ದುಬಾೖ: ಜಾಗತಿಕ ವನಿತಾ ಕ್ರಿಕೆಟ್ ಮತ್ತೊಂದು ಎತ್ತರ ತಲುಪಿದೆ. ಮುಂದಿನ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಐಸಿಸಿ ವನಿತಾ ಟಿ20 ವಿಶ್ವಕಪ್ ಪಂದ್ಯಾವಳಿಗೆ ಅಂಪಾಯರ್, ರೆಫ್ರಿಗಳನ್ನು ಆರಿಸಲಾಗಿದ್ದು, ಇವರೆಲ್ಲರೂ ವನಿತೆಯರೇ ಆಗಿರುವುದು ವಿಶೇಷ. ಐಸಿಸಿ ಪಂದ್ಯಾವಳಿ ಇತಿಹಾಸದಲ್ಲಿ “ಆಲ್ ಫೀಮೇಲ್ ಪ್ಯಾನಲ್’ ರಚನೆಗೊಂಡಿರುವುದು ಇದೇ ಮೊದಲು.
ಒಟ್ಟು 10 ಅಂಪಾಯರ್ ಹಾಗೂ 3 ರೆಫ್ರಿಗಳ ತಂಡವನ್ನು ರಚಿಸಲಾಗಿದೆ. ಇವರಲ್ಲಿ 7 ಮಂದಿ ಹೊಸಬರು. ಭಾರತೀಯರೂ ಮೂವರಿದ್ದಾರೆ. ಇವರೆಂದರೆ ಜಿ.ಎಸ್. ಲಕ್ಷ್ಮೀ, ವೃಂದಾ ರತಿ ಮತ್ತು ಜನನಿ ನಾರಾಯಣನ್. ಇವರಲ್ಲಿ ರತಿ ಮತ್ತು ಜನನಿ ಪ್ರಸಕ್ತ ರಣಜಿ ಋತುವಿನಲ್ಲಿ ಮೊದಲ ಸಲ ಅಂಪಾಯರ್ ಜವಾಬ್ದಾರಿ ವಹಿಸಿದ್ದರು. ಈ ಮೂವರೂ ಮೊದಲ ಸಲ ವಿಶ್ವಕಪ್ನಲ್ಲಿ ಕರ್ತವ್ಯ ನಿಭಾಯಿಸಲಿದ್ದಾರೆ. ಲಕ್ಷ್ಮೀ ಮ್ಯಾಚ್ ರೆಫ್ರಿಯಾಗಿ ನೇಮಿಸಲ್ಪಟ್ಟಿದ್ದಾರೆ.
ಇದಕ್ಕೂ ಮುನ್ನ 2020ರ ಟಿ20 ವಿಶ್ವಕಪ್ನಲ್ಲಿ 8 ಹಾಗೂ ಪ್ರಸಕ್ತ ಸಾಗುತ್ತಿರುವ ಅಂಡರ್-19 ವಿಶ್ವಕಪ್ನಲ್ಲಿ 9 ಮಂದಿ ವನಿತೆಯರಿಗೆ ಅವಕಾಶ ಲಭಿಸಿತ್ತು.
ಅಂಪಾಯರ್
ಸೆ ರೆಡ್ಫರ್ನ್, ಅನ್ನಾ ಹ್ಯಾರಿಸ್ (ಇಂಗ್ಲೆಂಡ್); ಎಲೊçಸ್ ಶೆರಿಡಾನ್, ಕ್ಲೇರ್ ಪೊಲೋಸಾಕ್ (ಆಸ್ಟ್ರೇಲಿಯ); ಜಾಕ್ವೆಲಿನ್ ವಿಲಿಯಮ್ಸ್ (ವೆಸ್ಟ್ ಇಂಡೀಸ್); ಕಿಮ್ ಕಾಟನ್ (ನ್ಯೂಜಿಲ್ಯಾಂಡ್); ಲಾರೆನ್ ಏಜೆನ್ಬಾಗ್ (ದಕ್ಷಿಣ ಆಫ್ರಿಕಾ); ವೃಂದಾ ರತಿ, ಜನನಿ ನಾರಾಯಣನ್ (ಭಾರತ); ನಿಮಾಲಿ ಪೆರೆರ (ಶ್ರೀಲಂಕಾ).
Related Articles
ಮ್ಯಾಚ್ ರೆಫ್ರಿ
ಜಿ.ಎಸ್. ಲಕ್ಷ್ಮೀ (ಭಾರತ), ಶಾಂಡ್ರೆ ಫ್ರಿಟ್ಜ್ (ದಕ್ಷಿಣ ಆಫ್ರಿಕಾ), ಮೈಕೆಲ್ ಪೆರೆರ (ಶ್ರೀಲಂಕಾ).