Advertisement

ICC Women’s T20 World Cup: ವನಿತಾ ಟಿ20 ವಿಶ್ವಕಪ್‌; ಅಂಪಾಯರ್ಸ್ ಆಯ್ಕೆ

10:39 PM Sep 28, 2024 | Team Udayavani |

ದುಬಾೖ: ಯುಎಇಯಲ್ಲಿ ನಡೆಯುವ ಬಾಂಗ್ಲಾದೇಶ ಆತಿಥ್ಯದ ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಗೆ ಅಂಪಾಯರ್‌ಗಳನ್ನು ಹೆಸರಿಸಲಾಗಿದೆ.

Advertisement

ಅ. 3ರಿಂದ 20ರ ತನಕ ನಡೆಯುವ ಈ ಪಂದ್ಯಾವಳಿಗಾಗಿ ಐಸಿಸಿ 10 ಅಂಪಾಯರ್, 3 ರೆಫ್ರಿಗಳನ್ನು ಹೆಸರಿಸಿದೆ. ಈ ಯಾದಿಯಲ್ಲಿರುವ ಭಾರತದ ಇಬ್ಬರೆಂದರೆ ಜಿ.ಎಸ್‌. ಲಕ್ಷ್ಮೀ (ರೆಫ್ರಿ) ಮತ್ತು ವೃಂದಾ ರಾಠಿ (ಅಂಪಾಯರ್‌).

ಭಾರತ-ಪಾಕಿಸ್ಥಾನ ನಡುವಿನ ಮಹತ್ವದ ಪಂದ್ಯಕ್ಕೆ ಆಸ್ಟ್ರೇಲಿಯದ ಎಲೋಯಿಸ್‌ ಶೆರಿಡಾನ್‌ ಮತ್ತು ದಕ್ಷಿಣ ಆಫ್ರಿಕಾದ ಲಾರೆನ್‌ ಏಜೆನ್‌ಬಾಗ್‌ ಫೀಲ್ಡ್‌ ಅಂಪಾಯರ್‌ ಆಗಿರುತ್ತಾರೆ. ವೆಸ್ಟ್‌ ಇಂಡೀಸ್‌ನ ಜಾಕ್ವೆಲಿನ್‌ ವಿಲಿಯಮ್ಸ್‌ ಟಿವಿ ಅಂಪಾಯರ್‌ ಆಗಿ ನೇಮಿಸಲ್ಪಟ್ಟಿದ್ದಾರೆ. ಈ ಪಂದ್ಯ ಅ. 6ರಂದು “ದುಬಾೖ ಇಂಟರ್‌ನ್ಯಾಶನಲ್‌ ಸ್ಟೇಡಿಯಂ’ನಲ್ಲಿ ನಡೆಯಲಿದೆ.

ಭಾರತ ತನ್ನ ಮೊದಲ ಪಂದ್ಯವನ್ನು ಅ. 4ರಂದು ನ್ಯೂಜಿಲ್ಯಾಂಡ್‌ ವಿರುದ್ಧ ಆಡಲಿದೆ. ಇಲ್ಲಿನ ಫೀಲ್ಡ್‌ ಅಂಪಾಯರ್‌ಗಳೆಂದರೆ ಜಾಕ್ವೆಲಿನ್‌ ವಿಲಿಯಮ್ಸ್‌ ಮತ್ತು ಇಂಗ್ಲೆಂಡ್‌ನ‌ ಅನ್ನಾ ಹ್ಯಾರಿಸ್‌. ಆಸ್ಟ್ರೇಲಿಯದ ಕ್ಲೇರ್‌ ಪೊಲೋಸಾಕ್‌ ಟಿವಿ ಅಂಪಾಯರ್‌ ಆಗಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next