Advertisement
ಈಗಾಗಲೇ ಭಾರತ, ಆಸ್ಟ್ರೇಲಿಯ ತಂಡಗಳ ಕ್ರಿಕೆಟಿಗರು ಲಂಡನ್ ತಲುಪಿದ್ದಾರೆ. ಕಠಿನ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಕೊನೆಯ ಕ್ಷಣದಲ್ಲಿ ಟೀಮ್ ಇಂಡಿಯಾವನ್ನು ಸೇರಿಕೊಂಡ 21 ವರ್ಷದ ಯುವ ಆರಂಭಕಾರ ಯಶಸ್ವಿ ಜೈಸ್ವಾಲ್ ಕೂಡ ನೆಟ್ ಪ್ರ್ಯಾಕ್ಟೀಸ್ ಪ್ರಾರಂಭಿಸಿದ್ದಾರೆ. ಇವರು ನಾಯಕ ರೋಹಿತ್ ಶರ್ಮ ಜತೆ 3ನೇ ಬ್ಯಾಚ್‌ನಲ್ಲಿ ಲಂಡನ್‌ಗೆಆಗಮಿಸಿದ್ದರು. ಮೀಸಲು ಆಟಗಾರ ರುತುರಾಜ್ ಗಾಯಕ್ವಾಡ್ ಮದುವೆಯ ಕಾರಣ ಲಂಡನ್‌ಗೆ ತೆರಳದೇ ಇದ್ದುದರಿಂದ ಯಶಸ್ವಿ ಜೈಸ್ವಾಲ್ ಅವರನ್ನು ಆರಿಸಲಾಗಿತ್ತು.
Related Articles
ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್ ಆಡುತ್ತ ಅಮೋಘ ಫಾರ್ಮ್ ಪ್ರದರ್ಶಿಸಿರುವ ಚೇತೇಶ್ವರ್ ಪೂಜಾರ ಪಾತ್ರ ಭಾರತ ತಂಡಕ್ಕೆ ಮಹತ್ವದ್ದಾಗಿ ಪರಿಣಮಿಸಲಿದೆ ಎಂಬುದಾಗಿ ಮಾಜಿ ಕ್ರಿಕೆಟಿಗ ಸುನೀಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.
Advertisement
“ಪೂಜಾರ ಸಸೆಕ್ಸ್ ಕೌಂಟಿ ಪರ ಆಡುತ್ತ ಅಮೋಘ ಬ್ಯಾಟಿಂಗ್ ಪ್ರದರ್ಶಿಸುತ್ತ ಬಂದಿದ್ದಾರೆ. ಕೌಂಟಿಯ ನಾಯಕತ್ವವನ್ನೂ ವಹಿಸಿದ್ದಾರೆ. ಕೆಲವು ಕಾಲದಿಂದ ಇಂಗ್ಲೆಂಡ್‌ನಲ್ಲೇ ಇರುವ ಕಾರಣ ಭಾರತಕ್ಕೆ ಖಂಡಿತವಾಗಿಯೂ ಇವರಿಂದ ನೆರ ವಾಗಲಿದೆ’ ಎಂಬುದಾಗಿ ಗಾವಸ್ಕರ್ ಹೇಳಿದರು. ಕೌಂಟಿ ಋತುವಿನ ವೇಳೆ ಪೂಜಾರ ಓವಲ್‌ನಲ್ಲಿ ಆಡಿಲ್ಲ. ಆದರೆ ಸಸೆಕ್ಸ್ ಲಂಡನ್‌ನಿಂದ ಬಹಳ ದೂರವೇನಲ್ಲ ಎಂದೂ ಗಾವಸ್ಕರ್ ಹೇಳಿದರು.
ಇದೇ ಸಂದರ್ಭ ಸುನೀಲ್ ಗಾವಸ್ಕರ್ ಭಾರತದ ಬ್ಯಾಟರ್‌ಗಳಿಗೆ ಕೆಲವು ಉಪಯುಕ್ತ ಸಲಹೆಗಳನ್ನೂ ನೀಡಿದರು. “ಐಪಿಎಲ್‌ನಿಂದ ಬಂದವರಾದ ಕಾರಣ ಎಲ್ಲರೂ ತಮ್ಮ ಬ್ಯಾಟಿಂಗ್ ವೇಗವನ್ನು ಕಡಿಮೆ ಮಾಡಿಕೊಳ್ಳ ಬೇಕಾದ ಅಗತ್ಯವಿದೆ. ಹಾಗೆಯೇ ಬ್ಯಾಟಿಂಗ್ ನಿಯಂತ್ರಣ ಸಾಧಿಸಿ ಕ್ರೀಸ್‌ನಲ್ಲಿ ನಿಂತು ಆಡುವುದು ಮುಖ್ಯ’ ಎಂದರು.ಇಂಗ್ಲೆಂಡ್ ವಾತಾವರಣ ಭಿನ್ನ ರೀತಿ ಯದ್ದು. ಚೆಂಡು ಸ್ವಿಂಗ್ ಪಡೆದುಕೊಳ್ಳುತ್ತದೆ. ಹೀಗಾಗಿ ಅವಸರದ ಬ್ಯಾಟಿಂಗ್ ಸಲ್ಲದು ಎಂದು ಗಾವಸ್ಕರ್ ಹೇಳಿದರು.