Advertisement

ಏಕದಿನ ಬ್ಯಾಟಿಂಗ್‌ ಶ್ರೇಯಾಂಕ: ಮಿಥಾಲಿ ವಿಶ್ವ ನಂ.1

09:31 PM Sep 21, 2021 | Team Udayavani |

ದುಬೈ: ಮಂಗಳವಾರ ಪರಿಷ್ಕರಿಸಲಾದ ಮಹಿಳಾ ಏಕದಿನ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ಭಾರತ ತಂಡದ ನಾಯಕಿ ಮಿಥಾಲಿ ರಾಜ್‌ ಏಕಾಂಗಿಯಾಗಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಕಳೆದ ಬಾರಿ ಶ್ರೇಯಾಂಕ ಬಿಡುಗಡೆಯಾಗಿದ್ದಾಗ ಅವರೊಂದಿಗೆ ದಕ್ಷಿಣ ಆಫ್ರಿಕಾದ ಲಿಜೆಲ್‌ ಲೀ ಕೂಡ ಇದ್ದರು. ಲೀ ಈಗ ದ್ವಿತೀಯಸ್ಥಾನಕ್ಕೆ ಕುಸಿದಿದ್ದಾರೆ. ಅವರು ವೆಸ್ಟ್‌ ಇಂಡೀಸ್‌ ಎದುರಿನ ಕೊನೆಯ 2 ಏಕದಿನ ಪಂದ್ಯಗಳಿಂದ ಹೊರಗುಳಿದಿದ್ದರು. ಆದರೆ ಮಿಥಾಲಿ (762) ಮತ್ತು ಲೀ (761) ನಡುವೆ ಇರುವುದು ಒಂದೇ ಅಂಕದ ವ್ಯತ್ಯಾಸ.

ಆಸ್ಟ್ರೇಲಿಯ ಎದುರಿನ ಮೊದಲ ಏಕದಿನ ಪಂದ್ಯದಲ್ಲಿ ಅರ್ಧ ಶತಕ ಬಾರಿಸಿರುವ ಮಿಥಾಲಿ, ಸರಣಿಯ ಉಳಿದ ಪಂದ್ಯಗಳಲ್ಲೂ ಇದೇ ಫಾರ್ಮ್ ಮುಂದುವರಿಸಿದರೆ ಈ ಅಂತರವನ್ನು ವಿಸ್ತರಿಸಬಹುದಾಗಿದೆ. ಇಂಗ್ಲೆಂಡಿನ ನಾಯಕಿ ಹೆದರ್‌ ನೈಟ್‌ ಅಗ್ರ-10ರ ಪಟ್ಟಿಗೆಮರಳಿದ್ದಾರೆ. ಅವರದು 5 ಸ್ಥಾನಗಳ ಪ್ರಗತಿ. ಈಗ 9ರಲ್ಲಿದ್ದಾರೆ.

ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಇಂಗ್ಲೆಂಡಿನ ಸೋಫಿ ಎಕ್‌Éಸ್ಟೋನ್‌ (6) ಮತ್ತು ಕ್ಯಾಥರಿನ್‌ ಬ್ರಂಟ್‌ (7) ಒಂದೊಂದು ಸ್ಥಾನ ಮೇಲೇರಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next