Advertisement

ಜನತಾದಳ ಅಧಿಕಾರಕ್ಕೆ ಬಂದರೆ ಹಿಂದೂ-ಮುಸ್ಲಿಂ ಜಗಳವೇ ಬ್ಯಾನ್: ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

01:01 PM Oct 02, 2022 | Team Udayavani |

ಕಲಬುರಗಿ: ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಜನರು ಜಾತ್ಯಾತೀತ ಜನತಾದಳ ಪಕ್ಷವನ್ನು ಅಧಿಕಾರಕ್ಕೆ ತಂದರೆ ಹಿಂದೂ – ಮುಸ್ಲಿಂ ಎನ್ನುವ ಜಗಳವೇ ಬ್ಯಾನ್ ಆಗುತ್ತದೆ ಎಂದು ಜನತಾದಳದ ರಾಜ್ಯ ಅಧ್ಯಕ್ಷ ಸಿಎಂ ಇಬ್ರಾಹಿಂ ಹೇಳಿದರು.

Advertisement

ಇಂದಿನಿಂದ ಅಫ್ಜಲ್ಪುರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷದ ಹುರಿಯಾಳು ಶಿವಕುಮಾರ್ ನಾಟೀಕರ್ ಆರಂಭಿಸಿರುವ 500 ಕಿ.ಮೀ ಪಾದಯಾತ್ರೆಗೆ ಚಾಲನೆ ನೀಡುವ ಮುನ್ನ ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಪಿಎಫ್ಐ ಸಂಘಟನೆಯನ್ನು ಬ್ಯಾನ್ ಮಾಡಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿದ ಅವರು, ನಿಮ್ಮ ಬಳಿಯಲ್ಲಿ ಸಂಘಟನೆಯ ವಿರುದ್ಧ ಸರಿಯಾದ ದಾಖಲೆಗಳಿದ್ದರೆ ಬಂಧಿಸಿ ಜೈಲಿಗೆ ಹಾಕಿ. ಇಲ್ಲವೇ ಕ್ರಮ ಕೈಗೊಳ್ಳಿ ಅದನ್ನು ಬಿಟ್ಟು ಕೇವಲ ಅನುಮಾನಾಸ್ಪದವಾಗಿ ಸಂಘಟನೆಯನ್ನು ಬ್ಯಾನ್ ಮಾಡುವುದು, ಅದರ ಮುಖಂಡರನ್ನು ಹೆದರಿಸುವುದು, ಜೈಲಿಗಟ್ಟುವುದು ಪ್ರಜಾಪ್ರಭುತ್ವದ ಕತ್ತು ಹಿಸುಕಿದಂತೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆದ್ದರಿಂದ ಜನತೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತಂದರೆ ಇಂತಹ ಹಿಂದೂ- ಮುಸ್ಲಿಂ ಜಗಳಗಳನ್ನೇ ಬ್ಯಾನ್ ಮಾಡಲಾಗುವುದು ಎಂದು ಹೇಳಿದರು.

ಸಂಘಟನೆಗಳನ್ನು ಬ್ಯಾನ್ ಮಾಡಿರುವುದು ಸರಿಯಾದ ಕ್ರಮವಲ್ಲ. ಈ ಹಿಂದೆ ಇಂದಿರಾ ಗಾಂಧಿಯವರು ಕೂಡ ಆರೆಸ್ಸೆಸ್ಸನ್ನು ಬ್ಯಾನ್ ಮಾಡಿದ್ದರು. ಆದರೆ ಅದು ಪುನಃ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಅದರಿಂದ ಏನೂ ಬದಲಾವಣೆ ಸಾಧ್ಯವಾಗಲೇ ಇಲ್ಲ ಆದ್ದರಿಂದ ಬ್ಯಾನ್ ಮಾಡುವ ಬದಲು ಅವರನ್ನು ಕರೆದು ಮಾತನಾಡಿಸಿ ಸಮಸ್ಯೆ ಬಗೆಹರಿಸಿ ಮನಪರಿವರ್ತನೆ ಮಾಡಬೇಕು ಎಂದು ಸಲಹೆ ನೀಡಿದರು.

Advertisement

5 ವರ್ಷ ಸಂಘಟನೆ ಬ್ಯಾನ್ ಮಾಡುವುದರಿಂದ ಎಲ್ಲವೂ ಮುಗಿದು ಹೋಗುವುದಿಲ್ಲ ಎಂದ ಅವರು ಜಾತಿ ಜಾತಿಗಳ ಮಧ್ಯೆ ಕಲಹ ಹಚ್ಚುವ ಮತ್ತು ಜನರಲ್ಲಿ ಜಾತಿ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ಭಯ ಉಂಟು ಮಾಡುತ್ತಿರುವ ಬಜರಂಗದಳ ಮತ್ತು ಆರ್ ಎಸ್ ಎಸ್ ಸಂಘಟನೆಗಳನ್ನು ಕೂಡ ಬ್ಯಾನ್ ಮಾಡಲಿ ಎಂದು ಸವಾಲು ಹಾಕಿದರು.

