Advertisement

ಆಸೀಸ್‌ ಹೊರಗಟ್ಟಿ ಭಾರತ ಫೈನಲ್‌ಗೆ

07:36 AM Jul 21, 2017 | Team Udayavani |

ಡರ್ಬಿ: ಹರ್ಮನ್‌ಪ್ರೀತ್‌ ಕೌರ್‌ (ಅಜೇಯ 171 ರನ್‌) ಜೀವನಶ್ರೇಷ್ಠ ಸಿಡಿಲಬ್ಬರದ ಬ್ಯಾಟಿಂಗ್‌ ನೆರವಿನಿಂದ ಆಸ್ಟ್ರೇಲಿಯಾ ವಿರುದ್ಧ 2ನೇ ಮಹಿಳಾ ವಿಶ್ವಕಪ್‌ ಸೆಮಿಫೈನಲ್‌ನಲ್ಲಿ ಭಾರತ 36 ರನ್‌ ಗೆಲುವು ಸಾಧಿಸಿತು. ಇದರೊಂದಿಗೆ ಭಾರತ 2ನೇ ಬಾರಿಗೆ ಮಹಿಳಾ ವಿಶ್ವಕಪ್‌ ಏಕದಿನ ಕ್ರಿಕೆಟ್‌ ಫೈನಲ್‌ ಪ್ರವೇಶಿಸಿದೆ. ಜುಲೈ 23 ರಂದು ನಡೆಯಲಿರುವ ಫೈನಲ್‌ನಲ್ಲಿ ಭಾರತ ಆತಿಥೇಯ ಇಂಗ್ಲೆಂಡ್‌ ತಂಡವನ್ನು ಎದುರಿಸಲಿದೆ. 

Advertisement

ಗುರುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ಕೌರ್‌ ಅವರ ಆಕರ್ಷಕ ಶತಕ ನೆರವಿನಿಂದ 42 ಓವರ್‌ಗೆ ಬೃಹತ್‌ 281 ರನ್‌ ಪೇರಿಸಿತು. ಈ ಗುರಿ ಬೆನ್ನಟ್ಟಿದ ಆಸೀಸ್‌ ಬ್ಲ್ಯಾಕ್‌ವೆಲ್‌ (90 ರನ್‌) ಹಾಗೂ ವಿಲಾನಿ (75 ರನ್‌) ತಲಾ ಅರ್ಧಶತಕ ನೆರವಿನಿಂದ ಪೈಪೋಟಿ ನೀಡಿತು. ಆದರೆ ಅಂತಿಮವಾಗಿ 40.1 ಓವರ್‌ಗೆ 245 ರನ್‌ಗಳಿಸಿ ಆಲೌಟಾಯಿತು. ಭಾರತದ ಪರ ದೀಪ್ತಿ ಶರ್ಮ 59ಕ್ಕೆ3 ವಿಕೆಟ್‌ ಪಡೆದರು. ಉಳಿದಂತೆ ಗೋಸ್ವಾಮಿ 35ಕ್ಕೆ 2 ಹಾಗೂ ಪಾಂಡೆ 17ಕ್ಕೆ 2 ವಿಕೆಟ್‌ ಪಡೆದರು.

ಮಳೆಯಿಂದ ಓವರ್‌ ಕಡಿತ: ಇದಕ್ಕೂ ಮೊದಲು ಭಾರತದ ಬ್ಯಾಟಿಂಗ್‌ಗೆ ಮಳೆ ಅಡ್ಡಿಪಡಿಸಿತು. ಮಳೆಯಿಂದ ಪಂದ್ಯ ಎರಡು ಗಂಟೆ ತಡವಾಗಿ ಆರಂಭವಾಯಿತು. ಪರಿಣಾಮ 50 ಓವರ್‌ ಪಂದ್ಯವನ್ನು 42 ಓವರ್‌ಗೆ ಸೀಮಿತಗೊಳಿಸಲಾಯಿತು. ಬಳಿಕ ಬ್ಯಾಟಿಂಗ್‌ ಮಾಡಿದ ಭಾರತ ಆರಂಭದಲ್ಲಿ 2 ವಿಕೆಟ್‌ ಕಳೆದುಕೊಂಡಿತು. ಹೀಗಿದ್ದರೂ ಹರ್ಮನ್‌ಪ್ರೀತ್‌ ಕೌರ್‌ಮಿಂಚಿನ ಬ್ಯಾಟಿಂಗ್‌ನಿಂದ ಭಾರೀ ರನ್‌ ಕಲೆ ಹಾಕಿತು. 

