ನವ ದೆಹಲಿ : ಕೋವಿಡ್ ರೂಪಾಂತರಿ ಸೋಂಕು ಡೆಲ್ಟಾ ರೂಪಾಂತರಿ ಸೋಂಕು ಲಸಿಕ ಸ್ವೀಕಾರ ಮಾಡಿದವರಿಗೂ ತಗುಲುವ ಸಾಮರ್ಥ್ಯವನ್ನು ಹೊಂದಿದೆ. ಮತ್ತು ಲಸಿಕೆಯ ಪರಿಣಾಮದಿಂದ ಡೆಲ್ಟಾ ಸೋಂಕಿನಿಂದ ಸಾವಿನ ಸಾಧ್ಯತೆ ತೀರಾ ಕಡಿಮೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್)ಯ ಅಧ್ಯಯನ ವರದಿ ತಿಳಿಸಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಚೆನ್ನೈನಲ್ಲಿ ನಡೆಸಿದ ಅಧ್ಯಯನದಲ್ಲಿ ಈ ವರದಿ ತಿಳಿದು ಬಂದಿದೆ.
ಇದನ್ನೂ ಓದಿ : ಬಂಟರ ಭವನ ಪರಿಸರಕ್ಕೊಂದು ಅತ್ಯುತ್ತಮ ಕೊಡುಗೆ: ಅಮೋಲ್ ಬಲ್ವಾಡ್ಕರ್
ಆಗಸ್ಟ್ 17 ರಂದು ಜರ್ನಲ್ ಆಫ್ ಇನ್ಫೆಕ್ಷನ್ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಐಸಿಎಂಆರ್-ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಎಪಿಡೆಮಿಯಾಲಜಿಯ ಸಾಂಸ್ಥಿಕ ನೈತಿಕ ಸಮಿತಿಯಿಂದ ಅಂಗೀಕರಿಸಲ್ಪಟ್ಟಿದೆ. ಡೆಲ್ಟಾ ರೂಪಾಂರಿ ಸೋಂಕು ಅಥವಾ ಬಿ .1617.2 ಲಸಿಕೆ ಸ್ವೀಕರಿಸಿದವರಿಗೂ ತಗಲಬಹುದು ಎಂದು ತಿಳಿಸಿದೆ. ಆದರೇ, ಇದರ ಪರಿಣಾಮದಿಂದ ಲಸಿಕೆ ಸ್ವೀಕಾರ ಮಾಡಿದವರಿಂದ ಇನ್ನೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ತೀರಾ ಕಡಿಮೆ ಇದೆ ಎಂದು ವರದಿ ತಿಳಿಸಿದೆ.
ಸಣ್ಣ ಮಟ್ಟದ ಆರೋಗ್ಯ ಸಮಸ್ಯೆಗಳು ಕಾಣಸಿಕೊಳ್ಳಬಹುದು, ಹೊರತಾಗಿ ಬೇರೇನೂ ಗಂಭೀರ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲವೆಂದು ಮಾಹಿತಿ ನೀಡಿದೆ. ಈ ರೂಪಾಂತರಿ ಸೋಂಕಿನಿಂದ ಸಾವು ಸಂಭವಿಸುವುದು ಕಡಿಮೆ ಎಂದು ಹೇಳಿದೆ.
ಇನ್ನು, ಎರಡೂ ಡೋಸ್ ಲಸಿಕೆಯನ್ನು ಸ್ವೀಕರಿಸಿದವರ ಗುಂಪಿನಲ್ಲಿ ಡೆಲ್ಟಾ ರೂಪಾಂತರಿ ಸೋಂಕಿನಿಂದ ಯಾವುದೇ ಸಾವಿನ ವರದಿಯಾಗಿಲ್ಲ, ಆದರೆ ಲಸಿಕೆಯ ಮೊದಲ ಡೋಸ್ ಮಾತ್ರ ಹಾಕಿಸಿಕೊಂಡ ಮೂವರು ಸೋಂಕಿತರು ಹಾಗೂ ಏಳು ಮಂದಿ ಸೋಂಕಿತರು ಲಸಿಕೆ ಹಾಕಿಸಿಕೊಳ್ಳದ ಸಾವನ್ನಪ್ಪಿದ್ದಾರೆ.
ಚೆನ್ನೈ ನಲ್ಲಿ ನಡೆದ ಅಧ್ಯನದಕ್ಕೆ 3417 ಮಂದಿಯನ್ನು ಒಳಪಡಿಸಿಕೊಂಡಿದ್ದು, ಆ ಪೈಕಿ, 185 (ಶೇ. 5.4) ನಷ್ಟು ಲಸಿಕೆ ಹಾಕಿಸಿಕೊಳ್ಳದವರೂ ಇದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ : ವಸಾಯಿ ಕರ್ನಾಟಕ ಸಂಘ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಆಚರಣೆ