Advertisement

ಮಳೆ ಬಂದ್ರೆ ನಾಲಾ ದಾಟೋದೇ ಸಮಸ್ಯೆ

03:59 PM Aug 11, 2022 | Team Udayavani |

ಚಿಂಚೋಳಿ: ತಾಲೂಕಿನ ಕರ್ಚಖೇಡ ಗ್ರಾಮದಿಂದ ಸ್ಥಳಾಂತರವಾದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹತ್ತಿರ ಸಣ್ಣ ನಾಲಾ ಮಳೆಗಾಲದಲ್ಲಿ ತುಂಬಿ ಹರಿಯುವುದರಿಂದ ದಾಟಲು ಮಕ್ಕಳು ಭಯಪಡುವಂತಾಗಿದ್ದು, ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ಸದಸ್ಯ ಸಲೀಂ ಪಾಷಾ ಒತ್ತಾಯಿಸಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ಚಖೇಡ ಗ್ರಾಮದಲ್ಲಿ ಕಳೆದ 50ವರ್ಷದ ಹಿಂದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ ನಿರ್ಮಿಸಲಾಗಿದೆ. ಸದ್ಯ ಈ ಕಟ್ಟಡ ಶಿಥಿಲಗೊಂಡಿದ್ದು ಎಲ್ಲೆಡೆ ಸೋರುತ್ತಿದೆ. ಹೀಗಾಗಿ ಗ್ರಾಮದಾಚೆ ಇರುವ ಕಟ್ಟಡಕ್ಕೆ ಶಾಲೆಯನ್ನು ಸ್ಥಳಾಂತರಿಸಲಾಗಿದೆ. ಈ ಶಾಲೆಯಲ್ಲಿ 1ರಿಂದ 8ನೇ ತರಗತಿ ವರೆಗೆ ಓದಲು ಅವಕಾಶವಿದೆ. ಆದರೆ ಈ ಶಾಲೆಗೆ ತೆರಳಲು ಮಳೆಗಾಲದಲ್ಲಿ ಸಣ್ಣ ನಾಲೆ ದಾಟಬೇಕಾಗುತ್ತದೆ. ಈ ವೇಳೆ ವಿದ್ಯಾರ್ಥಿಗಳು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಆದ್ದರಿಂದ ಶೀಘ್ರವೇ ಸಣ್ಣ ಸೇತುವೆ ಅಥವಾ ಸಿಡಿ ನಿರ್ಮಿಸಿ ಕೊಡ ಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕೋರಿದರು.

ಹಳೆ ಶಾಲೆ ದುರಸ್ತಿ ಕುರಿತು ನಿಡಗುಂದಾ ಗ್ರಾಮದ ಹತ್ತಿರ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ತಹಶೀಲ್ದಾರ್‌, ಶಿಕ್ಷಣ ಇಲಾಖೆ ಅಧಿಕಾರಿಗಳು ನೀಡಿದ ಭರವಸೆ ಇನ್ನು ಈಡೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next