Advertisement

ICC Test Batting Ranking: ಕೊಹ್ಲಿಯನ್ನು ಹಿಂದಿಕ್ಕಿದ ಪಂತ್‌

11:05 PM Oct 23, 2024 | Team Udayavani |

ದುಬಾೖ: ನೂತನ ಐಸಿಸಿ ಟೆಸ್ಟ್‌ ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ರಿಷಭ್‌ ಪಂತ್‌ 6ನೇ ಸ್ಥಾನಕ್ಕೇರಿದ್ದು, ವಿರಾಟ್‌ ಕೊಹ್ಲಿ ಅವರನ್ನು ಹಿಂದಿಕ್ಕಿದ್ದಾರೆ.

Advertisement

ಬೆಂಗಳೂರು ಟೆಸ್ಟ್‌ ಪಂದ್ಯದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ರಿಷಭ್‌ ಪಂತ್‌ 99 ರನ್‌ ಬಾರಿಸಿ ಮಿಂಚಿದ್ದರು. ಇದೇ ಪಂದ್ಯದ 2ನೇ ಸರದಿಯಲ್ಲಿ 70 ರನ್‌ ಮಾಡಿದ ಕೊಹ್ಲಿ ಒಂದು ಸ್ಥಾನ ಕೆಳಕ್ಕಿಳಿದು 8ನೇ ಸ್ಥಾನಿಯಾಗಿದ್ದಾರೆ. ಆರಂಭಕಾರ ಯಶಸ್ವಿ ಜೈಸ್ವಾಲ್‌ ಭಾರತದ ಅಗ್ರ ರ್‍ಯಾಂಕ್‌ನ ಆಟಗಾರನಾಗಿದ್ದು, 4ನೇ ಸ್ಥಾನದಲ್ಲಿದ್ದಾರೆ.

ರೋಹಿತ್‌ ಶರ್ಮ 2 ಸ್ಥಾನ ಕೆಳಗಿಳಿದಿದ್ದಾರೆ. ಅವರಿಗೀಗ ದಿಮುತ್‌ ಕರುಣಾರತ್ನೆ ಜತೆ ಜಂಟಿ 15ನೇ ಸ್ಥಾನ.

 

Advertisement

Udayavani is now on Telegram. Click here to join our channel and stay updated with the latest news.

Next