ಈ ಕುರಿತು ಆರೆಸ್ಸೆಸ್ ಮತ್ತು ಬಜರಂಗದಳ ಬ್ಯಾನ್ ಮಾಡಬೇಕು ಎನ್ನುವ ಕಾಂಗ್ರೆಸ್ ಹೇಳಿಕೆಯನ್ನು ತರಾಟೆಗೆ ತೆಗೆದುಕೊಂಡ ಅವರು ಕಾಂಗ್ರೆಸ್ನವರು ಅಧಿಕಾರದಲ್ಲಿದ್ದಾಗ ನೀವೇನು ಮಾಡಿದಿರಿ? ಯಾಕೆ ಆಗ ನೀವು ಬ್ಯಾನ್ ಮಾಡಲಿಲ್ಲ?. ಈಗ ನಿಮಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲಿಕಾರ್ಜುನ ಖರ್ಗೆ ಕುರಿತು ಮಾತನಾಡಿದ ಅವರು, ನೋಡ್ರಿ ಮಲ್ಲಿಕಾರ್ಜುನ್ ಖರ್ಗೆ ಎಐಸಿಸಿ ಅಧ್ಯಕ್ಷರಾದರೆ ನಮ್ಮ ಪಕ್ಷದ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಅದೇನಿದ್ದರೂ ಅವರ ಪಕ್ಷದ ಆಂತರಿಕ ವಿಚಾರ. ಅದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ವಾಸ್ತವದಲ್ಲಿ ಕಾಂಗ್ರೆಸ್ ಪಕ್ಷ ಹಿಂದಿನಂತೆ ತುಂಬಾ ಬಲಾಡ್ಯವಾಗಿ ಉಳಿದುಕೊಂಡಿಲ್ಲ. ಅದೊಂದು ರೀಜಿನಲ್ ಪಕ್ಷವಾಗಿ ಪರಿವರ್ತನೆಯಾಗುತ್ತಿದೆ. ಮಹಾತ್ಮಾಗಾಂಧಿ, ಜವಾಹರಲಾಲ್ ನೆಹೆರೂ, ಇಂದಿರಾ ಗಾಂಧಿ ಅವರಿದ್ದ ಕಾಂಗ್ರೆಸ್ಸೇ ಬೇರೆ ಇಂದಿನ ಕಾಂಗ್ರೆಸ್ಸೆ ಬೇರೆ ಎಂದ ಅವರು, ಆಗಿನ ಖದರ್ ಉಳಿದಿಲ್ಲ ಎಂದರು.

ಇದನ್ನೂ ಓದಿ:ಸಿಧು ಮೂಸೇವಾಲಾ ಹತ್ಯೆ ಪ್ರಕರಣದ ಆರೋಪಿ ಪೊಲೀಸ್ ಕಸ್ಟಡಿಯಿಂದ ಪರಾರಿ; ಪೊಲೀಸರಿಂದ ಶೋಧ ಕಾರ್ಯ

ಈಗ ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ರಾಹುಲ್ ನಡೆ ನಿಜಕ್ಕೂ ಕುತೂಹಲ ಮೂಡಿಸಿದೆ. ಯಾರ ಭಾರತ ಯಾರು ಜೋಡ್ಸೋದು ಯಾಕೆ? ಅದು ಕಡಿದು ಹೋಗಿದೆ? ಎನ್ನುವ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದ ಅವರು, ಭಯಮುಕ್ತ ಮತ್ತು ಹಸಿವು ಮುಕ್ತ ಭಾರತವನ್ನು ನಾವು ಕಟ್ಟಬೇಕಾಗಿದೆ ಎಂದರು.

ಈ ನಿಟ್ಟಿನಲ್ಲಿ ಜಾತ್ಯಾತೀತ ಜನತಾದಳ ರಿಜಿನಲ್ ಪಾರ್ಟಿಯಾದರೂ ಕೂಡ, ರಾಜ್ಯದಲ್ಲಿ ರೈತರು, ನಿರುದ್ಯೋಗ, ಶಾಲೆ, ಶಿಕ್ಷಣ ಮತ್ತು ಕುಡಿಯುವ ನೀರಿನ ಕುರಿತು ಮುಂದಿನ 5 ವರ್ಷಗಳ ಕಾಲದ ಯೋಜನೆ ನಮ್ಮ ಬಳಿ ಇದೆ. ಮತ್ತು ಅದನ್ನು ಅತ್ಯಂತ ದೂರದೃಷ್ಟಿ ಕೋನದಿಂದ ರೂಪಿಸಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next