Advertisement

Ice Cream ಉತ್ಪಾದಕರ ಅಸೋಸಿಯೇಶನ್‌; ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮನವಿ ಸಲ್ಲಿಕೆ

10:45 PM Jan 31, 2024 | Team Udayavani |

ಮಂಗಳೂರು: ಐಸ್‌ಕ್ರೀಂ ಹಾಗೂ ಫ್ರೋಝನ್‌ ಡೆಸರ್ಟ್ಸ್ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಮಾಡುವುದು ಸೇರಿದಂತೆ ಐಸ್‌ಕ್ರೀಂ ಉದ್ಯಮದ ಕೆಲವು ಸವಾಲುಗಳನ್ನು ಪರಿಹರಿಸುವಂತೆ ಆಗ್ರಹಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಭಾರತೀಯ ಐಸ್‌ಕ್ರೀಂ ಉತ್ಪಾದಕರ ಅಸೋಸಿ ಯೇಶನ್‌ ನಿಯೋಗ ಮನವಿ ಸಲ್ಲಿಸಿದೆ.

Advertisement

ದೇಶದಲ್ಲಿ ಐಸ್‌ಕ್ರೀಂ ಉದ್ಯಮ ಇನ್ನಷ್ಟು ವಿಸ್ತಾರ ರೂಪ ಪಡೆಯಲು ಅವಕಾಶಗಳಿವೆ. ಇದರ ಜತೆಗೆ ವಿದೇಶದಲ್ಲಿ ಅಧಿಕವಾಗಿ ವಿಸ್ತಾರ ರೂಪ ಪಡೆಯಲು ಸಾಧ್ಯತೆಗಳು ಇವೆ. ಈ ನಿಟ್ಟಿನಲ್ಲಿ ವಿಶೇಷ ಸಾಧ್ಯಾಸಾಧ್ಯತೆಗಳ ಬಗ್ಗೆ ಪರಿಶೀಲನೆ ಸಂಬಂಧ ನಿಯೋಗವು ರಾಷ್ಟ್ರಪತಿಯವರ ಗಮನಸೆಳೆಯಿತು.

ಭಾರತದಲ್ಲಿ ಭವಿಷ್ಯದಲ್ಲಿ ಐಸ್‌ಕ್ರೀಂ ಉದ್ಯಮದ ಸವಾಲು-ಸಾಧ್ಯತೆಗಳ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಯಿತು.

ಭಾರತೀಯ ಐಸ್‌ಕ್ರೀಂ ಉತ್ಪಾದಕರ ಅಸೋಸಿಯೇಶನ್‌ ಅಧ್ಯಕ್ಷ ಸುಧೀರ್‌ ಶಾ, ಚೇರ್‌ಮನ್‌ ರಾಜೇಶ್‌ ಗಾಂಧಿ, ದಕ್ಷಿಣ ಪ್ರಾಂತೀಯ ಉಪಾಧ್ಯಕ್ಷ ಆಶಿಶ್‌ ಎ. ನಹರ್‌, ಕಾರ್ಯದರ್ಶಿ ಪ್ರದೀಪ್‌ ಜಿ. ಪೈ, ಪ್ರಮುಖರಾದ ಚೇತನ್‌ ಬಿ., ಎಲ್‌.ಕೆ. ನರಸಿಂಹನ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next