ವಿಜಯಪುರ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ರೇಷ್ಮೆ ಹುರಿಕಾರರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕರ್ನಾಟಕ ರೇಷ್ಮೆ ಮಂಡಳಿ ಬದ್ಧವಾಗಿದೆ. ಶೀಘ್ರ ದಲ್ಲಿಯೇ ಹುರಿಕಾರರಿಗೆ ಗುರುತಿನ ಚೀಟಿ ನೀಡಲಾಗುವುದು ಎಂದು ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷೆ ಸವಿತಾ ವಿ. ಅಮರ ಶೆಟ್ಟಿ ಹೇಳಿದರು.
ಪಟ್ಟಣದ ಮಂಡಿಬೆಲೆ ರಸ್ತೆಯ ನೇಕಾರರ ಮಗ್ಗದ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿ, ರೀಟೇಲರ್‌ಗಳು ಖಾಸಗಿಯಾಗಿಯ ವರನ್ನು ಸಂಪರ್ಕಿಸುತ್ತೀರ, ಸ್ಟಾಕ್ ಸಹ ಕಡಿಮೆ ಆಗುತ್ತಿದೆ. ನೀವು ಕೆಎಸ್‌ಎಂಬಿ ಜೊತೆ ಬಾಂಧವ್ಯ ಇಟ್ಟುಕೊಂಡರೆ ಸರ್ಕಾರದಿಂದ ಸಹಕಾರ ನೀಡಲು ಸಾಧ್ಯ ಎಂದರು.
ಹಂತ ಹಂತವಾಗಿ ಸುಧಾರಣೆ: ಯಾರಿಗೂ ಅನ್ಯಾಯವಾಗದಂತೆ ಒಳ್ಳೆಯ ಬೆಲೆ ನಿಗದಿ ಮಾಡಿಕೊಳ್ಳುವ ಆಲೋಚನೆ ಸರ್ಕಾರಕ್ಕೆ ಇದೆ. ಗೂಡು ಮಾರುಕಟ್ಟೆಯಲ್ಲಿ ವಾರ ವಾರವೂ ಒಂದು ಬೆಲೆ ನಿಗದಿ ಮಾಡಿ ಮಾರಾಟ ಮಾಡಿ ದರೆ ಯಾರಿಗೂ ನಷ್ಟ ಉಂಟಾಗುವುದಿಲ್ಲ. ಹಂತ ಹಂತವಾಗಿ ಕೆಲವು ಸುಧಾರಣೆಗಳನ್ನು ತರುತ್ತಿದ್ದು, ಸಮಯಾವಕಾಶ ಕೊಡಿ, ಎಲ್ಲೇ ಖರೀದಿಸಿದರೂ ದರ ಒಂದೇ ಇರುವಂತೆ ಮುಂದಿನ ದಿನಗಳ ಬೆಲೆ ನಿಗದಿಯಾಗುತ್ತದೆ ಎಂದರು. ಪೇಪರ್‌ನಲ್ಲಿ ಆನ್‌ಲೈನ್‌ನಲ್ಲಿ ಚಿನ್ನದ ಪ್ರತಿ ದಿನದ ದರ ಪ್ರಕಟವಾಗುವಂತೆ ರೇಷ್ಮೆ ಗೂಡಿನ ದರವೂ ಪ್ರತಿ ದಿನವೂ ಆಧುನಿಕರಿಸುತ್ತೇವೆ. ಪತ್ರಿ ಕೆಗಳಲ್ಲಿ ಪ್ರಕ ಟಿಸುತ್ತೇವೆ. ಪೇಪರ್‌ನಲ್ಲಿ ಯಾವ ದರ ನಮೂದಿ ಸುತ್ತೇವೆ. ಅದೇ ದರ ಸರ್ಕಾರ ಮತ್ತು ಖಾಸಗಿ ಯವರಿಗೂ ಅನ್ವಯಿಸುತ್ತದೆ. ಕೆ ಎಸ್‌ಎಂಬಿ ದರ ಅನುಸರಿಸಿದರೆ ಯಾರಿಗೂ ಮೋಸ ಆಗುವುದಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ:ಮಧ್ವ ನವಮಿ ಉತ್ಸವ ಆಚರಣೆ