Advertisement

ಐಸಿಯೂ ಬೆಡ್, ಆಕಿಜನ್ ವ್ಯವಸ್ಥೆಗೆ ಒತ್ತು

05:34 PM May 27, 2021 | Team Udayavani |

ರಾಮನಗರ: ಕೋವಿಡ್ ಸೋಂಕು ನಿಯಂತ್ರಿಸುವ ಹಿನ್ನೆಲೆಯಲ್ಲಿ ಸೋಂಕಿತರ ಚಿಕಿತ್ಸೆಗೆ ನರೆವಾಗುವಂತೆ 4 ಐಸಿಯೂ ಬೆಡ್ ಗಳು ಉಳ್ಳ ಕಂಟೈನರ್ ಸಿದ್ಧವಾಗುತ್ತಿದೆ. ತಾಲೂಕು ಆಸ್ಪತ್ರೆಯ ಆವರಣದಲ್ಲಿ ಈ ಕಂಟೈನರ್ ಇರಲಿದೆ. ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಡಿಸಿಎಂ ಡಾ.ಸಿ.ಎನ್.ಅಶ್ವಥನಾರಾಯಣ ಅವರ ಮೇಲೆ ಒತ್ತಡ ಹೇರಿ ಈ ವ್ಯವಸ್ಥೆ ಯನ್ನು ಕಲ್ಪಿಸಿದ್ದೇನೆ. ಜಿಲ್ಲೆಯಲ್ಲಿ ಈ ವ್ಯವಸ್ಥೆ ಪ್ರಥಮವಾಗಿದೆ ಎಂದು ಉದಯವಾಣಿ ಕಿರುಸಂದರ್ಶನದಲ್ಲಿ ಎ. ಮಂಜುನಾಥ್ ವಿವರಿಸಿದ್ದಾರೆ.

Advertisement

  ಕೊರೊನಾ ಪರಿಸ್ಥಿತಿ ನಿಮ್ಮ ಕ್ಷೇತ್ರದಲ್ಲಿ ಹೇಗಿದೆ?

ಪರಿಸ್ಥಿತಿ ಸುಧಾರಿಸುತ್ತಿದೆ. ಸೋಂಕಿತರ ಸಂಖ್ಯೆ ಕಡಿಮೆ ಯಾಗುತ್ತಿದೆ. ಸೋಂಕಿನಿಂದ ಗುಣಮುಖರಾಗುತ್ತಿ ರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಮರಣ ಪ್ರಮಾಣ ಇಳಿಮುಖ ಸಮಾಧಾನಕರ ಸಂಗತಿ.

  ಕೋವಿಡ್ ಸಂಕಷ್ಟಗಳಿಗೆ ಪರಿಹಾರ ಸಿಕ್ಕಿದೆಯೇ?

2ನೇ ಅಲೆಯಲ್ಲಿ ಆಕ್ಸಿಜನ್ ಹಾಸಿಗೆಗಳ ತೀವ್ರ ಕೊರತೆ ಎದುರಾಯಿತು. ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಾಕ್ಷಣ ಬಹುತೇಕ ಸೋಂಕಿತರು ಆಸ್ಪತ್ರೆಗೆ ಬರಲಿಲ್ಲ. ಸಮಸ್ಯೆ ತೀವ್ರಗೊಂಡ ನಂತರ ಆಸ್ಪತ್ರೆಗೆ ಬಂದಿ ದ್ದಾರೆ. ಹೀಗಾಗಿ ಆಂಬ್ಯುಲೆನ್ಸ್, ಆಕ್ಸಿಜನ್ ಬೆಡ್ ಒದಗಿಸುವುದು ತುಸು ಸಮಸ್ಯೆಯಾಗಿತ್ತು. ಕೆಲವರನ್ನು ರಾಮನಗರದ ಕೋವಿಡ್ ರೆಫರಲ್ ಆಸ್ಪ ತ್ರೆಗೆ, ರಾಜರಾಜೇಶ್ವರಿ ಆಸ್ಪತ್ರೆಗೂ ದಾಖಲಿಸಲಾಗಿತ್ತು. ಬಳಿಕ ತ್ವರಿತಗತಿಯಲ್ಲಿ ಪರಿಸ್ಥಿತಿಯನ್ನು ನಿರ್ವಹಿಸಲಾಗಿದೆ. ಚಿಕಿತ್ಸೆಗೆ ಬೇಕಾದ ಔಷಧಿಗಳಿಗೆ ಕೊರತೆ ಅಷ್ಟಾಗಿ ಕಾಡಲಿಲ್ಲ.

