Advertisement

ದೇಶದ ವಿಚಾರದಲ್ಲಿ ಸೈದ್ಧಾಂತಿಕ ನಿಲುವಿಗೆ ಎರಡನೇ ಸ್ಥಾನ ನೀಡಬೇಕು: ಅಲಿಗಢ್ ವಿವಿಯಲ್ಲಿ ಮೋದಿ

02:52 PM Dec 22, 2020 | Nagendra Trasi |

ಅಲಿಗಢ್: ದೇಶದ ಅಭಿವೃದ್ದಿಯ ವಿಚಾರವನ್ನು ಯಾವುದೇ ಕಾರಣಕ್ಕೂ ರಾಜಕೀಯದ ಕನ್ನಡಕದ ಮೂಲಕ ನೋಡಬಾರದು. ಅಲ್ಲದೇ ದೇಶದ ಅಭಿವೃದ್ಧಿ ವಿಚಾರ ಬಂದಾಗ ಅಲ್ಲಿ ಸೈದ್ದಾಂತಿಕ ವ್ಯತ್ಯಾಸಗಳು ಎರಡನೇ ಸ್ಥಾನದಲ್ಲಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

Advertisement

ಅವರು ಮಂಗಳವಾರ(ಡಿಸೆಂಬರ್ 22, 2020) ಅಲಿಗಢ್ ಮುಸ್ಲಿಮ್ ಯೂನಿರ್ವಸಿಟಿ(ಎಎಂಯು)ಯ ಶತಮಾನೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ್ದು, ಇಂದು ದೇಶದಲ್ಲಿ ಯಾವುದೇ ಪಕ್ಷಪಾತವಿಲ್ಲದೇ  ಸಂವಿಧಾನದ ಹಕ್ಕಿನ ಪ್ರಕಾರ ಎಲ್ಲರಿಗೂ ಆದ್ಯತೆ ನೀಡಲಾಗಿದೆ. ಯಾವುದೇ ಧಾರ್ಮಿಕ ಪಕ್ಷಪಾತವಿಲ್ಲದೇ ಎಲ್ಲಾ ವರ್ಗದ ಬಡವರಿಗೂ ಸರ್ಕಾರದ ಯೋಜನೆಗಳು ತಲುಪುತ್ತಿದೆ ಎಂದರು.

ಯಾವುದೇ ಪಕ್ಷಪಾತವಿಲ್ಲದೆ ದೇಶದ ಎಲ್ಲಾ ಪ್ರಜೆಗಳಿಗೂ ಪ್ರಯೋಜನವಾಗುವ ಅಭಿವೃದ್ದಿ ಕಾರ್ಯಗಳಿಗೆ ದೇಶ ಒತ್ತು ನೀಡಿದೆ. ಧರ್ಮದ ಕಾರಣದಿಂದ ಅಭಿವೃದ್ದಿಯಿಂದ ಹಿಂದುಳಿಯಬಾರದು ಎಂಬುದು ಸರ್ಕಾರದ ಯೋಜನೆ ಮತ್ತು ಪ್ರತಿಯೊಬ್ಬರ ಕನಸುಗಳನ್ನು ಈಡೇರಿಸಲು ಬದ್ಧವಾಗಿರುವುದಾಗಿ ಪ್ರಧಾನಿ ಮೋದಿ ಹೇಳಿದರು.

ಯಾವುದೇ ಧರ್ಮದಲ್ಲಿ ಜನಿಸಿರಲಿ, ನಮ್ಮ ಹಿತಾಸಕ್ತಿಗಳು ರಾಷ್ಟ್ರೀಯ ಗುರಿಯೊಂದಿಗೆ ಹೇಗೆ ಬೆರೆತಿದೆ ಎಂಬುದನ್ನು ನೋಡಬೇಕಾಗಿದೆ. ಸಮಾಜದಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳು ಇದ್ದೇ ಇದೆ. ಆದರೆ ದೇಶದ ಅಭಿವೃದ್ಧಿ ವಿಚಾರ ಬಂದಾಗ ಉಳಿದೆಲ್ಲ ವಿಚಾರಕ್ಕೆ ಎರಡನೇ ಪ್ರಾಮುಖ್ಯತೆ ನೀಡಬೇಕು. ದೇಶದ ವಿಷಯ ಬಂದಾಗ ಅಲ್ಲಿ ಸೈದ್ಧಾಂತಿಕ ವ್ಯತ್ಯಾಸದ ಪ್ರಶ್ನೆಯೇ ಇರಬಾರದು. ಅಲಿಗಢ್ ಮುಸ್ಲಿಮ್ ವಿಶ್ವವಿದ್ಯಾಲಯ ಹಲವು ಸ್ವಾತಂತ್ರ್ಯ ಹೋರಾಟಗಾರರನ್ನು ನೀಡಿರುವ ಹಿನ್ನೆಲೆಯಲ್ಲಿ ನಾನು ತರ್ಕಬದ್ಧವಾಗಿ ಈ ಮಾತನ್ನು ಹೇಳುತ್ತಿದ್ದೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next