ಬ್ರಿಜ್ ಟೌನ್: ಐಸಿಸಿ ಟಿ20 ವಿಶ್ವಕಪ್ 2024ರ ಅಂತಿಮ ಹಣಾಹಣಿಗೆ ಬಾರ್ಬಡೋಸ್ ನ ಕೆನ್ನಿಂಗ್ಸ್ಟನ್ ಓವಲ್ ಸಿದ್ದವಾಗಿದೆ. 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆಲ್ಲುವ ಕನಸಿನಲ್ಲಿರುವ ಟೀಂ ಇಂಡಿಯಾ ಒಂದೆಡೆಯಾದರೆ, ಮೊದಲ ಬಾರಿಗೆ ವಿಶ್ವಕಪ್ ಫೈನಲ್ ತಲುಪಿರುವ ದಕ್ಷಿಣ ಆಫ್ರಿಕಾ ಮತ್ತೊಂದೆಡೆಯಿದೆ. ರೋಹಿತ್ ಶರ್ಮಾ ಮತ್ತು ಐಡನ್ ಮಾರ್ಕ್ರಮ್ ಪಡೆಗಳು ಫೈನಲ್ ಪಂದ್ಯದಲ್ಲಿ ಟ್ರೋಫಿಗಾಗಿ ಮುಖಾಮುಖಿಯಾಗುತ್ತಿದೆ.
ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಆಯೋಜನೆ ಮಾಡಿದ ಟಿ20 ವಿಶ್ವಕಪ್ ಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಭಾರಿ ಮೊತ್ತದ ಬಹುಮಾನ ಘೋಷಣೆ ಮಾಡಿದೆ. ಒಟ್ಟು 11.25 ಮಿಲಿಯನ್ ಯುಸ್ ಡಾಲರ್ ಮೊತ್ತದ ಹಣವನ್ನು ಐಸಿಸಿ ಬಹುಮಾನ ರೂಪದಲ್ಲಿ ಹಂಚಲಿದೆ.
ಈ ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ತಂಡವು $ 2.45 ಮಿಲಿಯನ್ ಯುಎಸ್ ಡಿ (20,42,49,000 ರೂ) ಪಡೆಯಲಿದೆ. ಇದು ಪಂದ್ಯಾವಳಿಯ ಇತಿಹಾಸದಲ್ಲಿ ಇದುವರೆಗೆ ನೀಡಲಾದ ಅತ್ಯಧಿಕ ಮೊತ್ತವಾಗಿದೆ. ರನ್ನರ್ ಅಪ್ ತಂಡಕ್ಕೆ 1,280,000 USD (10,68,06,400 ರೂ.) ಹಣ ಬಹುಮಾನ ರೂಪದಲ್ಲಿ ದೊರೆಯಲಿದೆ.
ಭಾಗವಹಿಸಿದ ಎಲ್ಲಾ ತಂಡಗಳಿಗೆ ಬಹುಮಾನ ಮೊತ್ತ ಸಿಗಲಿದೆ. ಅದರ ವಿವರ ಇಲ್ಲಿದೆ.
ವಿಜೇತರು: ₹20,42,49,000
ರನ್ನರ್ಸ್ ಅಪ್; ₹10,68,06,400
ಸೋತ ಸೆಮಿ-ಫೈನಲಿಸ್ಟ್‌ಗಳು: ₹6,58,07,250
2ನೇ ಸುತ್ತಿನಲ್ಲಿ ಸೋತ ತಂಡಗಳು ₹ 3,19,50,750
9 ರಿಂದ 12 ನೇ ಸ್ಥಾನ: ₹ 2,06,90,250
13 ರಿಂದ 20ನೇ ಸ್ಥಾನ; ₹1,87,65,000