ಗುಡುಗಿದ ಹರ್ಮನ್‌ಪ್ರೀತ್‌: ತಾನೇನು? ತನ್ನ ಸಾಮರ್ಥ್ಯ ಏನು? ಎನ್ನುವುದನ್ನು ಹರ್ಮನ್‌ಪ್ರೀತ್‌ ಸೆಮಿಫೈನಲ್‌ನಲ್ಲಿ ತೋರಿಸಿದರು. ಆಸ್ಟ್ರೇಲಿಯಾ ಆಟಗಾರ್ತಿಯರನ್ನು ಮನಬಂದಂತೆ ಚಚ್ಚಿ ಬೆವರಿಳಿಸಿದರು. ಕೇವಲ 115 ಎಸೆತಗಳಲ್ಲಿ 171 ರನ್‌ ಸಿಡಿಸಿದರು. ಬರೋಬ್ಬರಿ 20 ಬೌಂಡರಿ ಹಾಗೂ 7 ಸಿಕ್ಸರ್‌ಗಳ ಮೂಲಕ ನೆರೆದಿದ್ದ ಅಭಿಮಾನಿಗಳನ್ನು ರಂಜಿಸಿದರು. 148.70 ಸರಾಸರಿಯಲ್ಲಿ ಹರ್ಮನ್‌ಪ್ರೀತ್‌ ರನ್‌ ಗಳಿಸಿ ಅಜೇಯರಾಗಿ ಉಳಿದರು.

ಹರ್ಮನ್‌ ವಿಶ್ವ ದಾಖಲೆಗಳು
115 ಕ್ಕೆ 171ರನ್‌ ಹರ್ಮನ್‌ ಪ್ರೀತ್‌ 171 ರನ್‌ಗಳನ್ನು ಕೇವಲ 115 ಎಸೆತಕ್ಕೆ ಗಳಿಸಿದ್ದಾರೆ. ಇದು ಏಕದಿನ ಇತಿಹಾಸದ ಅತಿವೇಗದ 171 ರನ್‌. ಇದಕ್ಕೂ ಮುನ್ನ ಸಾರಾ ಟೇಲರ್‌ 137 ಎಸೆತದಲ್ಲಿ ಈ ಸಾಧನೆ ಮಾಡಿದ್ದಾರೆ.

Advertisement

107 ಕ್ಕೆ 150ರನ್‌
ಹರ್ಮನ್‌ ಪ್ರೀತ್‌ 150 ರನ್‌ಗಳನ್ನು ಕೇವಲ 107 ಎಸೆತಗಳಲ್ಲಿ ಗಳಿಸಿದರು. ಇದು ಏಕದಿನ ಇತಿಹಾಸದ ಅತಿವೇಗದ 150 ರನ್‌.
ಇದಕ್ಕೂ ಮುನ್ನ ಕರೆನ್‌ ರಾಲ್ಟನ್‌ 114 ಎಸೆತಗಳನ್ನು ಇದಕ್ಕಾಗಿ ಬಳಸಿಕೊಂಡಿದ್ದರು.

ಹರ್ಮನ್‌ ದಾಖಲೆಗಳು
171 ರನ್‌ ಹರ್ಮನ್‌ ಪ್ರೀತ್‌ ಗಳಿಸಿದ 171 ರನ್‌ ವಿಶ್ವಕಪ್‌ ಕ್ರಿಕೆಟ್‌ ಪಂದ್ಯವೊಂದರಲ್ಲಿ ಭಾರತದ ಪರ ದಾಖಲಾದ ಗರಿಷ್ಠ ಮೊತ್ತ

2 ಶತಕ ಹರ್ಮನ್‌ಪ್ರೀತ್‌ ಶತಕ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ನಾಕೌಟ್‌ ಹಂತದಲ್ಲಿ ದಾಖಲಾದ ವಿಶ್ವದ 2ನೇ ಶತಕ 

5 ನೇ ಗರಿಷ್ಠ ಹರ್ಮನ್‌ ಅವರ 171 ರನ್‌ ಏಕದಿನ ಕ್ರಿಕೆಟ್‌ನಲ್ಲಿ ಒಟ್ಟಾರೆ 5ನೇ ಗರಿಷ್ಠ ಮೊತ್ತ

2 ನೇ ಗರಿಷ್ಠ ಇದು ಭಾರತದ ಪರ 2ನೇ ಗರಿಷ್ಠ ಮೊತ್ತ. ದೀಪ್ತಿ ಶರ್ಮ 188 ರನ್‌ ಗಳಿಸಿರುವುದು ಗರಿಷ್ಠ ಮೊತ್ತ

