Advertisement

ಐಸಿಸಿ ವರ್ಷದ ಟಿ20 ತಂಡ ಪ್ರಕಟ: ಮೂವರು ಭಾರತೀಯರಿಗೆ ಸ್ಥಾನ

05:16 PM Jan 23, 2023 | Team Udayavani |

ದುಬೈ: 2022ರ ಸಾಲಿನ ಐಸಿಸಿ ವರ್ಷದ ಟಿ20 ತಂಡ ಪ್ರಕಟವಾಗಿದ್ದು, ಮೂವರು ಭಾರತೀಯರು ಸ್ಥಾನ ಪಡೆದಿದ್ದಾರೆ. ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ನ ನಾಯಕ ಜೋಸ್ ಬಟ್ಲರ್ ಅವರು ಐಸಿಸಿ ವರ್ಷದ ತಂಡದಲ್ಲಿ ನಾಯಕರಾಗಿ ನೇಮಕವಾಗಿದ್ದಾರೆ.

Advertisement

ಭಾರತೀಯರಾದ ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರು ವರ್ಷದ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಉಳಿದಂತೆ ಪಾಕಿಸ್ಥಾನದ ಮೊಹಮ್ಮದ್ ರಿಜ್ವಾನ್, ನ್ಯೂಜಿಲ್ಯಾಂಡ್ ನ ಗ್ಲೆನ್ ಫಿಲಿಪ್ಸ್ , ಜಿಂಬಾಬ್ವೆಯ ಸಿಕಂದರ್ ರಜಾ, ಸ್ಯಾಮ್ ಕರ್ರನ್, ಶ್ರಿಲಂಕಾದ ವಾನಿಂದು ಹಸರಂಗಾ, ಪಾಕಿಸ್ಥಾನದ ಹ್ಯಾರಿಸ್ ರವುಫ್ ಮತ್ತು ಐರ್ಲೆಂಡ್ ನ ಜೋಶುವಾ ಲಿಟಲ್ ಸ್ಥಾನ ಪಡೆದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next