Advertisement
ಯಡ್ತಾಡಿ ಗ್ರಾ.ಪಂ. ವ್ಯಾಪ್ತಿಯ ಹೇರಾಡಿ ಗ್ರಾಮದಲ್ಲಿ ಐತಿಹಾಸಿಕ ರಾಜನಗರಿ ಬಾರ್ಕೂರು ರೈಲ್ವೇ ನಿಲ್ದಾಣವಿದೆ. ಕೋಟ ಹಾಗೂ ಬ್ರಹ್ಮಾವರ ಹೋಬಳಿ ವ್ಯಾಪ್ತಿಯ ನಿವಾಸಿಗಳು ಹಾಗೂ ಹೊರ ಜಿಲ್ಲೆಗಳಿಂದ ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳಿಗೆ ಆಗಮಿಸುವ ರೈಲ್ವೇ ಪ್ರಯಾಣಿಕರು ಈ ನಿಲ್ದಾಣವನ್ನೇ ಅವಲಂಬಿಸಿದ್ದಾರೆ. ಇದು ಬ್ರಹ್ಮಾವರ ತಾಲೂಕಿನ ಏಕೈಕ ರೈಲ್ವೇ ನಿಲ್ದಾಣ ಕೂಡ ಹೌದು. ಸಾಕಷ್ಟು ಮಂದಿ ಪ್ರತಿ ದಿನ ಇಲ್ಲಿಂದ ಪ್ರಯಾಣ ಬೆಳೆಸುತ್ತಾರೆ. ಇಲ್ಲಿರುವ ಹತ್ತಾರು ಸಮಸ್ಯೆಗಳನ್ನು ಎದುರಿಸಿಕೊಂಡೇ ಪ್ರಯಾಣಿಸುತ್ತಾರೆ. ಬಾರಕೂರು ರೈಲು ನಿಲ್ದಾಣದ ಮೂಲಕ ಮಡ್‌ಗಾಂವ್-ಮಂಗಳೂರು ಪ್ಯಾಸೆಂಜರ್ ಹಾಗೂ ಎಕ್ಸ್‌ಪ್ರೆಸ್ ರೈಲುಗಳು, ಬೆಂಗಳೂರು-ಕಾರವಾರ ಪಂಚಗಂಗಾ ರೈಲು, ಮುಂಬೈನ ಮತ್ಸ್ಯಗಂಧ ರೈಲು ಸೇರಿದಂತೆ 75 ರೈಲುಗಳು ದಿನವೊಂದಕ್ಕೆ ಓಡಾಡುತ್ತವೆ.
Related Articles
Advertisement
ಪ್ರಯಾಣಿಕರು ಟ್ರ್ಯಾಕ್‌ಗೆ ಇಳಿದು ಕಂಬಿಗಳ ಮಧ್ಯದಲ್ಲಿ ಕೊಳಕಿನ ನಡುವೆ ನಡೆದೇ ಸಾಗಬೇಕು. ಅಲ್ಲಿಂದ ನೆಲದಿಂದಲೇ ನೇರವಾಗಿ ರೈಲನ್ನು ಹತ್ತಬೇಕು. ಇದು ಅನಾರೋಗ್ಯ ಪೀಡಿತರು, ಹಿರಿಯ ನಾಗರಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತದೆ. ಹೀಗಾಗಿ ಎರಡನೇ ಫ್ಲಾಟ್ ಫಾರ್ಮ್ ತುರ್ತಾಗಿ ನಿರ್ಮಾಣ ವಾಗಿ ಮೇಲ್ಸೇತುವೆ ನಿರ್ಮಾಣವಾದರೆ ವೃದ್ಧರು, ಮಹಿಳೆ- ಮಕ್ಕಳಿಗೆ ಸಹಾಯವಾಗಲಿದೆ.
ಸಂಸದರ ಮೂಲಕ ಕೇಂದ್ರಕ್ಕೆ ಮನವಿ
ಬಾರ್ಕೂರು ರೈಲ್ವೇ ನಿಲ್ದಾಣದ ಅಭಿವೃದ್ಧಿ ಬಗ್ಗೆ ಈ ಹಿಂದೆ ಹಲವು ಬಾರಿ ಮನವಿ ಸಲ್ಲಿಸಲಾಗಿತ್ತು. ಆದರೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿರಲಿಲ್ಲ. ಇದೀಗ ಮತ್ತೂಮ್ಮೆ ನಮ್ಮ ಸಂಸದರ ಮೂಲಕ ರೈಲ್ವೇ ಸಚಿವರಿಗೆ ಬೇಡಿಕೆಗಳನ್ನು ಸಲ್ಲಿಸಲಾಗುವುದು.
