ದುಬಾೖ: ನ್ಯೂಜಿಲ್ಯಾಂಡ್ ವಿರುದ್ಧ ಏಕದಿನ ಸರಣಿಯನ್ನು ಕ್ಲೀನ್‌ಸಿÌàಪ್ ಆಗಿ ವಶಪಡಿಸಿಕೊಂಡು ನಂಬರ್ ವನ್ ಆದ ಬೆನ್ನಲ್ಲೇ ಟೀಮ್ ಇಂಡಿಯಾದಿಂದ ಇನ್ನೊಂದು ಸಿಹಿ ಸಿದ್ದಿ ಕೇಳಿಬಂದಿದೆ. ಈ ಸರಣಿಯಲ್ಲಿ ಮಿಂಚಿದ ಪೇಸ್ ಬೌಲರ್ ಮೊಹಮ್ಮದ್ ಸಿರಾಜ್ ಏಕದಿನ ಕ್ರಿಕೆಟ್‌ನ ನಂಬರ್ ವನ್ ಬೌಲರ್ ಆಗಿ ಮೂಡಿಬಂದಿದ್ದಾರೆ. ಅವರು ಈ ಎತ್ತರ ತಲುಪಿದ್ದು ಇದೇ ಮೊದಲು.
ಜಸ್‌ಪ್ರೀತ್ ಬುಮ್ರಾ ಗೈರಲ್ಲಿ ಭಾರತ ತಂಡದ ಪ್ರಧಾನ ಬೌಲರ್ ಆಗಿ ಯಶಸ್ಸು ಸಾಧಿಸುತ್ತಿರುವ ಮೊಹಮ್ಮದ್ ಸಿರಾಜ್ ಇತ್ತೀಚೆಗೆ ಉಜ್ವಲ ಫಾರ್ಮ್ ತೋರ್ಪಡಿಸುತ್ತಿದ್ದಾರೆ. ಶ್ರೀಲಂಕಾ ಹಾಗೂ ನ್ಯೂಜಿಲ್ಯಾಂಡ್ ಎದುರಿನ ಸತತ 2 ಪಂದ್ಯಗಳಲ್ಲಿ 4 ವಿಕೆಟ್ ಕಿತ್ತ ಹಿರಿಮೆ ಸಿರಾಜ್ ಅವರದು. ಶ್ರೀಲಂಕಾ ವಿರುದ್ಧ ಒಟ್ಟು 9 ವಿಕೆಟ್, ನ್ಯೂಜಿಲ್ಯಾಂಡ್ ಎದುರಿನ 2 ಪಂದ್ಯಗಳಲ್ಲಿ 5 ವಿಕೆಟ್ ಕೆಡವಿದ್ದರು.
2022ರ ಐಸಿಸಿ ಏಕದಿನ ತಂಡದಲ್ಲಿ ಕಾಣಿಸಿಕೊಂಡ ಭಾರತದ ಕೇವಲ ಇಬ್ಬರು ಆಟಗಾರರಲ್ಲಿ ಮೊಹಮ್ಮದ್ ಸಿರಾಜ್ ಕೂಡ ಒಬ್ಬರೆಂಬುದು ಉಲ್ಲೇಖನೀಯ.
ಮೊಹಮ್ಮದ್ ಸಿರಾಜ್ 3ನೇ ಸ್ಥಾನದಿಂದ ಅಗ್ರಸ್ಥಾನಕ್ಕೆ ನೆಗೆದರು. ಅವರು 729 ಅಂಕ ಹೊಂದಿದ್ದಾರೆ. ಜೋಶ್ ಹೇಝಲ್‌ವುಡ್ ದ್ವಿತೀಯ (727), ಟ್ರೆಂಟ್ ಬೌಲ್ಟ್ (708) ತೃತೀಯ ಸ್ಥಾನದಲ್ಲಿದ್ದಾರೆ. ಸಿರಾಜ್ ಟಾಪ್-10 ಯಾದಿಯಲ್ಲಿರುವ ಭಾರತದ ಏಕೈಕ ಬೌಲರ್ ಎಂಬುದು ಉಲ್ಲೇಖನೀಯ.
Related Articles
ಆರಕ್ಕೇರಿದ ಗಿಲ್
ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್‌ನಲ್ಲಿ ಟೀಮ್ ಇಂಡಿಯಾದ ಭರವಸೆಯ ಓಪನರ್ ಶುಭ ಮನ್ ಗಿಲ್ 6ನೇ ಸ್ಥಾನಕ್ಕೆ ಏರಿದ್ದಾರೆ. ಅವರು ಟಾಪ್-10 ಯಾದಿಯಲ್ಲಿ ಕಾಣಿಸಿ ಕೊಳ್ಳುತ್ತಿರು ವುದು ಇದೇ ಮೊದಲು.ಗಿಲ್ ಅವರದು ಒಮ್ಮೆಲೇ 20 ಸ್ಥಾನಗಳ ನೆಗೆತವಾಗಿದೆ. ನ್ಯೂಜಿಲ್ಯಾಂಡ್ ಎದುರಿನ ಸರಣಿಯಲ್ಲಿ ಒಂದುದ್ವಿಶತಕ, ಒಂದು ಶತಕ ಸೇರಿದಂತೆ 360 ರನ್ ಪೇರಿಸಿದ ಹೆಗ್ಗಳಿಕೆ ಈ ಪಂಜಾಬ್ ಆರಂಭಕಾರನದು. ಇದೇ ವೇಳೆ ನಾಯಕ ರೋಹಿತ್ ಶರ್ಮ 2 ಸ್ಥಾನಗಳ ಪ್ರಗತಿಯೊಂದಿಗೆ 9ನೇ ಸ್ಥಾನಕ್ಕೆ ಬಂದಿದ್ದಾರೆ. ವಿರಾಟ್ ಕೊಹ್ಲಿ 7ಕ್ಕೆ ಇಳಿದಿದ್ದಾರೆ. ಪಾಕಿಸ್ಥಾನದ ನಾಯಕ ಬಾಬರ್ ಆಜಂ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.