Advertisement

ಮೂರ್ತಿ ಪೂಜೆಗಿಂತ ಆದರ್ಶ ಪಾಲಿಸಿ

01:03 PM Apr 16, 2018 | |

ಕಲಬುರಗಿ: ಮೂರ್ತಿ ಪೂಜೆಗಿಂತ ಮೊದಲು ಮಹಾಪುರುಷರ ಆದರ್ಶ ಪಾಲಿಸುವುದು ಅಗತ್ಯವಾಗಿದೆ ಎಂದು ಎನ್‌.ವಿ. ಪದವಿ ಕಾಲೇಜಿನ ಪ್ರಾಚಾರ್ಯ ಡಾ| ಹೇಮಂತ ಕೊಲ್ಹಾಪೂರ ತಿಳಿಸಿದರು.

Advertisement

ನಗರದ ಎನ್‌.ವಿ. ಸಂಸ್ಥೆಯ ಪದವಿ ಕಾಲೇಜಿನ ಎನ್‌ಎಸ್‌ಎಸ್‌ ಘಟಕದಿಂದ ಹಮ್ಮಿಕೊಂಡಿದ್ದ ಭಾರತ ರತ್ನ, ಸಂವಿಧಾನ ಶಿಲ್ಪಿ ಡಾ| ಅಂಬೇಡ್ಕರರ 127ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಹಾಪುರುಷರನ್ನು ದೇವರು ಎಂದು ತಿಳಿಯದೇ ಅವರ ಗುಣಾದರ್ಶಗಳನ್ನು ಅಳವಡಿಸಿಕೊಳ್ಳಬೇಕು. ಸಮಾಜದಲ್ಲಿ ಬದಲಾವಣೆ ಗಾಳಿ ಬೀಸಬೇಕಾದರೆ, ವೈಚಾರಿಕ ಕ್ರಾಂತಿಯಾಗಬೇಕು. ವಿಚಾರಗಳನ್ನು ತಿಳಿ ಹೇಳಲಾಗಿದ್ದರೂ, ಅವುಗಳ ಆಚರಣೆಗಳು ಬಾಕಿ ಉಳಿದಿವೆ ಎಂದರು.

ಉಪಪ್ರಾಚಾರ್ಯ ಡಾ| ಆನಂದತೀರ್ಥ ಕಿತ್ತೂರ, ಪತ್ರಕರ್ತ ಸಂಗಮನಾಥ ಆರ್‌. ರೇವತಗಾಂವ ಅಂಬೇಡ್ಕರ ಕುರಿತು ಮಾತನಾಡಿದರು.  ಸರ್ಕಾರಿ ಪದವಿ ಕಾಲೇಜನ ಇತಿಹಾಸ ಪ್ರಾಧ್ಯಾಪಕ ಡಾ| ಸರ್ವೋದಯ ಶಿವಪುತ್ರ ಅತಿಥಿ ಉಪನ್ಯಾಸಕರಾಗಿ ಅಂಬೇಡ್ಕರ್‌ರ ಜೀವನ ಸಾಧನೆ ಕುರಿತು ಉಪನ್ಯಾಸ ನೀಡಿದರು.

ಪವನಕುಮಾರ ಹೂಗಾರ ಪ್ರಾರ್ಥಿಸಿದರು. ಡಾ| ದಯಾನಂದ ಶಾಸ್ತ್ರೀ ಸ್ವಾಗತಿಸಿದರು. ಡಾ| ಕಾಶೀನಾಥ ನೂಲಕರ್‌ ಪರಿಚಯಿಸಿದರು. ಪ್ರೊ| ಉದಯಕುಮಾರ ದೇಶಮುಖ ನಿರೂಪಿಸಿದರು. ಪ್ರೊ| ಯು.ಜಿ. ಸರದೇಶಪಾಂಡೆ ವಂದಿಸಿದರು. ರಾಜ್ಯಶಾಸ್ತ್ರ ವಿಷಯದಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಡಾ| ಕಾಶೀನಾಥ ನೂಲಕರ್‌ ನಗದು ಬಹುಮಾನ ವಿತರಿಸಿದರು. ಡಾ| ಗುರುರಾಜ ದಂಡಾಪೂರ, ಸುಖೇಶ ದೇಶಮುಖ, ನಾಗರಾಜ ಕುಲಕರ್ಣಿ, ರಾಘವೇಂದ್ರ ಕುಲಕರ್ಣಿ, ಸೂರ್ಯಕಾಂತ ಸುಜ್ಯಾತ್‌ ಹಾಗೂ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next