ಚುಮುಚುಮು ಚಳಿ ಮಾಯವಾಗಿ ಬಿಸಿಲು ಕಣಿºಟ್ಟಿದೆ. ತಿನ್ನುವ ಎಲ್ಲ ಆಹಾರವೂ ತಣ್ಣಗೇ ಇರಲಿ ಎಂದು ದೇಹ ಬಯಸುತ್ತಿದೆ. ನೀರನ್ನು ಫ್ರಿಡ್ಜ್ನಲ್ಲಿಟ್ಟು ಕುಡಿಯತೊಡಗಿದ್ದೇವೆ. ಹಣ್ಣಿನ ಜ್ಯೂಸ್‌ಗಂತೂ ಐಸ್ ಕ್ಯೂಬ್ ಬೇಕೇ ಬೇಕು. ಆ ಐಸ್‌ಕ್ಯೂಬ್‌ಗಳನ್ನು ಬಳಸಿಕೊಂಡು ಮ್ಯಾಜಿಕ್ ಮಾಡೊºàದು ಅಂತ ನಿಮಗ್ಗೊತ್ತಾ?
ಬೇಕಾಗುವ ವಸ್ತುಗಳು: ಐಸ್ ಕ್ಯೂಬ್, ಉಪ್ಪು, ದಾರ, ತಟ್ಟೆ (ಐಸ್‌ಕ್ಯೂಬ್ ಇಡಲು)
ಪ್ರದರ್ಶನ: ಜಾದೂಗಾರನ ಎದುರಿಗೆ ಇರುವ ತಟ್ಟೆಯಲ್ಲಿ ಐಸ್‌ಕ್ಯೂಬ್ ಇದೆ. ಒಂದು ದಾರವನ್ನು ನೀರಿನಲ್ಲಿ ಅದ್ದಿ ಒದ್ದೆ ಮಾಡಿಕೊಂಡು ಅದರ ಸಹಾಯದಿಂದ ಐಸ್‌ಕ್ಯೂಬ್ ಅನ್ನು ಎತ್ತುವಂತೆ ಪ್ರೇಕ್ಷಕರಲ್ಲಿ ಕೇಳಿಕೊಳ್ಳುತ್ತಾನೆ. ಆದರೆ, ಅದು ಸಾಧ್ಯವಾಗುವುದಿಲ್ಲ. ಅದೇ ಒದ್ದೆ ದಾರವನ್ನು ಬಳಸಿ ಗಂಟು ಬಿಗಿಯದೆ ಜಾದೂಗಾರ ಐಸ್‌ಕ್ಯೂಬ್‌ಅನ್ನು ಮೇಲಕ್ಕೆತ್ತುತ್ತಾನೆ.
ತಯಾರಿ: ಈ ಜಾದೂವಿನ ರಹಸ್ಯ ಅಡಗಿರುವುದು ಜಾದೂಗಾರ ಯಾರಿಗೂ ಕಾಣದಂತೆ ಐಸ್‌ಕ್ಯೂಬ್ ಮೇಲೆ ಉದುರಿಸುವ ಉಪ್ಪಿನಲ್ಲಿ. ಉಪ್ಪು ಹಾಕಿದರೆ ಐಸ್ ಕರಗುತ್ತದೆ ಎಂದು ವಿಜ್ಞಾನ ಹೇಳುತ್ತದೆ. ಅದೇ ಈ ಜಾದೂವಿನ ಟ್ರಿಕ್. ಅದು ಹೇಗೆಂದರೆ ಉಪ್ಪು, ಮಂಜುಗಡ್ಡೆಯ ಫ್ರೀಝಿಂಗ್ ಪಾಯಿಂಟ್ (ಘನೀಕರಿಸುವ ಬಿಂದು) ಅನ್ನು ಕಡಿಮೆ ಮಾಡುತ್ತದೆ. ದಾರವನ್ನು ಐಸ್ ಮೇಲೆ ಇಟ್ಟು ಉಪ್ಪು ಉದುರಿಸುವುದರಿಂದ ಐಸ್ ಕ್ಯೂಬ್ ಮಧ್ಯಭಾಗದಲ್ಲಿ ಕರಗತೊಡಗಿ ದಾರ ನೀರೊಳಗೆ ಸೇರಿಕೊಳ್ಳುತ್ತದೆ. ಸ್ವಲ್ಪ ಹೊತ್ತು ಬಿಟ್ಟ ನಂತರ ಸುತ್ತಲಿನ ಐಸ್‌ನ ತಾಪಮಾನದಿಂದ ನೀರಾಗಿದ್ದ ಐಸ್ ಮತ್ತೆ ಮಂಜುಗಡ್ಡೆಯ ರೂಪ ತಾಳುತ್ತದೆ. ನೀರು ಐಸಾದಾಗ ದಾರ ಕೂಡ ಅದರೊಳಗೆ ಸೇರಿಕೊಳ್ಳುತ್ತದೆ. ಹೀಗಾಗಿ ಈಗ ದಾರ ಎತ್ತಿದಾಗ ಐಸ್ ಕ್ಯೂಬ್ ಕೂಡ ಜೊತೆಗೆ ಮೇಲೆ ಬರುತ್ತದೆ.
– ವಿನ್ಸೆಂಟ್ ಲೋಬೋ