ಆಡಿಲೇಡ್ : ಟಿ20 ವಿಶ್ವಕಪ್ನ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ ಪಟ್ಟ ಭಾರತ ತಂಡ ಇಂಗ್ಲೆಂಡ್ ಗೆ ಗೆಲ್ಲಲು 169 ರನ್ ಗಳ ಗುರಿ ನೀಡಿದೆ.
ಕೆಎಲ್ ರಾಹುಲ್ 5 ರನ್ ಗಳಿಸಿ ಔಟಾದರು. ನಾಯಕ ರೋಹಿತ್ ಶರ್ಮಾ 28 ಎಸೆತಗಳಲ್ಲಿ 27 ರನ್ ಗಳಿಸಿದರು. ಭರವಸೆಯ ಆಟಗಾರ ವಿರಾಟ್ ಕೊಹ್ಲಿ 40 ಎಸೆತಗಳಲ್ಲಿ 50 ರನ್ ಗಳಿಸಿ ಔಟಾದರು. ಸೂರ್ಯಕುಮಾರ್ ಯಾದವ್ 14 ರನ್ ಗಳಿಸಿದರು.
ಸ್ಪೋಟಕ ಆಟವಾಡಿದ ಹಾರ್ದಿಕ್ ಪಾಂಡ್ಯ 33 ಎಸೆತಗಳಲ್ಲಿ 63 ರನ್ ಕೊಡುಗೆ ಸಲ್ಲಿಸಿದರು. 4 ಬೌಂಡರಿ ಮತ್ತು 5 ಸಿಕ್ಸರ್ ಗಳನ್ನು ಸಿಡಿಸಿ ತಂಡದ ಉತ್ತಮ ಮೊತ್ತಕ್ಕೆ ಕಾರಣವಾದರು. ಕೊನೆಯ ಎಸೆತದಲ್ಲಿ ಹಿಟ್ ವಿಕೆಟ್ ಆದರೂ. ರಿಷಭ್ ಪಂತ್ 6 ರನ್ ಗಳಿಸಿದ್ದ ವೇಳೆ ರನ್ ಔಟಾದರು. 6 ವಿಕೆಟ್ ನಷ್ಟಕ್ಕೆ 168 ರನ್ ಕಲೆ ಹಾಕುವಲ್ಲಿ ಕೊಹ್ಲಿ ಮತ್ತು ಪಾಂಡ್ಯ ಪ್ರಮುಖ ಪಾತ್ರ ವಹಿಸಿದರು.
ಇಂಗ್ಲೆಂಡ್ ಪರ ಕ್ರಿಸ್ ಜೋರ್ಡಾನ್ 3 ವಿಕೆಟ್, ಆದಿಲ್ ರಶೀದ್ 4ಓವರ್ ಗಳಲ್ಲಿ ಕೇವಲ 20 ರನ್ ನೀಡಿ 1 ವಿಕೆಟ್ ಪಡೆದರು. ಕ್ರಿಸ್ ವೋಕ್ಸ್ 1 ವಿಕೆಟ್ ಪಡೆದರು.