-ಪ್ರಕಾಶ್ ಶೆಟ್ಟಿ, ಹೇರಾಡಿ, ಅಧ್ಯಕ್ಷರು, ಯಡ್ತಾಡಿ ಗ್ರಾಮ ಪಂಚಾಯತ್
ಬದಲಾವಣೆ ಆಗಲಿ
ಹಳಿ ದಾಟುವುದು ಭಾರಿ ಸಮಸ್ಯೆ ಆಗುತ್ತಿದೆ. ಹೀಗಾಗಿ ಎರಡನೇ ಫ್ಲಾಟ್ ಫಾರ್ಮ್, ಮೇಲ್ಚಾವಣಿ ವಿಸ್ತರಣೆ ಹಾಗೂ ಪಾರ್ಕಿಂಗ್ ಯಾರ್ಡ್ ಅಭಿವೃದ್ಧಿ ಸೇರಿದಂತೆ ಒಂದಷ್ಟು ಬದಲಾವಣೆ ಆಗಬೇಕಿದ್ದು ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿ ವತಿಯಿಂದ ಬಾರ್ಕೂರು ಶಾಂತರಾಮ ಶೆಟ್ಟಿ ಮೊದಲಾದವರ ನೇತೃತ್ವದಲ್ಲಿ ಸಂಸದರಿಗೆ ಬೇಡಿಕೆ ಸಲ್ಲಿಸಲಾಗಿದೆ.
-ಪ್ರಥ್ವಿರಾಜ್ ಶೆಟ್ಟಿ ಬಿಲ್ಲಾಡಿ, ರೈಲ್ವೇ ಹಿತರಕ್ಷಣ ಸಮಿತಿ ಪ್ರಮುಖರು
ಪ್ರಮುಖ ಬೇಡಿಕೆಗಳೇನು?
1ಒಂದು ಟ್ರ್ಯಾಕ್‌ನಿಂದ ಇನ್ನೊಂದಕ್ಕೆ ಹೋಗಲು ರೈಲು ಹಳಿಯನ್ನೇ ಬಳಸುವುದು ಅಪಾಯಕಾರಿ. ಹೀಗಾಗಿ
2ನೇ ಪ್ಲ್ರಾಟ್‌ಫಾರಂ, ಮೇಲ್ಸೇತುವೆ ಬೇಕು.
2ನಿಲ್ದಾಣದ ಎಡ ಬಲದಲ್ಲಿ ಸ್ವಲ್ಪ ದೂರಕ್ಕೆ ಮಾತ್ರ ಮೇಲ್ಛಾವಣಿ ಇದೆ. ಬಿಸಿಲು, ಮಳೆಗೆ ನಿಲ್ಲಲು ಸಮಸ್ಯೆ. ಮೇಲ್ಛಾವಣಿ ವಿಸ್ತರಣೆ ಆಗಬೇಕು.
3ಪಾರ್ಕಿಂಗ್ ವ್ಯವಸ್ಥೆ ಸರಿಯಾಗಿ ಇಲ್ಲ. ಪಾರ್ಕಿಂಗ್‌ಗೆ ಮೀಸಲಿರಿಸಿದ ಜಾಗದಲ್ಲಿ ಮಳೆಗಾಲದಲ್ಲಿ ನೀರು ನಿಂತು ಕೆಸರುಮಯವಾಗಿರುತ್ತದೆ.
4ಅಗತ್ಯವಿರುವ ಅಭಿವೃದ್ಧಿ ಕಾರ್ಯಗಳ ಜತೆಗೆ ಈ ನಿಲ್ದಾಣವನ್ನು ಮೇಲ್ದರ್ಜೆಗೇರಿಸಿ ಇನ್ನೂ ಹೆಚ್ಚಿನ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು.
5ಈಗ ಕೆಲವೇ ರೈಲುಗಳು ನಿಲ್ಲುತ್ತವೆ. ಹೆಚ್ಚಿನ ರೈಲುಗಳು ನಿಲುಗಡೆಗೆ ಅವಕಾಶ ಸಿಗಬೇಕು.