Advertisement

 ಕೋವಿಡ್ ಆಸ್ಪತ್ರೆಗಳು ಕೇರ್ ಸೆಂಟರ್ಗಳಿಗೆ ಭೇಟಿ ಕೊಟ್ಟಿದ್ದೀರಾ?

ಹೌದು. ಕೊಟ್ಟಿದ್ದೇನೆ. ಆಸ್ಪತ್ರೆಗಳಿಗೂ ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದೇನೆ. ಕೋವಿಡ್ ಕೇರ್ ಸೆಂಟರ್ ಗಳಿಗೂ ಭೇಟಿ ಕೊಟ್ಟು ಮಾಹಿತಿ ಸಂಗ್ರಹಿಸಿದ್ದೇನೆ. ಗುಣಮಟ್ಟದ ಆಹಾರ ಪೂರೈಕೆಗೆ ಖಡಕ್ ಸೂಚನೆಗಳನ್ನು ಕೊಡಲಾಗಿದೆ. ಮೂಲ ಸೌಕರ್ಯ ಕೊರತೆ ಯಾಗದಂತೆ ಎಚ್ಚರವಹಿಸಲು ಸೂಚಿಸಿದ್ದೇನೆ. ವಾರಕ್ಕೊಮ್ಮೆ ಕೋವಿಡ್ ವಿಚಾರದಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದು, ಮಾಹಿತಿ ಪಡೆಯುತ್ತಿದ್ದೇನೆ. ಕರ್ಫ್ಯೂ ನಿರ್ವಹಣೆ ವಿಚಾರದಲ್ಲೂ ನಿಗಾ ವಹಿಸಲಾಗಿದೆ.

 ಕೋವಿಡ್ ವಿಚಾರದಲ್ಲಿ ಶಾಸಕರಾಗಿ, ಒಬ್ಬ ವ್ಯಕ್ತಿ ಯಾಗಿ ಏನು ಕೊಡುಗೆ?

ಶಾಸಕನಾಗಿ ಸೋಂಕಿತರ ಚಿಕಿತ್ಸೆಗೆ ಬೇಕಾದ ವ್ಯವಸ್ಥೆ ಗಳನ್ನು ಕಲ್ಪಿಸಲು ಜಾಗ್ರತೆವಹಿಸಿದ್ದೇನೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಕಂಪನಿ ಯವರಿಗೆ ಮನವಿ ಮಾಡಿ ಈಗಾಗಲೆ 10 ಆಕ್ಸಿಜನ್ ಸಾಂದ್ರಕಗಳ ವ್ಯವಸ್ಥೆ ಮಾಡಿದ್ದೇನೆ. ಇನ್ನು 10 ಸಾಂದ್ರಕಗಳು ಬರಲಿದೆ. ಅಲ್ಲದೆ, ಖಾಸಗಿ ಉದ್ಯಮಿಗಳಿಂದಲೂ ನೆರವು ಪಡೆದು 6 ಸಾಂದ್ರಕಗಳನ್ನು ಕೊಡಿಸಿದ್ದೇನೆ. ಒಬ್ಬ ಜವಾಬ್ದಾರಿ ವ್ಯಕ್ತಿಯಾಗಿ ಕ್ಷೇತ್ರ ವ್ಯಾಪ್ತಿ ಯಲ್ಲಿ ಅಹಿರ್ನಿಶಿ ಶ್ರಮಿಸುತ್ತಿರುವ ಆಶಾ, ಆರೋಗ್ಯ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಆಹಾರ ಕಿಟ್ಗಳನ್ನು ವಿತರಿಸಿದ್ದೇನೆ. ವೈದ್ಯರು, ಶುಶ್ರೂಕಿಯರಿಗೂ ನೆರವಾಗಿದ್ದೇನೆ.

ಬಿ.ವಿ.ಸೂರ್ಯ ಪ್ರಕಾಶ್

Advertisement

Udayavani is now on Telegram. Click here to join our channel and stay updated with the latest news.

Next