ಏಕದಿನ ಕ್ರಿಕೆಟ್‌ನ ಅತಿಶ್ರೇಷ್ಠ ಇನಿಂಗ್ಸ್‌
ಗುರುವಾರ ನಡೆದ 2ನೇ ಸೆಮಿಫೈನಲ್‌ ಪಂದ್ಯದಲ್ಲಿ ಭಾರತದ ಹರ್ಮನ್‌ ಪ್ರೀತ್‌ ಕೌರ್‌ ತಮ್ಮ ಒಂದೇ ಒಂದು ಸ್ಫೋಟಕ ಇನಿಂಗ್ಸ್‌ ಮೂಲಕ ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರು ಕೇವಲ 115 ಎಸೆತಗಳಿಂದ 171 ರನ್‌ ಗಳಿಸುವ ವೇಳೆ
20 ಬೌಂಡರಿ, 7 ಸಿಕ್ಸರ್‌ ಬಾರಿಸಿದ್ದಾರೆ. ಇದು ಏಕದಿನ ಇತಿಹಾಸದ ಅತಿಶ್ರೇಷ್ಠ ಇನಿಂಗ್ಸ್‌ಗಳಲ್ಲಿ ಒಂದೆಂದು ದಾಖಲಾಗಿದೆ. ಅದರಲ್ಲೂ ಭಾರತದ ಪರ ದಾಖಲಾದ ಅದ್ಭುತ ಇನಿಂಗ್ಸ್‌ ಎಂದು ಕರೆಸಿಕೊಂಡಿದೆ. 

ಭಾರತ 42 ಓವರ್‌ಗೆ 281/4
ಸ್ಮತಿ ಮಂಧನಾ ಸಿ ವಿಲಾನಿ ಬಿ ಶುಟ್‌ 6
ಪೂನಮ್‌ ರಾವತ್‌ ಸಿ ಮೋನಿ ಬಿ ಗಾರ್ಡ್‌ನರ್‌ 14
ಮಿಥಾಲಿ ರಾಜ್‌ ಬಿ ಬೀಮ್ಸ್‌ 36
ಹರ್ಮನ್‌ಪ್ರೀತ್‌ ಕೌರ್‌ ಅಜೇಯ 171
ದೀಪ್ತಿ ಶರ್ಮ ಬಿ ವಿಲಾನಿ 25
ವೇದಾ ಕೃಷ್ಣಮೂರ್ತಿ 16

ಇತರೆ: 13
ವಿಕೆಟ್‌ ಪತನ: 1-6, 2-35, 3-101, 4-238

ಬೌಲಿಂಗ್‌
ಮೆಗಾನ್‌ ಶುಟ್‌ 9 0 64 1
ಪೆರ್ರಿ 9 1 40 0
ಜೆಸ್‌ ಜಾನ್ಸೆನ್‌ 7 0 63 0
ಗಾರ್ಡ್‌ನರ್‌ 8 0 43 1
ಬೀಮ್ಸ್‌ 8 0 49 1
ವಿಲಾನಿ 1 0 19 1

ಆಸೀಸ್‌ 40.1 ಓವರ್‌ಗೆ 245 ಆಲೌಟ್‌
ನಿಕೋಲೆ ಬೋಲ್ಟನ್‌ ಸಿಬಿ ಶರ್ಮ 14
ಮೋನಿ ಬಿ ಪಾಂಡೆ 1
ಲ್ಯಾನಿಂಗ್‌ ಬಿ ಗೋಸ್ವಾಮಿ 0
ಪೆರ್ರಿ ಸಿ ವರ್ಮ ಬಿ ಪಾಂಡೆ 38
ವಿಲಾನಿ ಸಿ ಮಂಧನಾ ಬಿ ಗಾಯಕ್ವಾಡ್‌ 75
ಬ್ಲ್ಯಾಕ್‌ವೆಲ್‌ ಬಿ ಶರ್ಮ 90
ಹ್ಯಾಲಿ ಸಿ ಪಾಂಡೆ ಬಿ ಗೋಸ್ವಾಮಿ 5
ಗಾರ್ಡನರ್‌ ಸಿ ಮಿಥಾಲಿ ಪೂನಮ್‌ 1
ಜಾನ್ಸೆನ್‌ ರನೌಟ್‌ 1
ಶುಟ್‌ ಸಿ ಗೋಸ್ವಾಮಿ ಬಿ ಶರ್ಮ 2
ಬೀಮ್ಸ್‌ ಅಜೇಯ 11

ಇತರೆ: 7
ವಿಕೆಟ್‌ ಪತನ: 1-4, 2-9, 3-21, 4-126, 5-140, 6-148, 7-152, 8-154, 9-169, 10-245 
ಬೌಲಿಂಗ್‌
ಜೂಲನ್‌ ಗೋಸ್ವಾಮಿ 8 0 35 2
ಎಸ್‌.ಪಾಂಡೆ 6 1 17 2
ದೀಪ್ತಿ ಶರ್ಮ 7.1 0 59 3
ರಾಜೇಶ್ವರಿ ಗಾಯಕ್ವಾಡ್‌ 9 0 62 1
ಪೂನಮ್‌ ಯಾದವ್‌ 9 0 60 1
ವೇದಾ 1 0 11 0

Advertisement

Udayavani is now on Telegram. Click here to join our channel and stay updated with the latest news.

Next