ನವ ದೆಹಲಿ : ಭಾರತದ ಷೇರು ಮಾರುಕಟ್ಟೆಯ ಅತ್ಯಂತ ಮೌಲ್ಯಯುತ ಹತ್ತು ಕಂಪೆನಿಗಳಲ್ಲಿ ಒಂಬತ್ತು ಕಂಪನಿಗಳು ಮಾರುಕಟ್ಟೆ ಮೌಲ್ಯ ಕಳೆದ ವಾರ 1.33 ಲಕ್ಷ ಕೋಟಿ ರೂಪಾಯಿ ಇಳಿಕೆ ಕಂಡಿವೆ.
ಐಟಿ ವಲಯದ ದೈತ್ಯ ಕಂಪೆನಿ ಟಾಟಾ ಕನ್ಸಲ್ಟೆನ್ಸಿ(ಟಿಸಿಎಸ್) 30, 887.07 ಕೋಟಿ ರೂ ಹಾಗೂ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 34, 914.58 ಕೋಟಿ ರು ಮೌಲ್ಯವನ್ನು ಕಳೆದ ವಾರ ಕಳೆದುಕೊಂಡಿವೆ.
ಓದಿ : ದೆಹಲಿಯಲ್ಲಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ ಲಸಿಕೆ ಫ್ರೀ : ಕೇಜ್ರಿವಾಲ್
ಮಾರ್ಚ್ ನಿಂದ ಮೂರು ತಿಂಗಳವರೆಗೆ ಐಸಿಐಸಿಐ ಬ್ಯಾಂಕ್ ನಿವ್ವಳ ಲಾಭದಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 260.47ರಷ್ಟು ನಿವ್ವಳ ಲಾಭ ಹೆಚ್ಚಳಗೊಂಡಿದ್ದು, 4,402.61 ಕೋಟಿ ರೂಪಾಯಿಗೆ ತಲುಪಿದೆ. ಹಿಂದಿನ ತ್ರೈಮಾಸಿಕದಲ್ಲಿ ಬ್ಯಾಂಕ್ 1,221.36 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ.
ಮಾರ್ಚ್ 31ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನಿವ್ವಳ ಬಡ್ಡಿ ಆದಾಯ, ಗಳಿಸಿದ ಬಡ್ಡಿ ಮತ್ತು ಖರ್ಚು ಮಾಡಿದ ಬಡ್ಡಿ ನಡುವಿನ ವ್ಯತ್ಯಾಸ, ವರ್ಷದಿಂದ ವರ್ಷಕ್ಕೆ ಶೇಕಡಾ 16.85ರಷ್ಟು ಹೆಚ್ಚಳವಾಗಿ, 10,431.13 ಕೋಟಿ ರೂಪಾಯಿಗೆ ತಲುಪಿದೆ.
ಇನ್ನು, ಎನ್ ಪಿ ಎ ಒಂದು ವರ್ಷದ ಹಿಂದೆ ಶೇಕಡಾ 5.53ರಷ್ಟು ಹೋಲಿಸಿದರೆ ಶೇಕಡಾ 4.96ರಷ್ಟು ಏರಿಕೆಯಾಗಿದೆ. ಡಿಸೆಂಬರ್ ನಲ್ಲಿ ಕೊನೆಗೊಂಡ ಹಿಂದಿನ ತ್ರೈಮಾಸಿಕದಲ್ಲಿ ಶೇಕಡಾ 4.38ರಷ್ಟಿತ್ತು.
ಓದಿ : 2021ನೇ ಸಾಲಿನ ಆಸ್ಕರ್ ಪ್ರಶಸ್ತಿ ಘೋಷಣೆ: ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ನಟಿ ಯಾರು?