Advertisement

ICC Test Rankings: ಭಾರತ ನಂ.1 ಟೆಸ್ಟ್‌  ತಂಡ

10:56 PM May 02, 2023 | Team Udayavani |

ದುಬಾೖ: ಭಾರತದ ಟೆಸ್ಟ್‌ ತಂಡ ಮರಳಿ ನಂ.1 ಸ್ಥಾನವನ್ನು ಅಲಂಕರಿಸಿದೆ. ಆಸ್ಟ್ರೇಲಿಯವನ್ನು ದ್ವಿತೀಯ ಸ್ಥಾನಕ್ಕೆ ತಳ್ಳಿದೆ.

Advertisement

2019-20ನೇ ಋತುವಿನಿಂದ ಮೊದಲ್ಗೊಂಡ ಸರಣಿ ಫ‌ಲಿತಾಂಶಗಳ ಮಾನದಂಡದಂತೆ ಐಸಿಸಿ ರ್‍ಯಾಂಕಿಂಗ್‌ ಅಂಕಗಳನ್ನು ನೀಡಲಾಯಿತು. ಮೇ 2020ಕ್ಕೂ ಮೊದಲು ನಡೆದ ಸರಣಿ ಫ‌ಲಿತಾಂಶಕ್ಕೆ ಶೇ. 50ರಷ್ಟು ರೇಟಿಂಗ್‌ ಅಂಕ ನೀಡಿದರೆ, ಅನಂತರದ ಸರಣಿ ಫ‌ಲಿತಾಂಶಗಳಿಗೆ ಶೇ. 100ರಷ್ಟು ರೇಟಿಂಗ್‌ ಅಂಕವನ್ನು ನೀಡಲಾಗಿದೆ.

121ಅಂಕ
ಇದರಂತೆ ಭಾರತದ ಅಂಕ 119ರಿಂದ 121ಕ್ಕೆ ಏರಿತು. ಆಸ್ಟ್ರೇಲಿಯದ ಅಂಕ 122ರಿಂದ 116ಕ್ಕೆ ಕುಸಿಯಿತು. ಭಾರತ 2021ರ ಡಿಸೆಂಬರ್‌ನಲ್ಲಿ ಕೊನೆಯ ಸಲ ನಂ.1 ಟೆಸ್ಟ್‌ ತಂಡದ ಗೌರವ ಸಂಪಾದಿಸಿತ್ತು.

ಮೊದಲೆರಡು ಸ್ಥಾನ ಅದಲುಬದಲಾದುದನ್ನು ಹೊರತುಪಡಿಸಿದರೆ ಉಳಿದ ಯಾವುದೇ ತಂಡಗಳ ಸ್ಥಾನಪಲ್ಲಟವಾಗಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next