Advertisement

ಬದಲಾದ ಐಸಿಸಿ ನಿಯಮದೊಂದಿಗೆ ಟಿ20 ವಿಶ್ವಕಪ್‌

11:45 PM Sep 20, 2022 | Team Udayavani |

ದುಬಾೖ: ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ತನ್ನ ನಿಯಮದಲ್ಲಿ ಬಹಳಷ್ಟು ಬದ ಲಾವಣೆ ಮಾಡಿದೆ. ಸುಮಾರು 8 ನಿಯಮ ಗಳಲ್ಲಿ ಪರಿ ವರ್ತನೆಯಾಗಿದೆ. ಅಕ್ಟೋಬರ್‌ ಒಂದರಿಂದ ಇವು ಜಾರಿಗೆ ಬರಲಿದ್ದು, ಬದಲಾದ ನಿಯಮ ಗಳೊಂದಿಗೆ ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಆಡಲಾಗುವುದು.

Advertisement

ನೂತನ ಬ್ಯಾಟ್ಸ್‌ಮನ್‌ಗೆ ಸ್ಟ್ರೈಕ್‌ :

ಆಟಗಾರನೊಬ್ಬ ಕ್ಯಾಚ್‌ ಔಟ್‌  ಆದಾಗ ಕ್ರೀಸಿಗೆ ಬರುವ ಹೊಸ ಆಟ ಗಾರನೇ ಸ್ಟ್ರೈಕ್‌ ತೆಗೆದುಕೊಳ್ಳಬೇಕು. ಹಿಂದೆ ನಾನ್‌ ಸ್ಟ್ರೈಕಿಂಗ್‌ ತುದಿಯಲ್ಲಿದ್ದ ಆಟ ಗಾರ ಅರ್ಧ ಪಿಚ್‌ ದಾಟಿದ್ದರೆ ಸ್ಟ್ರೈಕ್‌ ತೆಗೆದು ಕೊಳ್ಳಬಹುದಿತ್ತು.

ಪಿಚ್‌ನಲ್ಲಿದ್ದೇ ಶಾಟ್‌ ಬಾರಿಸಬೇಕು :

ಬ್ಯಾಟರ್‌ ಪಿಚ್‌ ಒಳಗಿರುವಾಗಲೇ ಶಾಟ್‌ ಬಾರಿಸಬೇಕು. ದೇಹವು ಪಿಚ್‌ನಿಂದ ಹೊರಹೋದರೆ ಆಗ ಗಳಿಸುವ ರನ್‌ಗಣನೆಗೆ ಬಾರದು. ಆ ಚೆಂಡು ಡೆಡ್‌ ಬಾಲ್‌. ಅರ್ಥಾತ್‌, ಪಿಚ್‌ ನಿಂದ ಹೊರಹೋದ ಚೆಂಡನ್ನು ಬಾರಿಸಲು ಇನ್ನು ಅವಕಾಶವಿರದು.

Advertisement

ಆಚೀಚೆ ಹೋಗುವಂತಿಲ್ಲ :

ಬೌಲರ್‌ ರನ್‌ಅಪ್‌ ಆರಂಭಿಸಿದ ಮೇಲೆ ಫೀಲ್ಡರ್‌ ತನ್ನ ಸ್ಥಾನದಿಂದ ಆಚೀಚೆ ಹೋಗುವಂತಿಲ್ಲ. ಆಗ ಅಂಪಾಯರ್‌ ಆ ತಂಡಕ್ಕೆ 5 ರನ್‌ ದಂಡ ವಿಧಿಸುತ್ತಾರೆ. ಈ ರನ್‌ ಎದುರಾಳಿ ತಂಡಕ್ಕೆ ಸೇರುತ್ತದೆ. ಹಿಂದೆ ಆ ಎಸೆತ ಡೆಡ್‌ ಬಾಲ್‌ ಆಗುತ್ತಿತ್ತು.

