Advertisement

ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌: ಟಾಪ್‌-10 ಸ್ಥಾನದಲ್ಲಿ ಭಾರತೀಯರು

11:12 PM May 25, 2022 | Team Udayavani |

ದುಬಾೖ: ನೂತನ ಐಸಿಸಿ ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಭಾರತದ ಆಟಗಾರರು ಟಾಪ್‌-10 ಸ್ಥಾನ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಬ್ಯಾಟಿಂಗ್‌ ವಿಭಾಗದಲ್ಲಿ ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ; ಬೌಲಿಂಗ್‌ ವಿಭಾಗದಲ್ಲಿ ಆರ್‌. ಅಶ್ವಿ‌ನ್‌ ಹಾಗೂ ಆಲ್‌ರೌಂಡ್‌ ವಿಭಾಗದಲ್ಲಿ ರವೀಂದ್ರ ಜಡೇಜ ಅಗ್ರ ಹತ್ತರಲ್ಲಿ ಮುಂದುವರಿದಿದ್ದಾರೆ.

ಬ್ಯಾಟಿಂಗ್‌ ವಿಭಾಗದಲ್ಲಿ ಆಸ್ಟ್ರೇಲಿಯದ ಮಾರ್ನಸ್‌ ಲಬುಶೇನ್‌ ಅಗ್ರಸ್ಥಾನದಲ್ಲಿದ್ದಾರೆ. ರೋಹಿತ್‌ ಮತ್ತು ಕೊಹ್ಲಿ ಕ್ರಮವಾಗಿ 9ನೇ ಹಾಗೂ 10ನೇ ಸ್ಥಾನದಲ್ಲಿದ್ದಾರೆ. ರ್‍ಯಾಂಕಿಂಗ್‌ ಪ್ರಗತಿ ಸಾಧಿಸಿದವರಲ್ಲಿ ಬಾಂಗ್ಲಾದೇಶದ ಲಿಟನ್‌ ದಾಸ್‌ (17) ಮತ್ತು ಶ್ರೀಲಂಕಾದ ಏಂಜೆಲೊ ಮ್ಯಾಥ್ಯೂಸ್‌ (21) ಪ್ರಮುಖರು.

ಬೌಲಿಂಗ್‌ ವಿಭಾಗದಲ್ಲಿ ಆಸೀಸ್‌ ವೇಗಿ ಪ್ಯಾಟ್‌ ಕಮಿನ್ಸ್‌ (901) ಅಗ್ರಸ್ಥಾನದಲ್ಲಿ ಮುಂದು ವರಿದಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ಆರ್‌. ಅಶ್ವಿ‌ನ್‌ಗಿಂತ 51 ಅಂಗಳ ಮುನ್ನಡೆ ಹೊಂದಿದ್ದಾರೆ. 3ನೇ ಸ್ಥಾನದಲ್ಲಿರುವವರು ಜಸ್‌ಪ್ರೀತ್‌ ಬುಮ್ರಾ.

ಆಲ್‌ರೌಂಡರ್‌ ವಿಭಾಗದಲ್ಲಿ ರವೀಂದ್ರ ಜಡೇಜ ಅಗ್ರಸ್ಥಾನದ ಗೌರವ ಹೊಂದಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next