ನವದೆಹಲಿ: ಟಿ-20 ವಿಶ್ವಕಪ್ ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಶ್ರೇಷ್ಠಮಟ್ಟದ ಪ್ರದರ್ಶನ ನೀಡುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಹಾರ್ದಿಕ್ ಪಾಂಡ್ಯ ಐಸಿಸಿ ಟಿ20 ಆಲ್ ರೌಂಡರ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಶ್ರೀಲಂಕಾದ ವನಿಂದು ಹಸರಂಗ ಅವರೊಂದಿಗೆ ಪಾಂಡ್ಯ 222 ರೇಟಿಂಗ್ ಅಂಕದೊಂದಿಗೆ ಜಂಟಿ ಅಗ್ರಸ್ಥಾನವನ್ನು ಪಡೆದುಕೊಂಡಿದ್ದಾರೆ.
ಆಡಿದ 8 ಪಂದ್ಯದಲ್ಲಿ ಪಾಂಡ್ಯ ಒಟ್ಟು 11 ವಿಕೆಟ್ ಪಡೆದುಕೊಂಡಿದ್ದರು. ವಿಶೇಷವಾಗಿ ಸೋಲುವ ಹಂತದಲ್ಲಿ ಫೈನಲ್ ಪಂದ್ಯದಲ್ಲಿ ಅಪಾಯಕಾರಿ ಕ್ಲಾಸೆನ್ ಹಾಗೂ ಮಿಲ್ಲರ್ ಅವರ ವಿಕೆಟ್ ಪಡೆದುಕೊಂಡಿದ್ದರು. ಫೈನಲ್ ನಲ್ಲಿ ಅವರು 20 ರನ್ ಕೊಟ್ಟು 3 ಪ್ರಾಮುಖ್ಯ ವಿಕೆಟ್ ನ್ನು ಪಡೆದುಕೊಂಡಿದ್ದರು.
8 ಪಂದ್ಯಗಳಲ್ಲಿ ಅವರು ಆರು ಇನ್ನಿಂಗ್ಸ್‌ಗಳಲ್ಲಿ 151.57 ಸ್ಟ್ರೈಕ್ ರೇಟ್‌ನಲ್ಲಿ 144 ರನ್ ಗಳಿಸಿದ್ದರು. ಇದರಲ್ಲಿ ಅರ್ಧ ಶತಕವೂ ಸೇರಿದೆ.
ಇನ್ನೊಂದೆಡೆ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಟ್ರಾವಿಸ್ ಹೆಡ್ ಟಾಪ್ 1 ನಲ್ಲಿದ್ದರೆ, ಸೂರ್ಯಕುಮಾರ್ ನಂ-2 ನಲ್ಲೇ ಮುಂದುವರೆದಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ 7ನೇ ಸ್ಥಾನದಿಂದ 2ನೇ ಸ್ಥಾನಕ್ಕೇರುವ ಮೂಲಕ ಕೆರಿಯರ್ ಬೆಸ್ಟ್ ಸಾಧನೆ ಮಾಡಿದ್ದಾರೆ. ಇಂಗ್ಲೆಂಡ್ ನ ಆದಿಲ್ ರಶೀದ್ 675 ರೇಟಿಂಗ್ ಅಂಕಗಳೊಂದಿಗೆ ನಂ.1 ಸ್ಥಾನದಲ್ಲಿದ್ದಾರೆ.
ಅಕ್ಷರ್ ಪಟೇಲ್ 7ನೇ, ಕುಲ್ದೀಪ್ ಯಾದವ್ 8ನೇ ಸ್ಥಾನ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ 12ನೇ ಸ್ಥಾನದಲ್ಲಿದ್ದಾರೆ.