ಚಿಕ್ಕಮಗಳೂರು : ”ಟಿಪ್ಪು ಕಾಲದಲ್ಲಿ ಇದ್ದಿದ್ರೆ ನಾನೇ ಉರಿಗೌಡ, ನಂಜೇಗೌಡ ತರ ನಿಲ್ಲುತ್ತಿದ್ದೆ.ಇತಿಹಾಸದಲ್ಲಿ ಮತಾಂಧನ ವಿರುದ್ಧ ಕತ್ತಿ ಎತ್ತಿದವನು ಎನಿಸಿಕೊಳ್ಳುತ್ತಿದ್ದೆ, ಹೇಡಿ ಆಗುತ್ತಿರಲಿಲ್ಲ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬುಧವಾರ ಸಿ.ಟಿ.ರವಿ ಮತ್ತೆ ಕಿಡಿ ಕಾರಿದ್ದಾರೆ.
ಸಿ.ಟಿ.ರವಿ, ಅಶ್ವಥ್ ನಾರಾಯಣ್ ಉರೀಗೌಡ-ನಂಜೇಗೌಡ ಎಂಬ ಕಾಂಗ್ರೆಸ್ ಟ್ವಿಟ್ ಗೆ ಸಮರ್ಥನೆ ನೀಡಿ ಹೌದು,ನಾವು ಅವರೇ. ನಮಗೆ ಅದು ಖುಷಿ ಮತ್ತು ಹೆಮ್ಮೆಇದೆ.ಗುಲಾಮಿ ಮಾನಸೀಕತೆಯಲ್ಲಿ ಬದುಕುವ ಜನರಿಗಿಂತ ಹಾಗೇ ಕರೆಸಿಕೊಳ್ಳುವುದು ಒಳ್ಳೆಯದು. ಇಂದು ಟಿಪ್ಪು ಇದ್ದಿದ್ದರೆ ಆಂಜನೇಯ ದೇವಸ್ಥಾನವನ್ನ ಮಸೀದಿ ಮಾಡಿದರೆ ಸುಮ್ನಿರ್ತಿದ್ವಾ, ಕೆಲವರು ಸತ್ಯ ಗೊತ್ತಿದ್ರು ಹೇಡಿಗಳಂತೆ ಬದುಕಿದ್ರು, ವೋಟಿನ
ಆಸೆಗೆ ಒಪ್ಪಿಕೊಳ್ಳಲು ತಯಾರಿರಲಿಲ್ಲ, ನಾವು ಸತ್ಯವನ್ನು ಪ್ರತಿಪಾದನೆ ಮಾಡಿದೆವು ಎಂದರು.
ದುರ್ದೈವವೆಂದರೆ ಕೆಲವರು ಕಪಾಲೇಶ್ವರ ಬೆಟ್ಟವನ್ನು ಮತಾಂತರ ಮಾಡಲು ಹೊರಟಿದ್ದರು ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ ನೀಡಿದರು. ಅಂತಹ ಜನ ಇಂದು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಗುಲಾಮಿ ಮಾನಸಿಕತೆಯ ಆ ಜನ ಕಪಾಲೇಶ್ವರ ಬೆಟ್ಟವನ್ನ ಮತಾಂತರ ಮಾಡಲು ಮುಂದಾಗಿದ್ದರು.ಇಂದು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ ಎಂದು ಕಿಡಿ ಕಾರಿದರು.