ಎರಡೇ ನಿಮಿಷಗಳ ಅವಕಾಶ :

ಟೆಸ್ಟ್‌ ಹಾಗೂ ಏಕದಿನ ಪಂದ್ಯಗಳ ವೇಳೆ ಓರ್ವ ಆಟಗಾರ ಔಟಾದ 2 ನಿಮಿಷಗಳಲ್ಲಿ ನೂತನ ಆಟಗಾರ ಕ್ರೀಸ್‌ ಇಳಿಯಬೇಕು. ಟಿ20 ಪಂದ್ಯಗಳಲ್ಲಿ ಒಂದೂವರೆ ನಿಮಿಷ. ಇಷ್ಟರೊಳಗೆ ಹೊಸ ಆಟಗಾರ ಕ್ರೀಸ್‌ಗೆ ಬಾರದಿದ್ದರೆ ಆತನನ್ನು ಔಟ್‌ ಆಗಲಿದ್ದಾನೆ.

ಎಂಜಲು ಬಳಸುವಂತಿಲ್ಲ :

ಕೊರೊನಾ ಸಮಯದಲ್ಲಿ ಜಾರಿಗೆ ತಂದ, ಚೆಂಡಿಗೆ ಎಂಜಲು ಬಳಕೆ ನಿಷೇಧವನ್ನು ಮುಂದುವರಿಸಲಾಗಿದೆ.

ಮಂಕಡ್‌ ಔಟ್‌ ಇಲ್ಲ :

ಬೌಲರ್‌ ಪಂದ್ಯದಲ್ಲಿ ಚೆಂಡನ್ನೆಸೆಯುವ ಮೊದಲೇ ನಾನ್‌ ಸ್ಟ್ರೈಕಿಂಗ್‌ನಲ್ಲಿರುವ ಆಟಗಾರ ಕ್ರೀಸ್‌ ಬಿಟ್ಟರೆ, ಅದಿನ್ನು “ಮಂಕಡ್‌ ಔಟ್‌’ ಎನಿಸದು. ಇದನ್ನು ಕೂಡ ರನೌಟ್‌ ಎಂದೇ ಇನ್ನು ಮುಂದೆ ಎಲ್ಲ ಪಂದ್ಯಗಳಲ್ಲೂ ಪರಿಗಣಿಸಲಾಗುವುದು.

ಓವರ್‌ಗೆ ನಿಗದಿತ ಸಮಯ :

ತಂಡವೊಂದು ನಿಗದಿತ ಸಮಯದಲ್ಲಿ ಓವರ್‌ಗಳನ್ನು ಮುಗಿಸಬೇಕು. ತಪ್ಪಿ ದರೆ ವಿಳಂಬವಾದ ಉಳಿದ ಓವರ್‌ಗಳವೇಳೆ ಫೀಲ್ಡಿಂಗ್‌ ತಂಡ ಬೌಂಡರಿ ಲೈನ್‌ನಲ್ಲಿದ್ದ ಓರ್ವ ಕ್ಷೇತ್ರರಕ್ಷಕನನ್ನು 30 ಯಾರ್ಡ್‌ ಸರ್ಕಲ್‌ ಒಳಗೆ ನಿಲ್ಲಿಸಬೇಕು. ಟಿ20ಯಲ್ಲಿ ಜಾರಿಯಲ್ಲಿದೆ.

 

ಸ್ಟ್ರೈಕರ್‌ ರನೌಟ್‌ ನಿಯಮ : 

ಬೌಲಿಂಗ್‌ ಮಾಡುವ ಮೊದಲೇ ಬ್ಯಾಟರ್‌ ಕ್ರೀಸ್‌ ಬಿಟ್ಟು ಮುಂದೆ ಬಂದರೆ, ಬೌಲಿಂಗ್‌ ಮಾಡದೆ ಚೆಂಡನ್ನು ಸ್ಟಂಪ್‌ಗೆ ಎಸೆದು ಅಥವಾ ಕೀಪರ್‌ಗೆ ನೀಡಿ ರನೌಟ್‌ ಮಾಡುವ ಅವಕಾಶ ಇರದು. ಬದಲಾಗಿ ಆ ಎಸೆತ ಡೆಡ್‌ ಬಾಲ್‌ ಎನಿಸಿಕೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next