Advertisement

ವೈದ್ಯರು-ಶುಶ್ರೂಷಾ ಸಿಬ್ಬಂದಿಗೆ ಐಸಿಯು ತರಬೇತಿ

06:17 PM Jan 21, 2022 | Team Udayavani |

ಬಾಗಲಕೋಟೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮತ್ತು ಕೇರ್‌ ಇಂಡಿಯಾ ಸಹಯೋಗದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಶುಶೂಷಾ ಸಿಬ್ಬಂದಿಗೆ ಕಾರ್ಯಾಗಾರ ಜರುಗಿತು.

Advertisement

ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ|ಪ್ರಕಾಶ ಬಿರಾದಾರ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲಾ ಆಸ್ಪತ್ರೆಯಲ್ಲಿ ಐಸಿಯು, ವೆಂಟಿಲೇಟರ್‌ ಬಗ್ಗೆ ತರಬೇತಿ ಹೊಂದಿದವರು ವಿರಳವಿರುವುದನ್ನು ಮನಗಂಡ ಜಿಲ್ಲಾ  ಧಿಕಾರಿಗಳು ಮಣಿಪಾಲ ಆಸ್ಪತ್ರೆ ಮಲ್ಲೇಶ್ವರಂ ಮತ್ತು ಬೆಂಗಳೂರಿನ ಬಿಎಂಜೆಎಚ್‌ ಆಸ್ಪತ್ರೆಯ ಕನ್ಸಲ್ಟೆಂಟ್‌ ಇಂಟೆನ್ಸಿವಿಸ್ಟ್‌ ಅವರ ಜತೆ ಮಾತನಾಡಿ ತರಬೇತಿ ನೀಡಲು ಕೇಳಿಕೊಂಡಿದ್ದರು. ಈ ಹಿನ್ನೆ‌ಲೆಯಲ್ಲಿ ಅವರ ಮಾರ್ಗದರ್ಶನದಲ್ಲಿ
ಜಿಲ್ಲಾ ಆಸ್ಪತ್ರೆಯಲ್ಲಿ 3 ದಿನಗಳ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಕೋವಿಡ್‌ ಐಸಿಯು ಮತ್ತು ಕೋವಿಡ್‌ ಅಲ್ಲದ ಐಸಿಯು ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಯ ಪ್ರಸ್ತುತ ಕಾರ್ಯ ಘಟಕವನ್ನು ಉತ್ತೇಜಿಸುವ ನಿಟ್ಟಿನಲ್ಲಿ ತರಬೇತಿ ಸಹಾಯಕಾರಿಯಾಗಲಿದೆ. ಒಟ್ಟು 17 ವೈದ್ಯರು ಹಾಗೂ 45 ಜನ ಶುಶ್ರೂಷಕರು ತರಬೇತಿ ಪಡೆಯಲಿದ್ದು, ಈ ರೀತಿಯ ತರಬೇತಿ ಹಮ್ಮಿಕೊಂಡಿದ್ದು, ರಾಜ್ಯದಲ್ಲಿಯೇ ಪ್ರಥಮ ಎಂದು ಹೇಳಿದರು.

ನಂತರ ಮೂರು ದಿನಗಳ ಕಾಲ ನಡೆದ ಕಾರ್ಯಾಗಾರದಲ್ಲಿ ಮಣಿಪಾಲ ಆಸ್ಪತ್ರೆ ಮಲ್ಲೇಶ್ವರಂ ಮತ್ತು ಬೆಂಗಳೂರಿನ ಬಿ.ಎಂ. ಜೆ.ಎಚ್‌ ಆಸ್ಪತ್ರೆಯ ಕನ್ಸಲ್ಟೆಂಟ್‌ ಇಂಟೆನ್ಸಿವಿಸ್ಟ್‌ ಮತ್ತು ವೈದ್ಯ ಡಾ| ಬಸವರಾಜ ಕುಂಟೋಜಿ ಅವರ ನೇತೃತ್ವದ ತಂಡ ತರಬೇತುದಾರರಾದ ಡಾ| ಬಾಲಸುಬ್ರಮಣ್ಯಂ ಇವಿ, ಡಾ| ರಾಘವೇಂದ್ರ ವನಕಿ (ಮಕ್ಕಳ ತೀವ್ರ ತಜ್ಞ), ಸತೀಶ, ಸಂತೋಷ, ಮತ್ತು ಕೇರ್‌ ಇಂಡಿಯಾ ತಂಡದ ಬೆಂಬಲದೊಂದಿಗೆ ಡಾ| ಸೆಂಡಿಲ್‌, ಡಾ|ಆನಂದ್‌ ರೆಡ್ಡಿ ಮತ್ತು ಬೆಂಗಳೂರಿನ ಜಯಶ್ರೀ ಅವರು ಐಸಿಯು, ವೆಂಟಿಲೇಟರ್‌ ಹಾಗೂ ಎಮರ್‌ಜೆನ್ಸಿ ಕೇರ್‌ ಬಗ್ಗೆ ತರಬೇತಿ ನೀಡಿದರು.

ತರಬೇತಿ ತಂಡವು ಐಸಿಯು ಮತ್ತು ತುರ್ತು ಆರೈಕೆಯ ಬಗ್ಗೆ ವಿವರವಾದ ಚರ್ಚೆ ನಡೆಸಿತು. ಮತ್ತು ವಯಸ್ಕ ಐಸಿಯು ಮತ್ತು ಮಕ್ಕಳ ಐಸಿಯುಗಾಗಿ ವಿಶೇಷವಾಗಿ 3 ಆರ್ಡಿ ಕೋವಿಡ್‌ ತರಂಗವನ್ನು ಮನಸ್ಸಿನಲ್ಲಿಟ್ಟುಕೊಂಡು ವೆಂಟಿಲೇಟರ್‌ಗಳು ಮತ್ತು ಎಚ್‌ಎಫ್‌ ಎನ್‌ಸಿ ಮತ್ತು ಆಮ್ಲಜನಕ ಸಾಧನ ಬಳಸಲು ಅನುಭವವನ್ನು ನೀಡಿದರು. ವಯಸ್ಕರು, ಮಗು ಮತ್ತು ಶಿಶುಗಳಿಗೆ ಬೇಸಿಕ್‌ ಜೀವನ ಬೆಂಬಲ ಕೌಶಲ್ಯಗಳ ತರಬೇತಿ ನೀಡಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next