿಂಗಳು, ಮುಂದಿನ ತಿಂಗಳು ಎನ್ನುತ್ತ ಬಾಕಿ ವೇತನ ಪಾವತಿ ಮಾಡುತ್ತೇವೆ ಎಂಬ ಹುಸಿ ಭರವಸೆಗಳು ತುಂಬಿ ಹೋಗಿವೆ ಎಂದು ಆರೋಪಿಸಿದರು.

15ಕ್ಕೂ ಹೆಚ್ಚು ಸಿಬ್ಬಂದಿ ವಸತಿ ನಿಲಯ ಬಿಟ್ಟು ವೇತನ ಪಾವತಿಸುವಂತೆ ಕಚೇರಿ ಒಳಗೆ ಧರಣಿ ಮಾದರಿಯಲ್ಲಿ ಪಟ್ಟು ಹಿಡಿಯಲಾಯಿತು. ಕೆಲ ದಲಿತ ಸಂಘಟನೆಗಳು ವಸತಿ ನಿಲಯ ಸಿಬ್ಬಂದಿ ಬಾಕಿ ವೇತನ ಪಾವತಿಗೆ ಮಾಡುವಂತೆ ಈಗಾಗಲೇ ಎರಡೂಮೂರು ಬಾರಿ ಹೋರಾಟ ಕೈಗೊಂಡರು
ಅಧಿಕಾರಿಗಳು ಮಾಡುವ ಭರವಸೆಯಲ್ಲಿ ಹಸಿದ ಹೊಟ್ಟೆಗೆ ಹಿಟ್ಟು ಇಲ್ಲದಂತಾಗಿದೆ.

ವಸತಿ ನಿಲಯದಲ್ಲಿ ದುಡಿಯುವ ಸಿಬ್ಬಂದಿ ಬಡತನ ಕುಟುಂಬಗಳು ವೇತನದಿಂದಲೇ ಮಕ್ಕಳಿಗೆ ವಿದ್ಯಾಭ್ಯಾಸ ಕುಟುಂಬ ನಿರ್ವಹಣೆ ಮಾಡಬೇಕಾಗಿದೆ. ಪ್ರತಿ ತಿಂಗಳು ವೇತನ ಪಾವತಿ ಆಗದಿರುವುದರಿಂದ ಇದೀಗ ವೇತನಕ್ಕಾಗಿ ಕಚೇರಿಯಲ್ಲಿ ವಿಷ ಕೊಟ್ಟು ಬಿಡಿ ಪ್ರಾಣ ಬಿಡುತ್ತೇವೆ ಎಂದು ಅಳಲು ತೋಡಿಕೊಂಡರು.

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿ ವಸತಿ ನಿಲಯಗಳಲ್ಲಿ ಅಡುಗೆ ರಾತ್ರಿ ಕಾವಲುಗಾರ ಸೇರಿ ಇತರೆ ಕೆಲಸಗಳು ಮಾಡುವ ಇಲ್ಲಿನ ಸಿಬ್ಬಂದಿ ದಲಿತ ಸಮುದಾಯದವರು. ನೂರಾರು ವಿದ್ಯಾರ್ಥಿಗಳಿಗೆ ರೊಟ್ಟಿ ಮಾಡಬೇಕು. ಟಿನ್‌ಶೆಡ್‌ನ‌ಲ್ಲಿ ಮಾಡುವುದರಿಂದ ಬೆಂಕಿ ಶಾಖದೊಂದಿಗೆ ಬಿಸಿಲ ಬೇಸಿಗೆ ತತ್ತರಿಸಿದ ಸಿಬ್ಬಂದಿ ಇಲ್ಲಿ ಬಿಟ್ಟರೇ ಕೆಲಸಕ್ಕೆ ಅಲೆಯಬೇಕು.

Advertisement

ಹಾಗಾಗಿ ಇಂದೋ, ನಾಳೆ ವೇತನ ಪಾವತಿ ಆಗುವ ಭರವಸೆಯಲ್ಲಿ ಅನಿವಾರ್ಯವಾಗಿ ದುಡಿಯಬೇಕಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಿಬ್ಬಂದಿ ಬಾಕಿ ವೇತನ ಕೂಡಲೇ ಪಾವತಿಸಬೇಕು. ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ದಲಿತ ಮುಖಂಡ ಬೂದೆಪ್ಪ ಕ್ಯಾದಿಗಿ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next