ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ 2023ರಲ್ಲಿ ಭಾರತ ತಂಡವು ಲೀಗ್ ಹಂತದಲ್ಲಿ ಆಡಿದ ಎಲ್ಲಾ ಎಂಟು ಪಂದ್ಯಗಳನ್ನು ಗೆದ್ದು ಅಗ್ರ ಸ್ಥಾನಿಯಾಗಿ ಸೆಮಿ ಫೈನಲ್ ಪ್ರವೇಶಿಸಿದೆ. ಲೀಗ್ ಹಂತದ ಕೊನೆಯ ಪಂದ್ಯವನ್ನು ರೋಹಿತ್ ಬಳಗ ನೆದರ್ಲ್ಯಾಂಡ್ ವಿರುದ್ದ ಆಡಲಿದೆ. ಬೆಂಗಳೂರಿನಲ್ಲಿ ರವಿವಾರ ನಡೆಯಲಿರುವ ಪಂದ್ಯಕ್ಕೂ ಮುನ್ನ ಕೋಚ್ ರಾಹುಲ್ ದ್ರಾವಿಡ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
“ರೋಹಿತ್ ನಿಸ್ಸಂಶಯವಾಗಿ ಲೀಡರ್. ಅವರು ಮೈದಾನದ ಒಳಗೆ ಮತ್ತು ಹೊರಗೆ ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ” ಎಂದು ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ದ್ರಾವಿಡ್ ಹೇಳಿದರು.
ರೋಹಿತ್ ಅವರ ಬ್ಯಾಟಿಂಗ್ ವಿಧಾನವು ನಮಗೆ ಕೆಲಸ ಸುಲಭ ಮಾಡಿದೆ. ಅಲ್ಲದೆ ಬಳಿಕ ಬರುವ ಹುಡುಗರಿಗೆ ಅವರ ಕೆಲಸಕ್ಕೆ ಅನುಕೂಲವಾಗುವಂತೆ ಮಾಡಿದೆ ಎಂದು ದ್ರಾವಿಡ್ ಹೇಳಿದರು.
ಇದನ್ನೂ ಓದಿ:Leader ಬೇಸ್ ರಾಜಕಾರಣಿಯಲ್ಲ, ಕೇಡರ್ ಬೇಸ್ ನಾನು: ಶಿವರಾಮ ಹೆಬ್ಬಾರ್
ತಂಡದ ಧ್ಯೇಯೋದ್ದೇಶಗಳನ್ನು ಅಳವಡಿಸಿಕೊಳ್ಳುವ ಮೂಲಕ ರೋಹಿತ್ ಇತರರಿಗೆ ಮಾದರಿಯಾಗುತ್ತಾರೆ, ಇದು ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಭಾರಿ ಪ್ರಭಾವವನ್ನು ಸೃಷ್ಟಿಸಿದೆ ಎಂದು ದ್ರಾವಿಡ್ ಹೇಳಿದರು.
“ನಾವು ನಿರ್ದಿಷ್ಟ ರೀತಿಯಲ್ಲಿ ಆಡುವ ಬಗ್ಗೆ ಮಾತನಾಡಿದ್ದೆವು, ಆದರೆ ನಿಮ್ಮ ನಾಯಕ ಮಾದರಿಯಾಗಿ ನಿಂತು ಅದೇ ರೀತಿ ಆಡದೆ ಇದ್ದರೆ ಅದು ಸಾಧ್ಯವಾಗುವುದಿಲ್ಲ. ರೋಹಿತ್ ಅವರ ನಾಯಕತ್ವ ಅದ್ಭುತವಾಗಿದೆ ಎಂದು ನಾನು ಭಾವಿಸುತ್ತೇನೆ. ಅವರು ಖಂಡಿತವಾಗಿಯೂ ತಂಡ ಮತ್ತು ಕೋಚಿಂಗ್ ಸಿಬ್ಬಂದಿಯ ಗೌರವವನ್ನು ಪಡೆದ ವ್ಯಕ್ತಿ” ದ್ರಾವಿಡ್ ಹೇಳಿದರು.